ಹದಿಹರಿಯದವರ ಆರೋಗ್ಯ ದಿನಾಚರಣೆ

0
33

ಕಾಳಗಿ: ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿರುವ ಉಪ ಕೇಂದ್ರ ಹಳೆ ಕಚೇರಿಯಲ್ಲಿ ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮ ಸಮುದಾಯ ಆರೋಗ್ಯ ಕೇಂದ್ರ ಹೆಬ್ಬಾಳ ಪ್ರಾಥಮಿಕ ಆರೋಗ್ಯ ಕೇಂದ್ರ ಕಲ್ಲಹಿಪ್ಪರಗಾ ಮತ್ತು ಪ್ರಗತಿ ಅಭಿವೃದ್ದಿ ಸಂಸ್ಥೆ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಹದಿಹರಿಯದವರ ಆರೋಗ್ಯ ದಿನಾಚರಣೆ ಹಾಗೂ ತಾಯಿ ಮರಣ ಮತ್ತು ಶಿಶು ಮರಣ ತಗ್ಗಿಸುವಲ್ಲಿ ಸಮುದಾಯಗಳ ಪಾತ್ರ ಕುರಿತು ಕಾರ್ಯಕ್ರಮವನ್ನು  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಶುಶ್ರೋಣಾಧಿಕಾರಿಗಳಾದ ಪದ್ಮಿಣಿ ಕಿರಣಗಿ ಅವರು ಉದ್ಘಾಟಿಸಿದರು.

ಈ ಕಾರ್ಯಕ್ರಮದಲ್ಲಿ ಸಮುದಾಯದ ಆರೋಗ್ಯ ಕೇಂದ್ರ ಹೆಬ್ಬಾಳದ ಹಿರಿಯ ಆರೋಗ್ಯ ಸಹಾಯಕ ಪ್ರಕಾಶ ರಾಠೋಡ, ಪ್ರಾಥಮಿಕ ಆರೋಗ್ಯ ಕೇಂದ್ರ ಕಲ್ಲಹಿಪ್ಪರಗಾದ ಕಿರಿಯ ಆರೋಗ್ಯ ಸಹಾಯಕ ಅರುಣಕುಮಾರ ಮಾಕಪನೂರ, ರಾಷ್ಟ್ರೀಯ ಕಿಶೋರ ಸ್ವಾಸ್ಥ ಕಾರ್ಯಕ್ರಮದ ಜಿಲ್ಲಾ ಸಂಯೋಜಕ ಶಿವಕುಮಾರ ಕಾಂಬಳೆ, ಆಪ್ತ ಸಮಾಲೋಚಕರಾದ ಅಲ್ಲಮಪ್ರಭು ನಿಂಬರ್ಗಾ, ಹಳೆ ಹೆಬ್ಬಾಳ ಉಪಕೇಂದ್ರದ ಆರೋಗ್ಯ ಸಹಾಯಕಿ ಸಂಗೀತಾ ಗುತ್ತೆದಾರ, ಸಿದ್ದಮ್ಮ, ಕುಮಾರಿ ಸವಿತಾ, ಮಂಜುನಾಥ ಹೆಳವ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here