ಸಮಾಜದ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿದವರು ಕನಕದಾಸರು-ಲೋಹಿತ್ ಕಟ್ಟಿ

0
98

ಶಹಾಬಾದ:ವೈಚಾರಿಕ ಚಿಂತನೆಗಳ ಮೂಲಕ ಸಮಾಜದಲ್ಲಿದ್ದ ಮೇಲು-ಕೀಳು ಮತ್ತು ಜಾತಿ- ಮತಗಳಂಥ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿದವರು ಕನಕದಾಸರು ಎಂದು ಸಾಮಾಜಿಕ ಚಿಂತಕ ಲೋಹಿತ್ ಕಟ್ಟಿ ಹೇಳಿದರು.

ಅವರು ಗುರುವಾರ ನಗರದ ಕನ್ನಡ ಭವನದಲ್ಲಿ ಕಸಾಪ ಹಾಗೂ ಕನಕ ಜಾಗೃತಿ ಸಮಿತಿ ವತಿಯಿಂದ ಆಯೋಜಿಸಲಾದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ದಾಸರಲ್ಲೇ ಶ್ರೇಷ್ಠ ದಾಸರೆಂದು ಎನಿಸಿಕೊಂಡವರು ಕನಕದಾಸರು.ಆದರೆ ಇಂದು ಒಂದು ಸಮುದಾಯ ಎಲ್ಲಾ ದಾಸರ ಆರಾಧನೆ ಮಾಡಿದರೇ, ಕನಕದಾಸರ ಆರಾಧನೆ ಇಂದಿಗೂ ಮಾಡದೇ ಇರುವುದು ಮಾತ್ರ ದುರಂತ. ಕನಕದಾಸರನ್ನು ಒಂದು ಅಸ್ಪೃಶ್ಯ ಜಾತಿಯವ ಎಂದು ತಿಳಿದು ಆರಾಧನೆ ಮಾಡದಿರುವುದು ನೋಡಿದರೇ, ಇನ್ನೂ ಜಾತೀಯತೆ ಜೀವಂತವಾಗಿರುವುದಕ್ಕೆ ಇದೊಂದೇ ನಿದರ್ಶನ ಸಾಕು.
ಜಾತೀಯತೆ ಮತ್ತು ಗೊಡ್ಡು ಸಂಪ್ರದಾಯಗಳ ವಿರುದ್ಧ ಹೋರಾಟ ನಡೆಸಿ ವೈಚಾರಿಕತೆ , ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದರೋ,ಅವರನ್ನು ಒಂದು ಜಾತಿಗೆ ಸಿಮೀತ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಸಂಗೊಳ್ಳಿ ರಾಯಣ್ಣ ಜಿಲ್ಲಾಧ್ಯಕ್ಷ ಬಸವರಾಜ ಮದ್ರಕಿ ಮಾತನಾಡಿ, ಸಮಾಜದಲ್ಲಿರುವ ಮೂಢನಂಬಿಕೆಗಳನ್ನು ತೊಲಗಿಸಲು ತಮ್ಮ ಕೀರ್ತನೆಗಳ ಮೂಲಕ ಜನರಿಗೆ ಜಾಗೃತಿ ಮೂಡಿಸಿದರು.ದಾಸ ಸಾಹಿತ್ಯ ಮೂಲಕ ಸಮಾಜದ ಓರೆ ಕೋರೆಗಳನ್ನು ತಿದ್ದುವ ಮೂಲಕ ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಅವಿರತವಾಗಿ ಶ್ರಮಿಸಿದ ಮಹಾನ್ ಚಿಂತಕ ಕನಕದಾಸರಾಗಿದ್ದರು ಎಂದು ಹೇಳಿದರು.

ಕಸಾಪ ಕಲಬುರಗಿ ಗ್ರಾಮೀಣ ಅಧ್ಯಕ್ಷ ಶರಣಗೌಡ ಪಾಟೀಲ, ಕಸಾಪ ನಗರ ಅಧ್ಯಕ್ಷ ಮಲ್ಲಿಕಾರ್ಜುನ ಪಟ್ಟಣಕರ್, ಕಸಾಪ ಕಲಬುರಗಿ ಗ್ರಾಮೀಣ ಗೌರಾವಾಧ್ಯಕ್ಷ ಬಸವರಾಜ ಮಯೂರ, ಕರ್ನಾಟಕ ಪ್ರದೇಶ ಕುರುಬರ ಸಂಘದ ತಾಲೂಕಾಧ್ಯಕ್ಷ ಮಲಕಣ್ಣಾ ಮುದ್ದಾ, ಹಿರಿಯ ಮುಖಂಡ ಮರಲಿಂಗ ಕಮರಡಗಿ,ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಈರಣ್ಣ ಕೆಂಭಾವಿ,ಚನ್ನಬಸಪ್ಪ ಕೊಲ್ಲೂರ್,ರಂಗಣ್ಣ ಪೂಜಾರಿ, ಸಂತೋಷ ದೊಡ್ಡಮನಿ, ಅರುಣ ಜಾಯಿ,ರಾಯಣ್ಣ ಪೂಜಾರಿ, ಅಶೋಕ ಮೊಸಲಗಿ, ಯಲ್ಲಾಲಿಂಗ ಕರಗಾರ್, ಶಾಂತಪ್ಪ ಪೂಜಾರಿ, ಧನವಂತ ಮುದಿಗೌಡ, ಮರಲಿಂಗ ಪೂಜಾರಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here