ಬೆಂಗಳೂರು: ಯಾದಗಿರಿ ಜಿಲ್ಲೆಯ ಶಾಹಪುರ ತಾಲ್ಲೂಕಿನಲ್ಲಿ ಕೆಲವೊಂದು ಬ್ಯಾಂಕ್ ಗಳಲ್ಲಿ ರೈತರ ಸಾಲ ಮನ್ನಾ ಆಗಿರುವ ಹಣ ರಾಜ್ಯ ಸರಕಾರ ಮರಳಿ ಹಿಂದಕ್ಕೆ ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಎಚ್.ಡಿ ಕುಮಾರ ಸ್ವಾಮಿ ಮಾಧ್ಯಮರೊಂದಿಗೆ ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ.
ಅವರು ಮಾತನಾಡಿ, ಬ್ಯಾಂಕ್ ಸಿಬ್ಬಂದಿಗಳ ತಪ್ಪಿನಿಂದ ರೈತರಿಗೆ ಸಾಲ ಮನ್ನಾ ಆಗಿರುವ ಹಣ ಮರಳಿ ಸರಕಾರಕ್ಕೆ ಬಂದಿದೆ. ಬ್ಯಾಂಕ್ ಸಿಬ್ಬಂದಿಗಳ ತಪ್ಪನ್ನು ಮಾಧ್ಯಮಗಳು ಸರಕಾರದ ಮೇಲೆ ಹಾಕಿ ಸುದ್ದಿ ಪ್ರಸಾರ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾಲ ಮನ್ನಾ ವಿಷಯದಲ್ಲಿ ಮಾಧ್ಯಮಗಳು ಆರಂಭದಿಂದಲೂ ತಪ್ಪು ದಾರಿಯನ್ನು ಎಳೆಯುವ ಮೂಲಕ ರೈತರಿಗೆ ದಾರಿ ತಪ್ಪಿಸುತ್ತಿದ್ದಾರೆ ಎಂದು ಅವರು ಹೇಳಿದರು. ರೈತರ ಸಾಲ ಮನ್ನಾ ಜವಾಬ್ದಾರಿಯನ್ನು ಸರಕಾರ ಅತ್ಯಂತ ಜವಾಬ್ದಾರಿಯಿಂದ ನಿಭಾಯಿಸುತ್ತಿದೆ.
ರಾಜ್ಯ ಸರಕಾರದಿಂದ ಈ ಗೊಂದಲ ಉಂಟಾಗಿದೆ. ಈ ಗೊಂದಲುಕ್ಕೂ ಚುನಾವಣೆ ಹಾಗೂ ರಾಜ್ಯ ಸರಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದರು.
ರೈತರ ಸಾಲ ಮನ್ನಾ ಹಣ ವಾಪಸ್ ಬಂದಿರುವ ಕುರಿತು ಶುಕ್ರವಾರ ಸಭೆ ಕರೆಯಲಾಗುವುದೆಂದು ಅವರು ತಿಳಸಿದರು.