ಜವಾಹರ ನವೋದಯ ವಿದ್ಯಾಲಯದಲ್ಲಿ 6ನೇ ತರಗತಿ ಪ್ರವೇಶಾತಿ: ಆನ್‍ಲೈನ್ ನೋಂದಣಿ ಡಿ. 29ರವರೆಗೆ ಅವಧಿ ವಿಸ್ತರಣೆ

0
21

ಕಲಬುರಗಿ: ಜವಾಹರ ನವೋದಯ ವಿದ್ಯಾಲಯ ಕಲಬುರಗಿ-1ರ ಶಾಲೆಯಲ್ಲಿ 2021-22ನೇ ಸಾಲಿನಲ್ಲಿ 6ನೇ ತರಗತಿಗೆ ಪ್ರವೇಶಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ನೋಂದಣಿ ಮಾಡಿಕೊಳ್ಳುವ ಅವಧಿಯನ್ನು 2020ರ ಡಿಸೆಂಬರ್ 29 ರವರೆಗೆ ವಿಸ್ತರಿಸಲಾಗಿದೆ ಎಂದು ಕಲಬುರಗಿ-1 ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯರು ತಿಳಿಸಿದ್ದಾರೆ.

ಜವಾಹರ ನವೋದಯ ವಿದ್ಯಾಲಯ ಕಲಬುರಗಿ-1ರ ಶೈಕ್ಷಣಿಕ ವ್ಯಾಪ್ತಿಯಲ್ಲಿ ಬರುವ ಆಳಂದ, ಅಫಜಲಪೂರ, ಜೇವರ್ಗಿ, ಕಲಬುರಗಿ ದಕ್ಷಿಣ ಹಾಗೂ ಕಲಬುರಗಿ ಉತ್ತರಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

Contact Your\'s Advertisement; 9902492681

2020ರ ಡಿಸೆಂಬರ್ 16 ರಿಂದ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳು ಜವಾಹರ ನವೋದಯ ವಿದ್ಯಾಲಯದ ಆನ್‍ಲೈನ್ ರಜಿಸ್ಟ್ರೇಶನ್ ಪೋರ್ಟಲ್‍ನ ವೆಬ್‍ಸೈಟ್ ಲಿಂಕ್ ಮೂಲಕ https://navodaya.gov.in/nvs/en/admission-JNVST/JNVST-class/ ಅಥವಾ www.navodaya.gov.inವೆಬ್‍ಸೈಟ್‍ನಲ್ಲಿ ಆನ್‍ಲೈನ್ ಮೂಲಕ 2020ರ ಡಿಸೆಂಬರ್ 29 ರೊಳಗಾಗಿ ನೋಂದಣಿ ಮಾಡಿಕೊಳ್ಳಬೇಕು. 2021ರ ಏಪ್ರಿಲ್ 10 ರಂದು ಆಯ್ಕೆ ಪರೀಕ್ಷೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here