ಆರೋಗ್ಯ ಸಹಾಯಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ: ಡಾ.ಬಿ ‌ಎಸ್ ದೇಸಾಯಿ

0
63

ಕಲಬುರಗಿ: ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಪೋಷಕರ ಪಾತ್ರ ತುಂಬಾ ಮುಖ್ಯವಾಗಿದೆ. ಹಾಗೆ ನಮ್ಮ ಆರೋಗ್ಯ ಇಲಾಖೆಯ ಸಿಬ್ಬಂದಿ ಕೂಡ ಉತ್ತಮ ರೀತಿಯಲ್ಲಿ ಸಹಕಾರ ಸಲಹೆ, ನೀಡುವುದು ಜೊತೆಗೆ ಪ್ರೋತ್ಸಾಹ ನೀಡಬೇಕು ಮಕ್ಕಳಿಗೆ ಎಂದು ಅಧ್ಯಕ್ಷರು ಅಖಿಲ ಭಾರತ ಫಾರ್ಮಾಸ್ಸಿಟ್ ಸರ್ಕಾರಿ ನೌಕರರ ಸಂಘ ಡಾ.ಬಿ.‌ಎಸ್ ದೇಸಾಯಿ, ರವರು. ಹೇಳಿದರು.

ಕಲಬುರಗಿ ಆರೋಗ್ಯ ಸಹಾಯಕರ ಹಿರಿಯ/ ಕಿರಿಯ ನೌಕರರ ಪತ್ತಿನ ಸಹಕಾರ ಸಂಘ.ನಿಯಮಿತ. ವತಿಯಿಂದ ನಗರದ ಏಷಿಯಾನ ವಾಣಿಜ್ಯ ಸಂಕೀರ್ಣದ ಕಛೇರಿ ಆವರಣದಲ್ಲಿಂದು, 9ನೇ ವರ್ಷದ, ವಾರ್ಷಿಕ ಮಹಾಸಭೆಯ ಜೊತೆಗೆ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರು ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾತ್ತು.

Contact Your\'s Advertisement; 9902492681

ಇದೆ ಸಂಧರ್ಬದಲ್ಲಿ ಮಾತನಾಡುತ್ತಾ. ಸಂಘ ಸಂಸ್ಥೆಗಳು ಕಟ್ಟಿದ‌ ಸಂಘಟನೆ ವಯಕ್ತಿಕವಾಗಿ ತೆಗೆದುಕೊಂಡು ಸಂಘಟನೆ ಹಾಳು ಮಾಡಬರದು. ನಂತರ ಅದನ್ನು ಬೆಳೆಸುವ ಪ್ರವೃತ್ತಿ ಬರಬೇಕು ಹಲವಾರು ಒಡಕು ತೊಡಕುಗಳು ಬರುವುದು ಸಹಜ ಅದನ್ನು ಸಂಘದಲ್ಲಿ ಕುಳಿತುಕೊಂಡು ಸಭೆ ನಡೆಸಿ ವಿಷಯದ ಕುಲಾಂಕುಶ ಚರ್ಚೆಮಾಡಬೇಕು ಹಾಗೆ ಹಿಂದೆ ನಡೆದು ಬಂದ ದಾರಿ ನಮ್ಮ ನೌಕರರು ಯಾವುದೇ ಜಾತಿಗೆ ಸಿಮಿತರಲ್ಲ ನಾವೆಲ್ಲರೂ ಒಂದೆ ಜಾತಿ ಅದು ಒಂದೆ ಜಾತಿ ನೌಕರರ ಜಾತಿ ಎಂದು ಹೇಳಿದರು.

ರಾಜ್ಯದ ಯಾವ ಸಂಘಟನೆ ಮಾಡಿಲ್ಲ , 700 ಸದಸ್ಯರ ಪತ್ತಿನ ಸಂಘದ ಸಂಘಟನೆ ಮಕ್ಕಳಿಗೆ ಪ್ರೋತ್ಸಾಹ ಮನೆಯಿಂದ ಮಕ್ಕಳ ಭಾವನೆ ಮಕ್ಕಳಳ್ಳಿ ಬರಬೇಕು. ಪತ್ತಿನ ಸಹಕಾರ ಸಂಘದಿಂದ ಮಕ್ಕಳನ್ನು ಗುರುತ್ತಿಸಿ ಗೌರವಿಸುತ್ತಿರುವುದು ಒಂದು ಒಳ್ಳೆಯ ಪ್ರವೃತ್ತಿ ಎಂದು ಹೇಳಿದರು.

