ರಾಜಕೀಯದಲ್ಲಿ ಹೊಸ ಯುಗ ಪ್ರಾರಂಭಿಸಿದ ದೇವರಾಜ ಅರಸು: ಪ್ರೊ. ಕೆ. ಎಸ್. ಭಗವಾನ್

0
28

ಮೈಸೂರು: ಹಿಂದುಳಿದವರ ಬಗ್ಗೆ ಬಹಳ ಕಾಳಜಿ ಹೊಂದಿದ್ದವರು ಡಿ.ದೇವರಾಜ ಅರಸು ಹಿಂದುಳಿದವರ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ತಂದಿದ್ದವರು. ರಾಜಕೀಯದಲ್ಲಿ ಹೊಸ ಯುಗ ಪ್ರಾರಂಭಿಸಿದ ಕೀರ್ತಿ  ಡಿ.ದೇವರಾಜ ಅರಸು ಅವರದಾಗಿದೆ ಎಂದು ಹಿರಿಯ ಸಾಹಿತಿ ಪ್ರೊ.ಕೆ.ಎಸ್ ಭಗವಾನ್ ಅಭಿಪ್ರಾಯ ವ್ಯಕ್ತಪಡಿಸಿದರು.

ಮಾಜಿ ಮುಖ್ಯಮಂತ್ರಿ ದಿವಂಗತ ಡಿ ದೇವರಾಜ ಅರಸು ಅವರ ಸಾಮಾಜಿಕ ಚಿಂತನೆಗಳ ಕುರಿತು ಅರಸು ಪ್ರತಿಷ್ಟಾಪನಾ ಸಮಿತಿ ಹಾಗೂ ಮೈಸೂರು ನಗರ ಮತ್ತು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಕಾಂಗ್ರೆಸ್ ಕಚೇರಿಯಲ್ಲಿ ವಿಚಾರಗೋಷ್ಠಿಯಲ್ಲಿ ಅರಸು ಭಾವ ಚಿತ್ರಕ್ಕೆ ಜ್ಯೋತಿ ಬೆಳಗಿಸಿ, ಪುಷ್ಪಾರ್ಚನೆ ಮಾಡುವ ಮೂಲಕ‌ ವಿಚಾರಗೋಷ್ಠಿಗೆ ಹಿರಿಯ ಸಾಹಿತಿ ಪ್ರೊ. ಕೆ. ಎಸ್. ಭಗವಾನ್ ಚಾಲನೆ ನೀಡಿದರು.

Contact Your\'s Advertisement; 9902492681

ನಂತರ ಮಾತನಾಡಿದ ಅವರು, ಇತ್ತೀಚಿನ ರಾಜಕಾರಣಿಗಳಿಗೆ ಓದುವ ಅಭ್ಯಾಸವೇ ಇಲ್ಲ. ಹಾಗಾಗಿ ಹೊಸ ಹೊಸ ಆಲೋಚನೆಗಳು ಅವರಿಗಿರುವುದಿಲ್ಲ ಎಂದು ಟೀಕಿಸಿ, ಅರಸು ಅಂತಹವರ ರಾಜಕಾರಣಿ ಅಪರೂಪ. ಅವರ ಚಿಂತನೆಗಳನ್ನು,ವಿಚಾರಗಳನ್ನು ನಾವು ಕೂಡಾ ಅಳವಡಿಸಿ ಕೊಳ್ಳಬೇಕು ಎಂದು ಹಿರಿಯ ಸಾಹಿತಿ ಪ್ರೊ. ಕೆ.ಎಸ್ ಭಗವಾನ್ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಹೆಚ್.ಎ ವೆಂಕಟೇಶ್, ಮಡ್ಡಿಕೆರೆ ಗೋಪಾಲ್, , ಚಂದ್ರಶೇಖರ, ಪ್ರತಿಷ್ಠಾನದ ಅಧ್ಯಕ್ಷ ಜಾಕೀರ್ ಹುಸೇನ್ ಹಾಗೂ ಹಲವು ಸಾಹಿತಿಗಳು, ಪ್ರಗತಿಪರ ಚಿಂತಕರು ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here