ಸುರಪುರ: ದೇವಾಪೂರ ಜಡಿ ಶಾಂತಲಿಂಗೇಶ್ವರ ಸಂಸ್ಥಾನ ಹಿರೇಮಠದ ಪೂಜ್ಯ ಶಿವಮೂರ್ತಿ ಶಿವಾಚಾರ್ಯರು ಸಮಾಜಮುಖಿ ಚಿಂತನೆಯ ಪ್ರಗತಿಶೀಲ ಸ್ವಾಮಿಗಳು ಎಂದು ಸಗರನಾಡು ಸೇವಾ ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಹೇಳಿದರು. ರಂಗಂಪೇಟೆಯ ಖಾದಿ ಕೇಂದ್ರದ ಆವರಣದಲ್ಲಿ ಇಂದು ಸಗರನಾಡು ಸೇವಾ ಪ್ರತಿಷ್ಠಾನ ವತಿಯಿಂದ ಆಯೋಜಿಸಿದ್ದ ದೇವಾಪೂರ ಪೂಜ್ಯರ ಹುಟ್ಟು ಹಬ್ಬದ ನಿಮಿತ್ಯವಾಗಿ ದಿನದರ್ಶಿಕೆ ಬಿಡುಗಡೆ ಹಾಗೂ ಹಣ್ಣು ಹಂಪಲು ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಳೆದ ೨ ದಶಕಗಳಿಂದ ದೇವಾಪೂರ ಜಡಿ ಶಾಂತಲಿಂಗೇಶ್ವರ ಹಿರೇಮಠದ ಪೂಜ್ಯ ಶ್ರೀಗಳು ಧಾರ್ಮಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಕಾರ್ಯಾನಿರ್ವಹಿಸುತ್ತಿದ್ದು ಶರಣ ಪರಂಪರೆ, ವೈಚಾರಿಕ ಮನೊಭಾವನೆಯ ಜೊತೆಗೆ ಮೂಲ ಸಂಸ್ಕೃತಿ, ಸಂಸ್ಕಾರಗಳನ್ನು ಯುವ ಜನರಿಗೆ ಪರಿಚಯಿಸುತ್ತಾ ಈ ಭಾಗದಲ್ಲಿ ಬಹುದೊಡ್ಡದಾದ ಯುವ ಪಡೆಯನ್ನು ಕಟ್ಟಿ ಮಾರ್ಗದರ್ಶನ ಮಾಡುತ್ತಾ ಕಾರ್ಯಾನಿರ್ವಹಿಸುತ್ತಿದ್ದು, ಸಮಾಜೋಧಾರ್ಮಿಕ ಮನೋಭಾವನೆಯ ನಮ್ಮ ನಾಡಿನ ಕ್ರೀಯಾಶೀಲ ಯುವಯತಿಗಳು, ಉತ್ತಮ ವಾಗ್ಮಿಗಳು ಹಾಗೂ ಪರಿವರ್ತನಾಶೀಲ ಚಿಂತನೆಯ ಮಠಾಧಿಶರಾಗಿದ್ದಾರೆ ಎಂದು ಅಂಗಡಿ ತಿಳಿಸಿದರು.
ಯುವ ಮುಖಂಡ ಮಲ್ಲಿಕಾರ್ಜುನ ರೆಡ್ಡಿ ಅಮ್ಮಾಪುರ ಮಾತನಾಡಿ ಕರೋನಾ ಮಹಾಮಾರಿ ಸಂಕಷ್ಟದಲ್ಲಿರುವುದರಿಂದ ಪೂಜ್ಯರ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಶರಣ ಸೇವಾ ಸಂಸ್ಥೆಯ ಅಧ್ಯಕ್ಷ ಶಿವರಾಜ ಕಲಿಕೇರಿ ಮಾತನಾಡಿ, ದೇವಾಪುರದ ಪೂಜ್ಯ ಶ್ರೀಗಳು ನೂರಾರು ಯುವಕರಿಗೆ ಸ್ಪೂರ್ತಿ ದಾಯಕರಾಗಿದ್ದಾರೆ ಮತ್ತು ಪ್ರೇರಣ ದಾಯಕರಾಗಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ವಾಸು ನಾಯಕ ಬೈರಿಮಡ್ಡಿ, ಗುರು ಹಾವಿನಾಳ, ಪ್ರಕಾಶ ಸಮೇದ್, ಕಲ್ಯಾಣ ಶೆಟ್ಟಿ ಗೋಗಿ, ಸುಭಾಷ ಕಾಯಿ ಗೋಗಿ, ವಿಜಯಕುಮಾರ ಅಂಗಡಿ, ಮಲ್ಲಿಕಾರ್ಜುನ ಸುಭೇದಾರ, ದೇವು ನಾಯಕ ಸೇರಿದಂತೆ ಇತರರಿದ್ದರು, ಪ್ರವೀಣ ಜಕಾತಿ ನಿರೂಪಿಸಿ ವಂದಿಸಿದರು.