ಶಾಲಾ ಪೂರ್ವ ಮಕ್ಕಳಿಗೆ ಶಿಕ್ಷಣದ ಬುನಾದಿ ಹಾಕಬೇಕಾಗಿರುವುದು ಅಂಗನವಾಡಿ ಕಾರ್ಯಕರತೆಯರ ಕರ್ತವ್ಯ-ಪಾಟೀಲ್

0
120

ಶಹಾಬಾದ:ಅಂಗನವಾಡಿ ಕೇಂದ್ರದಲ್ಲಿ 3ರಿಂದ 6 ವರ್ಷದ ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣದಿಂದ ಮಕ್ಕಳಿಗೆ ಕಲಿಕಾ ಆಸಕ್ತಿ ಮೂಡಿಸಿ, ಶಿಕ್ಷಣದ ಬುನಾದಿ ಹಾಕಬೇಕಾಗಿರುವುದು ಅಂಗನವಾಡಿ ಕಾರ್ಯಕರತೆಯರ ಕರ್ತವ್ಯ ಎಂದು ಶಿಶು ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ಎಸ್.ಎಂ.ಪಾಟೀಲ ಹೇಳಿದರು.

ಅವರು ತೊನಸನಹಳ್ಳಿ(ಎಸ್) ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಕೆಕೆಆರಡಿಬಿಯ ಮೈಕ್ರೋ ಅನುದಾನದಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮೂರನೇ ಹಂತದ ಶಾಲಾಪೂರ್ವ ಶಿಕ್ಷಣ ಬಲವರ್ಧನೆ ಕುರಿತು ಅಂಗನವಾಡಿ ಕಾರ್ಯಕರ್ತರಿಗೆ ಆಯೋಜಿಸಲಾದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ಈ ಯೋಜನೆಯಿಂದ ಮಕ್ಕಳ ಶಿಕ್ಷಣ ಮತ್ತು ಬುದ್ಧಿವಂತಿಕೆ ಮಟ್ಟ ಬೆಳೆಯಲು ಸಹಕಾರಿಯಾಗುತ್ತದೆ.ತರಬೇತಿ ಪಡೆದ ಅಂಗನವಾಡಿ ಕಾರ್ಯಕರತೆಯರು ಮಕ್ಕಳಿಗೆ ಶಾಲಾಪೂರ್ವ ಮಾಹಿತಿ ನೀಡಲು ಮುಂದಾಗಬೇಕೆಂದು ತಿಳಿಸಿದರು.

ಅಧಿಕಾರಿ ತಿರುಪತಿ, ಅಂಗನವಾಡಿ ಮೇಲ್ವಿಚಾರಕಿ ಶಕುಂತಲಾ.ಎಸ್.ಸಾಕ್ರೆ ಹಾಗೂ ಅಂಗನವಾಡಿ ಕಾರ್ಯಕರತೆಯರು ತರಬೇತಿಯಲ್ಲಿ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here