ಆರೋಗ್ಯ ಸಹಾಯಕರ ಹಿರಿಯ/ ಕಿರಿಯ ನೌಕರರ ಸಂಘದ ಅಧ್ಯಕ್ಷಾರದ ಎನ್ ಡಿ ಕಾಚಾಪೂರ ಅವರ.ಮಾತನಾಡುತ್ತಾ ಸಂಘದ ಸರ್ವ ಸದಸ್ಯರ ಸಭೆಯಲ್ಲಿ, ಗ್ರಾಮೀಣ ಪಟ್ಟಣದಲ್ಲಿ ಜನ ಸಮುದಾಯದ, ಆರೋಗ್ಯ ಇಲಾಖೆಯ ಕಾರ್ಯಕ್ರಮ ದಲ್ಲಿ ನಿರ್ವಹಿಸುತ್ತಿರುವ ಆರೋಗ್ಯ ಸಹಾಯಕರ ಮಕ್ಕಳ ಎಸ್ ಎಸ್ ಎಲ್ ಸಿ. ಹಾಗೂ ಪಿಯುಸಿ. ಯಲ್ಲಿ 80% ಕಿಂತ ಹೆಚ್ಚು ಅಂಕ ಪಡೆದಿರುವ ಪ್ರತಿಭಾವಂತ ಮಕ್ಕಳಿಗೆ. ಸಂಘದ ಅಧ್ಯಕ್ಷ ಎನ್ ಡಿ ಕಾಚಾಪೂರ ರವರು ತಮ್ಮ ವಯಕ್ತಿಕ ಕೊಡುಗೆಯಿಂದ ನಮ್ಮ ಸಂಘವು ಪ್ರತಿ ವರ್ಷದಂತೆ ನಮ್ಮ ಸಂಘಕ್ಕೆ ಹೊರೆಯಾಗದೆ ಸ್ವಂತ ವೈಯಕ್ತಿಕವಾಗಿ ಬಹುಮಾನ ಜೊತೆಗೆ ಪ್ರಮಾಣ ಪತ್ರ ಕೂಡ ನೀಡುತ್ತಾ ಬಂದಿದ್ದೆವೆ ಎಂದರು.

ವೇದಿಕೆ ಮೇಲೆ ರಾಜು ಧಾಭಿಮನಿ. ಮಜೀದ್ ಪಾಟೇಲ್, ಉಪಾಧ್ಯಕ್ಷ ರಾದ ಗುಂಡಪ್ಪ ದೋಡ್ಡಮನಿ ,ಸಹಕಾರ ಸಂಘದ ನಿರ್ದೇಶಕ ರಾದ ಕಾಶಿನಾಥ ಯಲಾಗುಂಡೆ,ಗಣಪತಿ ವಿಂಬಡಶೆಟ್ಟಿ, , ಸಂತೋಷ ಕಾಳಗಿ, ಸವೀತಾ ದೀಕ್ಷಿತ, ನಾಗಶೇಟ್ಟಿ, ಇದ್ದರು.ಇದೇ ಸಂಧರ್ಬದಲ್ಲಿ 2020 ನೇ ಮಾರ್ಚ್/ ಏಪ್ರಿಲ್ ತಿಂಗಳಿನಲ್ಲಿ ನಡೆದ ಪರೀಕ್ಷೆ ಯಲ್ಲಿ ಅತ್ಯಂತ ಹೆಚ್ಚು 80% ಅಂಕ ಪಡೆದ ವಿದ್ಯಾರ್ಥಿಗಳಿಗೆ ( ಸದಸ್ಯರ ಮಕ್ಕಳಿಗೆ ) ವೈಯುಕ್ತಿಕ ವಾಗಿ ನಗದು ಬಹುಮಾನ ವಿತರಣೆ. ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಎಸ.ಎಸ್. ಎಲ್ ಸಿ. ಅತಿಹೆಚ್ಚು ಅಂಕ ಪಡೆದ ವಿಠ್ಠಲ್ ಲಾಲಿ ಪ್ರಥಮ 2000/- ಶಿವಾನಿ ರೇವಣಸಿದ್ದಪ್ಪ ಕುಡ್ಡಳ್ಳಿ ದ್ವಿತೀಯ 1500/- ಸುರೇಖಾ ತೃತಿಯ ಬಹುಮಾನ 1000/-
ಪಿ.ಯು.ಸಿ. ಅತಿಹೆಚ್ಚು ಅಂಕ ಪಡೆದ ಮಹೇಶ್ವರಿ 2000/-
ರೋಹನ್ ಕಾಶಿನಾಥ ಯಲಗುಂಡೆ 1500/- ನೀಡಿ ಸತ್ಕಾರಿಸಲಾಯಿತು. ಹಾಗೆ 2019-2020 ನೇ ಸಾಲಿನ ಸಕಾಲದಲ್ಲಿ ಸಾಲ ಮರುಪಾವತಿಸಿದ ಸಹಕಾರಿಗಳಿಗೆ ಹಾಗೆ ವಯೋ ನಿವೃತ್ತಿ ಹೊಂದಿದ ಸಹಕಾರಿಗಳಿಗೆ, ಸನ್ಮಾನಿಸಲಾಯಿತು. ಮೊದಲಿಗೆ ಗಂಗಮ್ಮ ಹಿರೇಮಠ ಪ್ರಾಥನೆ ಗೀತೆಯೊಂದಿಗೆ.ಸ್ವಾಗತ ಕಾಶಿನಾಥ, ಕಾರ್ಯಕ್ರಮ ನಿರೂಪಣೆ ಅಮರಯ್ಯ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ರೇವಶೆಟ್ಟಿ ಭದ್ರ, ರಾಜಶೇಖರ ಕುರಿಕೋಟಿ, ಗುಂಡಪ್ಪ ಕಿಣ್ಣಿ, ಗಣೇಶ ಚಿನ್ನಕರ್, ವಿರೇಶ ಬೈರನ್, ಶರಣಯ್ಯಸ್ವಾಮಿ, ಸಪ್ನ ಎಸ್ ಚಕ್ರವರ್ತಿ. ಸಿದ್ದರೂಢ ಸಂಗಳೋಗಿ,ನೀಲಕಂಠ ಗೋಗಿ, ಮಂಜುನಾಥ ಕಂಬಳಿಮಠ , ಆರೋಗ್ಯ ಸಹಾಯಕರ ಹಿರಿಯ/ ಕಿರಿಯ ನೌಕರರ ಸಂಘದ ಸರ್ವ ಸದಸ್ಯರು ಉಪಸ್ಥಿತಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here