ಸಂಘಗಳು ಅಭಿವೃದ್ಧಿ ಹೊಂದಬೇಕಾದರೆ ಪಾರದರ್ಶಕತೆ ಹಾಗೂ ಪ್ರಾಮಾಣಿಕತೆ ಮುಖ್ಯ- ಸಿದ್ಧಲಿಂಗ ಸ್ವಾಮಿಗಳು

0
90

ಶಹಾಬಾದ:ಯಾವುದೇ ಪತ್ತಿನ ಸಹಕಾರ ಸಂಘಗಳು ಅಭಿವೃದ್ಧಿ ಹೊಂದಬೇಕಾದರೆ, ಆ ಸಂಘದಲ್ಲಿ ಪಾರದರ್ಶಕತೆ ಹಾಗೂ ಪ್ರಾಮಾಣಿಕತೆ ಪ್ರಾಮುಖ್ಯತೆ ವಹಿಸುತ್ತದೆ ಎಂದು ಮುಗುಳನಾಗಾವನ ಸಿದ್ಧಲಿಂಗ ಸ್ವಾಮಿಗಳು ಹೇಳಿದರು.

ಅವರು ಶನಿವಾರ ನಗರದ ಭೋವಿ ವಡ್ಡರ್ ಸಮಾಜದ ವತಿಯಿಂದ ಆಯೋಜಿಸಲಾದ ಸಿದ್ಧರಾಮೇಶ್ವರ ಪರಿಶಿಷ್ಟ ಜಾತಿ ಪತ್ತಿನ ಸಹಕಾರ ಸಂಘದ ಉದ್ಘಾಟನೆಯನ್ನು ನೇರವೇರಿಸಿ ಮಾತನಾಡಿದರು.

Contact Your\'s Advertisement; 9902492681

ಹನ್ನೇರಡನೇ ಶತಮಾನದ ಶರಣ ಸಿದ್ಧರಾಮೇಶ್ವರರ ಹೆಸರಿನಲ್ಲಿ ಪ್ರಾರಂಭ ಮಾಡುತ್ತಿರುವ ಪತ್ತಿನ ಸಹಕಾರ ಸಂಘ ಸಿದ್ಧರಾಮೇಶ್ವರರ ಹಾಗೇ ಕಾಯಕ ನಿಷ್ಠೆಯಿಂದಲೇ ಕೂಡಿರಬೇಕು.ಎಲ್ಲಾ ಮನಸ್ಸುಗಳು ಒಂದಾಗಿರಬೇಕು.ಎಲ್ಲರೂ ಮುಂದಾಳತ್ವ ವಹಿಸಿದವರಿಗೆ ಸಹಕಾರ ನೀಡಿದಾಗ ಮಾತ್ರ ಸಂಘದ ಬೆಳವಣಿಗೆ ಪರಿಪೂರ್ಣವಾಗಿ ಸಾಗುತ್ತದೆ ಎಂದರಲ್ಲದೇ, ಸಂಘದಲ್ಲಿ ರಾಜಕೀಯ ತರದೇ, ಬಡ, ನಿರ್ಗತಿಕರಿಗೆ ಸಹಾಯ ಮಾಡುವ ಮೂಲಕ ಅವರನ್ನು ಸ್ವಾಲಂಬಿಗಳಾಗುವಲ್ಲಿ ನಿಮ್ಮ ನೆರವು ಎಂದಿಗೂ ಇರಲಿ ಎಂದು ಹೇಳಿದರು.

ಸಹಕಾರಿ ಸಂಘದ ಸಹಾಯಕ ಪ್ರಬಂಧಕ ರವೀಂದ್ರ ಮಾತನಾಡಿ, ಬಹಳಷ್ಟು ಸಹಕಾರಿ ಸಂಘಗಳು ಹುಟ್ಟಿವೆ.ಅಷ್ಟೇ ವೇಗವಾಗಿ ಮುಚ್ಚಿರುವುದು ನಾವು ಕಂಡಿದ್ದೆವೆ.ಕಾರಣ ಆಡಳಿತಮಂಡಳಿಯಲ್ಲಿ ಹೊಂದಾಣಿಕೆ ಇಲ್ಲದಿರುವುದು.ಆದ್ದರಿಂದ ಎಲ್ಲರೂ ಒಂದಾಗಿ ಸಂಘದ ಬೆಳವಣಿಗೆಗೆ ಶ್ರಮಿಸಿದರೇ, ಮುಂದೆ ಸಂಘ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಸಾಧಿಸುತ್ತದೆ ಎಂದರು.

ಚಿಂಚೋಳಿ ಸಿಡಿಪಿಓ ಅಣ್ಣಪ್ಪ ವೇದಿಕೆಯ ಮೇಲಿದ್ದರು. ಭೋವಿ ವಡ್ಡರ್ ಸಮಾಜದ ಉಪಾಧ್ಯಕ್ಷ ಅನೀಲ ಭೋರಗಾಂವಕರ್ ಅಧ್ಯಕ್ಷತೆ ವಹಿಸಿದ್ದರು.

ದೇವದಾಸ ಜಾಧವ ನಿರೂಪಿಸಿದರು,ಹಣಮಂತ ಪವಾರ ಸ್ವಾಗತಿಸಿದರು, ಸಂಜಯ್ ವಿಠಕರ್ ವಂದಿಸಿದರು.

ಭಗವಾನ ದಂಡಗುಲಕರ್,ಅಂಬುಬಾಯಿ ಶಂಕರ ದೇಸಾಯಿ,ವೆಂಕಟೇಶ ಕುಸಾಳೆ, ಸುಭಾಷ ಜಾಪೂರ, ಬಸವರಾಜ ಬಿರಾದಾರ, ಬಸವರಾಜ ಮದ್ರಕಿ, ನಾಗರಾಜ ಮೇಲಗಿರಿ ಪವಾರ,ಕನಕಪ್ಪ ದಂಡಗುಲಕರ್,ರಾಜಣ್ಣ ಪವಾರ, ರಾಮು ಕುಸಾಳೆ, ಲಕ್ಷ್ಮಿಬಾಯಿ ಕುಸಾಳೆ, ತಿಮ್ಮಾಬಾಯಿ ಕುಸಾಳೆ, ಸಿದ್ರಾಮ ಕುಸಾಳೆ ಸೇರಿದಂತೆ ಸಮಾಜದ ಅನೇಕ ಮುಖಂಡರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here