ಕಲಬುರಗಿ: ಮಕ್ಕಳ ಮಾರ್ಗದರ್ಶಿ ಸಂಸ್ಥೆ, ಹಿಮಾಲಯ ಸಂಸ್ಥೆ ಹಾಗೂ ಕ್ರೈ ಸಂಸ್ಥೆ ಬೆಂಗಳೂರು ಇವರ ವತಿಯಿಂದ ವಾಡಿ ಪಟ್ಟಣದ ನಾಲವಾರ ವಲಯದ ಕುಕುಂದಾ, ಕಡಬೂರ, ತುನ್ನೂರ, ಚಾಮನೂರ ಹಾಗೂ ಸುಗೂರ (ಎನ್) ಗ್ರಾಮಗಳಟ್ಟು ೫೦೦ ಬಡ ಮಕ್ಕಳಿಗೆ ಮಾಸ್ಕ್, ಸ್ಯಾನಿಟೈಸರ್, ಟೂತ್‌ಪೇಸ್ಟ್ ಮತ್ತು ಶಾಂಪೂಗಳನ್ನು ವಿತರಿಸಲಾಯಿತು. ದಲಿತ ಬಡಾವಣೆಯ ಮಕ್ಕಳು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಬಿಸಿಯೂಟ ಸಹಾಯಕೀಯರಿಗೂ ಕೋವಿಡ್ ಸುರಕ್ಷತೆಗಾಗಿ ಮಾಸ್ಕ್-ಸ್ಯಾನಿಟೈಸರ್ ವಿತರಿಸಲಾಯಿತು.
ಮಾರ್ಗದರ್ಶಿ ಸಂಸ್ಥೆಯ ನಿರ್ದೇಶಕ ಆನಂದರಾಜ್, ಜಿಲ್ಲಾ ಸಂಯೋಜಕ ರಾಹುಲ ಮಾಳಗೆ, ಸಮುದಾಯ ಸಂಘಟಕರಾದ ದಿಲೀಪಕುಮಾರ ಸಾಕ್ರೆ ಹಾಗೂ ಶಾಲಾ ಶಿಕ್ಷಕರು, ಗ್ರಾಮಸ್ಥರು ಪಾಲ್ಗೊಂಡಿದ್ದರು.