‘ಭೀಮ ಸಂಗಮ’: ಸ್ವಾಗತ ಸಮಿತಿಗೆ ಅರುಣಕುಮಾರ ಎಂ.ಪಾಟೀಲ, ರವಿ ಮದನಕರ್ ಆಯ್ಕೆ

0
94

ಕಲಬುರಗಿ: ಕತ್ತಲು ಕವಿದಂತಿರುವ ಇಂದಿನ ಸಮಾಜವನ್ನು ಸಮಾನತೆ, ಸೌಹಾರ್ದತೆ ಮತ್ತು ಸಮೃದ್ಧಿಯ ಬೆಳಕಿನೆಡೆಗೆ ಕೊಂಡೊಯ್ಯಲು ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಚಿಂತನೆಗಳಿಂದ ಮಾತ್ರ ಸಾಧ್ಯವೆಂಬುದನ್ನು ಮನಗಂಡು ಇಲ್ಲಿನ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ನಗರದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿರುವ ‘ಭೀಮ ಸಂಗಮ’ ಘೋಷವಾಕ್ಯದಡಿ ಎಂಬ ಡಾ.ಬಿ.ಆರ್.ಅಂಬೇಡ್ಕರವರ ಚಿಂತನಾ ಸಮಾಗಮ ಒಂದು ದಿನದ ಸಮಾವೇಶ ಹಮ್ಮಿಕೊಂಡಿದೆ ಎಂದು ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ತಿಳಿಸಿದ್ದಾರೆ.

ಜನವರಿ ತಿಂಗಳಿನಲ್ಲಿ ಆಯೋಜಿಸಲಿರುವ ಚಿಂತನಾ ಸಮಾವೇಶದ ಯಶಸ್ವಿಗೆ ಪೂರಕವಾಗಿ ರಚಿಸಲಾದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಜಿಪಂ ಸದಸ್ಯರೂ ಆದ ಹೆಚ್.ಕೆ.ಇ. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಅರುಣಕುಮಾರ ಎಂ.ವೈ.ಪಾಟೀಲ, ಕಾರ್ಯಾಧ್ಯಕ್ಷರಾಗಿ ಜನಪರ ಹೋರಾಟಗಾರ ರವಿ ಮದನಕರ್ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರನ್ನು ಶನಿವಾರ ಜರುಗಿದ ಕಾರ್ಯಕ್ರಮದಲ್ಲಿ ಗೌರವಿಸಿ, ಅಧಿಕೃತವಾಗಿ ಆಹ್ವಾನ ನೀಡಲಾಯಿತು.

Contact Your\'s Advertisement; 9902492681

ಸ್ವಾಗತ ಸಮಿತಿಯ ಅರುಣಕುಮಾರ ಎಂ.ಪಾಟೀಲ, ರವಿ ಮದನಕರ್ ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಇಂದು ಪ್ರತಿಯೊಬ್ಬರೂ ಮೈಗೂಡಿಸಿಕೊಂಡಾಗ ದೇಶದಲ್ಲಿ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಬಹುದಾಗಿದೆ. ಡಾ.ಅಂಬೇಡ್ಕರ್ ಅವರ ಚಿಂಚನಾ ಈ ಸಮಾಗಮ ವಿಚಾರ ಮತ್ತು ಜ್ಞಾನದ ಆಧಾರದ ಕಾರ್ಯಕ್ರಮ ನಡೆಸುವ ಮೂಲಕ ಸಮಾಜದಲ್ಲಿ ಸರ್ವ ಸಮಾನತೆಯ ವಿಚಾರಗಳು ಬಿತ್ತಲಿ ಎಂದು ಆಶಿಸಿ, ಚಿಂತನಾ ಸಮಾವೇಶದ ಯಶಸ್ವಿಗೆ ಸರ್ವರೂ ಕೈಜೋಡಿಸಲಿ ಎಂದು ಮನವಿ ಮಾಡಿದರು.

ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಕೇವಲ ಒಂದು ಸಮುದಾಯದ ಏಳಿಗೆಗಾಗಿ ಶ್ರಮಿಸದೆ ಪ್ರತಿಯೊಬ್ಬರ ಪ್ರಗತಿಗಾಗಿ ಚಿಂತನೆ ನಡೆಸಿ ಅದನ್ನು ಅನುಷ್ಠಾನಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಅಂಥ ಶ್ರೇಷ್ಠ ವಿಶ್ವ ಜ್ಞಾನಿಯ ಚಿಂತನೆಗಳು ಇಂದಿನ ಯುವ ಜನತೆಯ ಬದುಕಿನಲ್ಲಿ ಹೊಸ ಬೆಳಕು ಮೂಡಲಿ ಎಂಬ ಆಶಾಭಾವನೆಯಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

ಜಿಪಂನ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ದಿಲೀಪ ಆರ್.ಪಾಟೀಲ, ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ದೇವೇಂದ್ರಪ್ಪ ಕಪನೂರ, ಶಿಕ್ಷಣ ಪ್ರೇಮಿ ಕಲ್ಯಾಣಕುಮಾರ ಶೀಲವಂತ, ಶರಣ ಚಿಂತಕ ಶರಣಪ್ಪ ಕೊಳ್ಳಿ ಕುರುಕುಂಟಾ, ಎಕೆಆರ್ ದೇವಿ ಪಿಯು ಕಾಲೇಜಿನ ಆಡಳಿತಾಧಿಕಾರಿ ವಿದ್ಯಾಸಾಗರ ದೇಶಮುಖ, ಜನಪರ ಹೋರಾಟಗಾರ ಹಣಮಂತರಾಯ ಅಟ್ಟೂರ, ಪ್ರಮುಖರಾದ ಶರಣರಾಜ್ ಛಪ್ಪರಬಂದಿ, ರವೀಂದ್ರಕುಮಾರ ಭಂಟನಳ್ಳಿ, ಶಿವರಾಜ್ ಎಸ್.ಅಂಡಗಿ, ವಿನೋದ ಜೇನವೇರಿ, ಪ್ರೊ.ಮಹಾದೇವ ಬಡಾ, ಅಮೃತ ಬಿರಾದಾರ, ರೇಣುಕಾ ಸಿಂಗೆ, ಶ್ರೀಕಾಂತ ಪಾಟೀಲ ತಿಳಗೂಳ ಸೇರಿದಂತೆ ಅನೇಕರು ಉಪಸ್ತಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here