ಗ್ಲೋಬಲ್ ವಾರ್ಮಿಂಗ್ ನಿಯಂತ್ರಣಕ್ಕೆ ರಾಮಬಾಣವಾಗಲಿರುವ ಎಲೆಕ್ಟ್ರೀಕ್ ವ್ಹೇಕಲ್: ಡಾ. ಬಿಲಗುಂದಿ

0
72

ಕಲಬುರಗಿ: ಪ್ರಸ್ತುತ ದಿನಗಳಲ್ಲಿ ಕಂಡು ಬರುತ್ತಿರುವ ಹವಾಮಾನ ವೈಪರಿತ್ಯ, ಮತ್ತು ಜಾಗತಿಕ ತಾಪಮಾನದಲ್ಲಿ ಉಂಟಾಗುತ್ತಿರುವ ಏರುಪೇರಿಗೆ ಮೂಲಕಾರಣವಾಗಿರುವ ವಾಹನ ಮಾಲಿನ್ಯ ತಡೆಗಟ್ಟಲು ಹೈಬ್ರಿಡ್ ಮತ್ತು ಎಲಕ್ಟ್ರೀಕಲ್ ವಾಹನಗಳು ಸಹಾಯಕಾರಿಯಾಗಲಿವೆ. ಜನರು ಜಾಗೃತರಾಗಿ ವಾಯು ಮಾಲಿನ್ಯಕ್ಕೆ ಎಡೆ ಮಾಡಿಕೊಡುವ ವಾಹನಗಳನ್ನು ಬಳಸುವುದು ಕಡಿಮೆ ಮಾಡಬೇಕು. ಈಗಾಗಲೆ ಸಾಕಷ್ಟು ಕಂಪನಿಗಳು ಎಲೆಕ್ಟ್ರೀಕ್ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು ಇದಲ್ಲಿ ಇನ್ನೂ ಸಾಕಷ್ಟು ಸಂಶೋಧನೆ ನಡೆದಿದೆ ಎಂದು ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಭೀಮಾಶಂಕರ ಸಿ. ಬಿಲಗುಂದಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಇಂದು ಇಲ್ಲಿನ ಪಿ.ಡಿ.ಎ. ಕಾಲೇಜಿನ ಆಟೋಮೋಬಾಯಿಲ್ ವಿಭಾಗವು ಏರ್ಪಡಿಸಿದ ಎಐಸಿಟಿ ಪ್ರಾಯೋಜಿಸಿದ ಹೈಬ್ರಿಡ್ ಮತ್ತು ಎಲೆಕ್ಟ್ರೀಕಲ್ ವ್ಹೇಕಲ್ ಎಂಬ ವಿಷಯದ ಮೇಲೆ ಆರು ದಿನಗಳ ಆನ್ ಲೈನ್ ಅಲ್ಪಾವಧಿ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

Contact Your\'s Advertisement; 9902492681

ಎಐಸಿಟಿ ಪ್ರಾಯೋಜಿಸಿದ ಈ ಆನ್ ಲೈನ್ ಅಲ್ಪಾವಧಿ ತರಬೇತಿ ಕಾರ್ಯಕ್ರಮವನ್ನು ಆಟೋಮೋಬಾಯಿಲ್ ವಿಭಾಗವು ಎರಡು ಹಂತಗಳಲ್ಲಿ ನಡೆಯಿಸುತ್ತಿದ್ದು ಎಲ್ಲ ಉಪನ್ಯಾಸಕರಿಗೂ ಇದರ ಸೌಲಭ್ಯದೊರಕಿಸಿಕೊಡುವ ಸಂಕಲ್ಪ ಹೊಂದಿದೆ. ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಐಐಟಿ ದೇಹಲಿಯ ಎನರ್ಜಿ ಸ್ಟಡಿಸ್ ವಿಭಾಗದ ಮುಖ್ಯಸ್ಥರಾದ ಪ್ರೊ. ಕೆ. ಎ. ಸುಬ್ರಹ್ಮಣ್ಯಂ ಹಾಗೂ ಗೌರವ ಅತಿಥಿಗಳಾಗಿ ಹೈದರಾಬಾದ ಮೂಲದ ಎಕ್ಸಾಮ್ ಎನರ್ಜಿ ಕನ್ಸರ್ವೇಶನ್‌ನ ವ್ಯವಸ್ಥಾಪಕ ನಿರ್ದೇಶಕರಾದ ಎಂ. ಜೆ. ಪುರೋಹಿತ ಅವರು ಭಾಗವಹಿಸಿದ್ದರು.

