ಭಾಲ್ಕಿ: ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರ ೧೩೧ನೇ ಜಯಂತ್ಯುತ್ಸವ ಭಾಗವಾಗಿ ಬಸವಾದಿ ಶರಣರ ಜೀವನ ಮತ್ತು ಸಾಧನೆ ವಿಷಯ ಕುರಿತಾದ ಲಿಂಗೈಕ್ಯ ಎಸ್.ಎಸ್.ತರಡಿ ಪ್ರಾಯೋಜಿತ ಜಾನಪದ ಗಾಯನ ಸ್ಪರ್ಧೆ ದಿ: ೨೦-೧೨-೨೦೨೦ ರವಿವಾರರಂದು ಹಿರೇಮಠ ಸಂಸ್ಥಾನ ಭಾಲ್ಕಿಯಲ್ಲಿ ಏರ್ಪಡಿಸಲಾಗಿತ್ತು.
ಸ್ಪರ್ಧೆಯ ಉದ್ಘಾಟನಾ ಸಮಾರಂಭದ ದಿವ್ಯಸನ್ನಿಧಾನ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು ವಹಿಸಿ, ಜಾನಪದ ಕಲೆ ಉಳಿಯಬೇಕು. ಬೆಳೆಯಬೇಕು. ಆ ಕಲಾವಿದರಿಗೆ ಪ್ರೋತ್ಸಾಹ ಸಿಗುವಂತಾಗಬೇಕು ಎಂಬುದು ಈ ಸ್ಪರ್ಧೆಯ ಆಶಯವಾಗಿದೆ ಎಂದರು. ಪೂಜ್ಯ ಗುರುಬಸವ ಪಟ್ಟದ್ದೇವರು ಸಮ್ಮುಖ ವಹಿಸಿದ್ದರು. ಪೂಜ್ಯ ನಿರಂಜನ ಮಹಾಸ್ವಾಮಿಗಳು ದೀಪಬೆಳಗಿಸಿ ಸ್ಪರ್ಧೆಗೆ ಚಾಲನೆ ನೀಡಿದರು.
ಶಿವಲಿಂಗ ಹೇಡೆ ಅಧ್ಯಕ್ಷತೆ ವಹಿಸಿದ್ದರು. ಶಿಖರೇಶ್ವರ ಶೆಟಕಾರ, ತಿಪ್ಪಣ್ಣ ಉಳ್ಳಾಗಡ್ಡಿ, ಶಶಿಧರ ಕೋಸಂಬೆ, ಹಂಶಕವಿ ಅತಿಥಿಗಳಾಗಿ ಭಾಗವಹಿಸಿದರು. ಭಾಲ್ಕಿ ತಾಲೂಕಾ ಪತ್ರಕರ್ತರು ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದರು. ನಿರ್ಣಾಯಕರಾಗಿ ಸಂಗಯ್ಯ ಸ್ವಾಮಿ, ಲೋಕನಾಥ, ಚಾಂಗ್ಲೇರ, ರಾಜಕುಮಾರ ಹೂಗಾರ ಕಾರ್ಯನಿರ್ವಹಿಸಿದರು.
ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತ್ಯಕ ವಿಭಾಗಗಳನ್ನು ಮಾಡಲಾಗಿತ್ತು. ಒಂಭತ್ತು ಜನ ಮಹಿಳೆಯರು ಮತ್ತು ಆರು ಜನ ಪುರುಷರು ಸ್ಪರ್ಧಾಳುಗಳಾಗಿ ಸ್ಪರ್ಧೆಯಲ್ಲಿ ಭಾಗವಹಿಸಿದರು. ಸುಗಮ್ಮ ಸಂಗಪ್ಪ ಹಿಪ್ಪಳಗಾಂವ ಅವರಿಂದ ಬಸವಗುರುಪೂಜೆ ನೆರವೇರಿತು. ವೀರಣ್ಣ ಕುಂಬಾರ ನಿರೂಪಿಸಿದರು.