ರಕ್ಷಣೆ ನೀಡುವಂತೆ ಅಭ್ಯರ್ಥಿಗಳಿಂದ ಪೋಲಿಸ ಅಧಿಕಾರಿಗಳಿಗೆ ಮನವಿ

0
41

ಸುರಪುರ: ಇದೇ ಡಿ೨೨ ರಂದು ಮೊದಲ ಹಂತದಲ್ಲಿ ನಡೆಯುವ ತಾಲೂಕಿನ ಸೂಗುರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕರ್ನಾಳ ಗ್ರಾಮದಲ್ಲಿ ನಡೆಯಲಿರುವ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಕೆಲ ಮುಖಂಡರುಗಳಿಂದ ದಬ್ಬಾಳಿಕೆ ನಡೆದು ಗಲಾಟೆಯಾಗುವ ಸಂಭವವಿದ್ದು ಶಾಂತಿಯುತ ಚುನಾವಣೆ ನಡೆಸಲು ಅನುಕೂಲ ಮಾಡಿಕೊಡಬೇಕು ಹಾಗೂ ನಮಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಚುನಾವಣೆಗೆ ಕರ್ನಾಳ ಗ್ರಾಮದಿಂದ ಸ್ಪರ್ಧಿಸಿರುವ ಮೂರು ಜನ ಅಭ್ಯರ್ಥಿಗಳು ಹಾಗೂ ಗ್ರಾಮದ ಮುಖಂಡರು ಸೋಮವಾರದಂದು ಡಿವೈಎಸ್‌ಪಿ ವೆಂಕಟೇಶ್ ಉಗಿಬಂಡಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಈ ಕುರಿತು ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಾದ ಮೂಕಣ್ಣ ಚೌಡೇಶ್ವರಿಹಾಳ, ದೇವಮ್ಮ ಹಣಮಂತ್ರಾಯ ಮೇದರಗಾಳ ಹಾಗೂ ಹಣಮಂತ ಚಲುವಾದಿ ಈ ಕುರಿತು ಡಿವೈಎಸ್‌ಪಿರವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಗ್ರಾಮದಲ್ಲಿ ಈ ಚುನಾವಣೆ ನಡೆಸಲು ಇದೇ ಗ್ರಾಮದ ಕೆಲ ಪ್ರಭಾವಿ ವ್ಯಕ್ತಿಗಳಿಂದಾಗಿ ಗ್ರಾಮದಲ್ಲಿ ಶಾಂತಿಯುತ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ, ಈಗಲೂ ಗಲಾಟೆ ಸಂಭವವಿದ್ದು, ಜೀವಕ್ಕೆ ಅಪಾಯವಿದೆ ಇದರಿಂದ ನಾವು ಭಯಭೀತರಾಗಿದ್ದೇವೆ ಅಲ್ಲದೆ ಚುನಾವಣೆಗಳಲ್ಲಿ ಸಾರ್ವಜನಿಕರಿಗೂ ಮತ್ತು ಪೋಲಿಸರಿಗೆ ಹೆದರಿಸಿ ಮತಗಟ್ಟೆ ಕೇಂದ್ರಕ್ಕೆ ಹೋಗಿ ಮತ ಹಾಕಲು ಬರುವ ಮುಗ್ಧ ಜನರಿಗೆ ಭಯ ಮೂಡಿಸಿ ಮತವನ್ನು ತಾವೇ ಇಲ್ಲಿಯವರೆಗೆ ಹಾಕುತ್ತಾ ಬಂದಿರುತ್ತಾರೆ ಎಂದು ಅವರು ದೂರಿದ್ದಾರೆ.

Contact Your\'s Advertisement; 9902492681

ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಹೆಚ್ಚಿನ ಬಂದೋಬಸ್ತು ಕೈಗೊಂಡು ಬೇರೆ ತಾಲೂಕಿನ ಪೋಲಿಸರನ್ನು ನಿಯೋಜಿಸಿ ಶಾಂತಿಯುತವಾಗಿ ಮತದಾನ ನಡೆಯುವಂತೆ ಕ್ರಮ ಜರುಗಿಸಬೇಕು ಎಂದು ಮನವಿ ಪತ್ರದ ಮೂಲಕ ಒತ್ತಾಯಿಸಿದ್ದಾರೆ, ಈ ಸಂದರ್ಭದಲ್ಲಿ ಗ್ರಾಮದವರಾದ ಷಣ್ಮುಖಪ್ಪ ದೇಸಾಯಿ,ಅರೆಪ್ಪ ದೇಸಾಯಿ, ಮಾನಶೆಪ್ಪ ದೇಸಾಯಿ, ತಿಮ್ಮಣ್ಣ ದೇಸಾಯಿ, ಬಸವರಾಜ ದೇಸಾಯಿ, ಲಕ್ಷ್ಮಣ ದೇಸಾಯಿ,ಮುಕ್ಕಣ್ಣ ದೇಸಾಯಿ, ಹಣಮಂತಕಟ್ಟಿಗೌಡ ಬಿರೇದಾರ,ಹಣಮಂತ ಮಾಲಿಪಾಟೀಲ,ಹಣಮಂತ ದೇಸಾಯಿ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here