ಪುಸ್ತಕಗಳು ಮನುಷ್ಯನ ಬದುಕಿಗೆ ಊರುಗೋಲಾಗುತ್ತವೆ- ಜೂಜಾರೆ

0
70

ಶಹಾಬಾದ:ಉತ್ತಮ ಪುಸ್ತಕಗಳು ಮನುಷ್ಯನ ಸಂಗಾತಿಗಳಾಗುವುದರ ಜತೆಗೆ ಬದುಕಿನ ಊರುಗೋಲಾಗುತ್ತವೆ ಎಂದು ಸಿಎ ಇಂಗಿನಶೆಟ್ಟಿ ಕಾಲೇಜಿನ ಪ್ರಾಂಶುಪಾಲ ರಾಜಗೋಪಾಲ ಜೂಜಾರೆ ಹೇಳಿದರು.

ಅವರು ದಿ. ರಾಮವಿಲಾಸ ಪೂರಣಮಲ್ ಮಂತ್ರಿ ಅವರ ನೆನಪಿನಲ್ಲಿ ಲಕ್ಷ್ಮಿಕಾಂತ ಮಂತ್ರಿ ಹಾಗೂ ಅನಯ ಮಂತ್ರಿ ರಾಷ್ಟ್ರಭಾಷಾ ಶಿಕ್ಷಣ ಸಮಿತಿಯ ಸಿಎ ಇಂಗಿನಶೆಟ್ಟಿ ಕಾಲೇಜಿನ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉಚಿತವಾಗಿ ಪುಸ್ತಕಗಳನ್ನು ವಿತರಣೆ ಸಮಾರಂಭದಲ್ಲಿ ಮಾತನಾಡಿದರು.

Contact Your\'s Advertisement; 9902492681

ಮನುಷ್ಯನ ಜೀವನದ ಕೊನೆಯವರೆಗೂ ಪುಸ್ತಕದ ಜತೆಗೆ ಸಂಪರ್ಕದಲ್ಲಿರುವ ವ್ಯಕ್ತಿ ಬಹುಳ ಎತ್ತರಕ್ಕೆ ಬೆಳೆಯುತ್ತಾನೆ.ಅದು ಹಣದಿಂದಲ್ಲ. ಬುದ್ದಿವಂತಿಕೆ ಹಾಗೂ ವ್ಯಕ್ತಿತ್ವದಿಂದ ಎಂದು ತಿಳಿದುಕೊಳ್ಳಬೇಕು.ಅಲ್ಲದೇ ಆ ವ್ಯಕ್ತಿಗೆ ಎಲ್ಲಾ ಕಡೆ ಗೌರವಿಸಲ್ಪಡುತ್ತಾನೆ.ಆದ್ದರಿಂದ ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕು.ಆದರೆ ಲಕ್ಷ್ಮಿಕಾಂತ ಮಂತ್ರಿ ಹಾಗೂ ಅನಯ ಮಂತ್ರಿ ಅವರು ಅವರು ದಿ. ರಾಮವಿಲಾಸ ಪೂರಣಮಲ್ ಮಂತ್ರಿ ಅವರ ನೆನಪಿನಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚಿನ ಪುಸ್ತಕಗಳನ್ನು ನೀಡಿರುವುದು ಬೆಲೆ ಕಟ್ಟಲಾಗದ ಜ್ಞಾನ ಸಂಪತ್ತಾಗಿದೆ ಎಂದು ಹೇಳಿದರು.

ರಾಷ್ಟ್ರಭಾಷಾ ಶಿಕ್ಷಣ ಸಮಿತಿಯ ಸದಸ್ಯ ಅಶೋಕ ಸೋಮ್ಯಾಜಿ ಮಾತನಾಡಿ, ನಮ್ಮ ಸಂಸ್ಥೆಯ ಮಕ್ಕಳಿಗೆ ಜ್ಞಾನ ಸಂಪತ್ತು ಹೆಚ್ಚಿಸುವ ನಿಟ್ಟಿನಲ್ಲಿ ಪುಸ್ತಕಗಳನ್ನು ಉಚಿತವಾಗಿ ನೀಡಿರುವುದಕ್ಕೆ ನಾವು ಅಭಾರಿಯಾಗಿದ್ದೆವೆ. ಮಕ್ಕಳ ಹುಟ್ಟು ಹಬ್ಬ ಇನ್ನೀತರ ಕಾರ್ಯಕ್ರಮಗಳಲ್ಲಿಯೂ ಇದೇ ರೀತಿ ಪುಸ್ತಕಗಳ ಉಡುಗೊರೆ ನೀಡಿದರೇ ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಯುತ್ತದೆ.ಅಲ್ಲದೇ ಸಾಮಾಜಿಕವಾಗಿ ಪುಸ್ತಕ ನೀಡುವ ವಾತಾವರಣ ಬೆಳೆಸಿದಂತಾಗುತ್ತದೆ ಎಂದು ಹೇಳಿದರು.

ಲಕ್ಷ್ಮಿಕಾಂತ.ಆರ್.ಮಂತ್ರಿ, ಅನಯ ರಮಾಕಾಂತ ಮಂತ್ರಿ, ಉಪನ್ಯಾಸಕರಾದ ರಮೇಶ ವಾಲಿ, ಪ್ರಕಾಶ ಕೋಸಗಿಕರ್, ಸಾಬಣ್ಣ, ಶರಣು,ಚನ್ನಬಸಪ್ಪ ಕೋಲ್ಲೂರ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here