ಕಲಬುರಗಿ: ಡಾ. ಬಾಬಾ ಸಾಹೇಬರು ತಾವು ಬಾಲ್ಯದಲ್ಲಿ ಅನುಭವಿಸಿದ ಅವಮಾನ ನಿಂದನೆ ಗೋಳನ್ನು ಸವಾಲಾಗಿ ಸ್ವೀಕರಿಸಿದರು ಅದನ್ನು ಮೆಟ್ಟಿ ನಿಂತು ನಿರಂತರ ಓದು ಹೊಸ ಹೊಸ ಚಿಂತನೆಗಳನ್ನು ಬೆಳೆಸಿಕೊಂಡು ಜಾಗತಿಕ ಮಹಾನ್ ಚಿಂತಕರಾಗಿ ಹೊರಹೊಮ್ಮಿದರು ಅವರು ಜಗತ್ತಿನ ಎಲ್ಲ ಶೋಷಿತರ ದಮನಿತರ ದಲಿತರ ಆತ್ಮ ವಿಶ್ವಾಸ ಚೈತನ್ಯ ರಾಗಿ ಹೋರಾಟ ಸ್ವಾಭಿಮಾನ ಶಕ್ತಿಯಾಗಿದ್ದಾರೆ ಎಂದು ನಾಡಿನ ಹೆಸರಾಂತ ಕಥೆಗಾರ ರು ಚಿಂತಕರು ಗುಲಬರ್ಗಾ ವಿಶ್ವವಿದ್ಯಾಲಯದ ಕಲಾ ನಿಕಾಯದ ಡೀನ್ ರು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರು ಪ್ರೊ ಎಚ್ ಟಿ ಪೋತೆ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ಪೀಪಲ್ಸ ಶಿಕ್ಷಣ ಸಂಸ್ಥೆಯ ಡಾ ಬಿ .ಆರ್ . ಅಂಬೇಡ್ಕರ್ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ ದರಲ್ಲಿ ಆಯೋಜಿಸಿದ್ದ ವಿಶ್ವರತ್ನ ಬೋಧಿಸತ್ವ ಸಂವಿಧಾನ ಶಿಲ್ಪಿ ಬಾಬಾಸಾಹೇಬ ಡಾ ಬಿ.ಆರ್. ಅಂಬೇಡ್ಕರ್ ಅವರ 64ನೆಯ ಮಹಾಪರಿನಿರ್ವಾಣ ದಿನ ಕಾರ್ಯಕ್ರಮ ದ ಅವರು ಡಾ ಅಂಬೇಡ್ಕರ್ ಅವರ ಜೀವನ ಮತ್ತು ವ್ಯಕ್ತಿತ್ವವನ್ನು ಕುರಿತು ಮಾತನಾಡಿದರು.
ಅಂಬೇಡ್ಕರ್ ಕೇವಲ ವ್ಯಕ್ತಿ ಯಾಗದೆ ಅಸ್ಮಿತೆ ಯು ಶಕ್ತಿಯಾಗಿದ್ದಾರೆ ಅವರ ಶ್ರಮ ಇವತ್ತಿನ ಯುವ ಪೀಳಿಗೆಗೆ ಸ್ಪೂರ್ತಿ.ಭಾರತಕ್ಕೆ ಜಾಗತಿಕ ಶ್ರೇಷ್ಠ ಸ್ಥಾನ ಬಂದಿದ್ದಾರೆ ಅದು ಬಾಬಾಸಾಹೇಬ ರಿಂದಲೇ ಬಂದಿದೆ ಇಡೀ ಭಾರತ ಚರಿತ್ರೆ ಯನ್ನು ಬುದ್ದ ಬಸವ ಕನಕ ಅಂಬೇಡ್ಕರ್ ಅವರ ಮೂಲಕ ನೋಡಿದಾಗಲೇ ನಿಜ ಚರಿತ್ರೆ ಕಟ್ಟಲು ಸಾಧ್ಯ ಏಕ ರೂಪಿ ಚರಿತ್ರೆ ಮಿಥ್ ಗಳನ್ನು ಭಂಜಿಸದರೇನೇ ಬಹುತ್ವ ದ ದರ್ಶನ ಸಾಧ್ಯ ಅದನ್ನು ಅಂಬೇಡ್ಕರ್ ರಿ ಚರಿತ್ರೆ ಮೂಲಕ ಮಾತ್ರ ವೇ ಸಾಧ್ಯ ವಾಗುತ್ತದೆ ಎಂದರು.
ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕರು ಶ್ರೀ ಶಾಂತಪ್ಪ ಸೂರನ್ ವಹಿಸಿದ್ದರು. ವೇದಿಕೆ ಮೇಲೆ ಗುಲ್ಬರ್ಗಾ ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯರಾದ ಶ್ರೀ ಈಶ್ವರ ಇಂಗನ್ ಪ್ರೊ ಚಂದ್ರಶೇಖರ ಶೀಲವಂತ ಉಪಸ್ಥಿತರಿದ್ದರು ಡಾ ಗಾಂಧಿ ಮೊಳಕೇರಿ ಕಾರ್ಯಕ್ರಮ ನಡೆಸಿಕೊಟ್ಟರು
ಡಾ ಬಿ.ಆರ್. ಅಂಬೇಡ್ಕರ್ ಮಹಾವಿದ್ಯಾಲಯ ಪ್ರಾಚಾರ್ಯರು ಡಾ ಅಯ್.ಎಸ್ ವಿದ್ಯಾ ಸಾಗರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ. ಶ್ರೀಶೈಲ ನಾಗರಾಳ, ಬಿ.ಎಚ್. ನಿರಗುಡಿ ಇತರರು ಇದ್ದರು.