ಕಲಬುರಗಿ: ಕರ್ನಾಟಕ ಪ್ರಾಂತ ರೈತ ಸಂಘ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಭಾರತ ರತ್ನ ಡಾ ಬಾಬಾ ಸಾಹೆಬ್ ಅಂಬೇಡ್ಕರ್ ರವರ 64 ನೇ ಮಾಹಪರಿ ನಿರ್ವಾಣ ದಿನ ನಿಮಿತ್ತ ಪುತಳಿ ಗೆ ಮಾಲಾರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷರಾದ ಶಾಂತಪ್ಪ ಪಾಟೀಲ ಸಣ್ಣುರು ಮಾತನಾಡುತ ಬಾಬಾ ಸಾಹೇಬರ ಕನಸಿನ ಭಾರತ ಉಳಿಸುವ ರಕ್ಷಿಸುವ ಮತ್ತು ಬೆಳೆಸುವ ಅನಿವಾರ್ಯತೆ ಇದೆ ಇವತ್ತು ದೇಶದಲ್ಲಿ ಅಂಬೇಡ್ಕರ್ ನೀಡಿದಂತ ರೈತ ಪರವಾದ ಕಾನುನುಗಳು ಕಾರ್ಮಿಕ ಕಾನುನುಗಳು ತಿದ್ದುಪಡಿ ಮಾಡುವ ಮೂಲಕ ಇವತ್ತು ರೈತರ ಮತ್ತು ಕಾರ್ಮಿಕರ ಹಕ್ಕುಗಳು ಕಸಿದುಕೊಳ್ಳುತ್ತಿದ್ದು ದುಡಿಮೆಯ ಶಕ್ತಿಯನ್ನು 8 ಗಂಟೆಯಿಂದ 10 ಗಂಟೆಗೆ ಹೆಚ್ಚಿಸುವ ಮೂಲಕ ಕಾರ್ಪೊರೇಟ್ ಕಂಪನಿ ಪರವಾದ ನೀತಿಗಳು ಜಾರಿಗೆ ತರುತ್ತಿದೆ ದುಡಿಯುವ ಜನರ ಸಮಾನ ಕೆಲಸಕ್ಕೆ ಸಮಾನ ವೇತನ ಕ್ಕೆ ಕೊಡಲಿ ಪೆಟ್ಟು ನೀಡಿ ಜನತೆಗೆ ಶೋಷಣೆಯ ಗುಲಾಮತನಕ್ಕೆ ತಳ್ಳು ತ್ತಿದೆ ಎಂದರು.
ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ ಹರಣ ಮಾಡುತ್ತಿದ್ದಾರೆ ಇಂತಹ ಧಮನಕಾರಿ ನೀತಿಗಳ ವಿರುದ್ದಜನರು ಜಾಗೃತರಾಗಿ ಸ0ಘಟಿರಾಗಬೆಕಾಗಿದೆ ಬಡವರ ಪರವಾಗಿ ಇದ್ದ ರೈತರ ಭೂ ಸುಧಾರಣಾ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ಕೃಷಿ ಪ್ರಧಾನ ಸಮಾಜಕ್ಕೆ ಗುಲಾಮ ಗಿರಿಗೆ ತಳ್ಳುತ್ತಿದ್ದಾರೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.
ಜನ ವಿರೊಧಿ ಕಾಯ್ದೆಗಳನ್ನು ತರುತ್ತಿರುವ ಕೊಮುವಾದಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ನೀತಿಗಳನ್ನು ಉಗ್ರವಾಗಿ ಖಂಡಿಸಿ, ಎಲ್ಲರೂ ಕೆಲಸ ಮಾಡುವ ಅನಿವಾರ್ಯತೆ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಸುನಿಲ್ ಮಾನಪಡೆ ,ಮೈಲಾರಿ ದೊಡ್ಡಮನಿ,ಸಿದ್ದಲಿಂಗ ಪಾಳಾ, ವಿಶ್ವನಾಥ್ ರಾಗಿ,ಲಕ್ಷ್ಮಣ್ ಪಾಳಾ,ಭಾಗೆಶ್ ನಿಪ್ಪಾಣಿ,ಇನ್ನು ಮುಂತಾದದವರು ಇದ್ದರು.