ಕಾಲೇಜಿನ ಪ್ರಾಚಾರ್ಯರಾದ ಡಾ. ಎಸ್. ಎಸ್. ಹೆಬ್ಬಾಳ ಅವರು ಮಾತನಾಡುತ್ತ ಶಿಕ್ಷಣದ ಗುಣಮಟ್ಟ ಹೆಚ್ಚಿಸಿ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ತಮ್ಮ ಕಾಲೇಜು ಶ್ರಮಹಿಸುತ್ತಿದ್ದು ಹಾಗೂ ಅದಕ್ಕೆ ಬೇಕಾಗುವ ವಾತಾವರಣವೂ ಕೂಡ ಕಲ್ಪಿಸಲಾಗಿದೆ ಎಂದು ಹೇಳಿದರು.  ಈ ಅಲ್ಪಾವಧಿ ತರಬೇತಿ ಕಾರ್ಯಾಗಾರದ ಸೌಲಭ್ಯವನ್ನು ಶಿಕ್ಷಕರು ಉಪಯೋಗಿಸಿಕೊಳ್ಳಬೇಕೆಂದು ತಿಳಿಸುತ್ತಾ ಮುಂಬರುವ ದಿನಗಳಲ್ಲಿ ಇನ್ನೂ ಸಾಕಷ್ಟು ಕಾರ್ಯಕ್ರಮವನ್ನು ನಡೆಯಿಸುವುದಾಗಿ ಹೇಳಿದರು.

ಈ ಉಪನ್ಯಾಸ ಮಾಲಿಕೆಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಸುಮಾರು ೯೦ ಶಿಕ್ಷಕರು ಭಾಗವಹಿಸಿದ್ದು ಉನ್ನತ ವಿಶ್ವವಿದ್ಯಾಲಯ, ಐಐಟಿ ಮತ್ತು ಕೈಗಾರಿಕೋದ್ಯಮಿಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಗವಹಿಸಿ ಹೈಬ್ರಿಡ್ ಮತ್ತು ಎಲೆಕ್ಟ್ರೀಕಲ್ ವ್ಹೇಕಲ್ ಕುರಿತು ಉಪನ್ಯಾಸ ನೀಡುವರು. ಈ ಕಾರ್ಯಾಗಾರದ ಸಂಚಾಲಕರಾದ ಡಾ. ಎಸ್, ಆರ್, ಹೊಟ್ಟಿ ಹೈಬ್ರಿಡ್ ಮತ್ತು ಎಲಕ್ಟ್ರೀಕಲ್ ವ್ಹೇಕಲ್ ಕುರಿತು ಸಮಗ್ರ ಮಾಹಿತಿಯನ್ನು ಒದಗಿಸಿದರು. ಹಾಗೂ ಮುಂಬರುವ ದಿನಗಳಲ್ಲಿ ಈ ತಂತ್ರಜ್ಞಾನದ ಅನೂಕೂಲತೆಗಳ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಆಟೋಮೊಬಯಿಲ್ ವಿಭಾಗದ ಮುಖ್ಯಸ್ಥ ಮತ್ತು ಕಾರ್ಯಾಗಾರದ ಸಂಯೋಜಕರಾದ ಡಾ. ಚೆನ್ನಪ್ಪ ಬಿರಾದಾರ ಅವರು ಸರ್ವರಿಗೂ ವಂದಿಸಿದರು. ಕಾರ್ಯಕ್ರಮವನ್ನು ವಿಭಾಗದ ಸಹ ಪ್ರಾಧ್ಯಾಪಕರಾದ ಶಿವಕುಮಾರ ಪಾಟಿಲರು ನಿರೂಪಿಸಿದರು. ಉಪ-ಪ್ರಾಚಾರ್ಯರಾದ ಡಾ. ಎಸ್. ಎಸ್. ಕಲಶೇಟ್ಟಿ, ಡೀನ ಅಕಾಡೆಮಿಕ ಡಾ. ಎಸ್. ಆರ್. ಪಾಟೀಲ, ಪರೀಕ್ಷಾ ಕೇಂದ್ರದ ನಿರ್ವಾಹಕ ಪ್ರೊ. ರವೀಂದ್ರ ಎಮ್. ಲಠ್ಠೆ, ಹೆಚ್ಚುವರಿ ಡೀನ ಡಾ. ವಿಶ್ವನಾಥ ಬುರಕಪಳ್ಳಿ ಸಲಹೇಗಾರರಾಗಿ ತಮ್ಮ ಕಾರ್ಯನಿರ್ವಹಿಸಿದರು,

ವಿಭಾಗದ ಪ್ರೊ. ಎಸ್. ಸಿ. ಹಿರೇಮಠ, ಪ್ರೊ. ಎಂ. ಎಸ್. ಅಲ್ಲದ, ಪ್ರೊ. ಶಿವಕುಮಾರ ಎ. ಪಾಟೀಲ, ಪ್ರೊ. ಎಸ್. ವ್ಹಿ. ಗುಬ್ಬೆವಾಡ ಹಾಗೂ ಇತರರು ಕಾರ್ಯಾಗಾರದ ಸಂಘಟಕರಾಗಿ ಕಾರ್ಯನಿರ್ವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here