ಕಲಬುರಗಿ: ವಿಶ್ವಕರ್ಮಸಮಾಜದ ಅಭಿವೃದ್ಧಿನಿಗಮದ ನೂತನ ಅಧ್ಯಕ್ಷ ಬಾಬು ಪತ್ತಾರ ಅವರನ್ನು ನೇಮಕ ಮಾಡಿದಕ್ಕೆ ಬೆಂಗಳೂರಿನಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರನ್ನು ವಿಶ್ವಬ್ರಹ್ಮಣ ಸಮಾಜದ ವತಿಯಿಂದ ಅಭಿನಂದನೆ ಗೌರವಾರ್ಪಣೆ ಸಲ್ಲಿಸಲಾಯಿತು.
ವಿಶ್ವಬ್ರಹ್ಮಣ ಸಮಾಜದ ಗುರುಗಳಾದ ಅರೆಮಾದನಹಳ್ಳಿ ಸುಜ್ಞಾನಪೀಠದ ಪೂಜ್ಯರಾದ ಶ್ರೀ ಶಿವಸುಜ್ಞಾನ ತೀರ್ಥ ಸ್ವಾಮೀಜಿ, ಕಲಬುರಗಿ ವಿಶ್ವಕರ್ಮ ಏಕದಂಡಿಗಿ ಮಠದ ಪೂಜ್ಯರಾದ ಶ್ರೀ ಸುರೇಂದ್ರಸ್ವಾಮಿಜಿ, ನಂದಿ ಬೆಟ್ಟ ಆಶ್ರಮದ ಪೂಜ್ಯರಾದ ಶ್ರೀ ಶಿವಾತ್ಮಾನಂದ ಸರಸ್ವತಿ ಸ್ವಾಮಿಜಿ, ಆದಿಲಕ್ಷ್ಮೀ ಸಂಪನ್ಮೂಲ ಮಠದ ಶ್ರೀ ನೀಲಕಂಠಾಚಾರ್ಯ ಸ್ವಾಮೀಜಿ, ಮಾಜಿ ಸಚಿವ ಹಾಗೂ ಎಂಎಲ್ಸಿ ಸುನಿಲ್ ವಲ್ಯಾಪುರ್, ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬು ಪತ್ತರ್, ಸಮಾಜದ ಮುಖಂಡರಾದ ಬಸವರಾಜ್ ಪಾಂಚಾಳ್ ವಾಡಿ, ವೀರೇಂದ್ರ ಇನಾಮದಾರ ಹಾಗೂ ಸಮಾಜದ ವಿವಿಧ ಬೇಡಿಕೆಗಳು, ವಿಶ್ವಕರ್ಮ ಸಮಾಜಕ್ಕೆ ವಿಶೇಷ ಪ್ಯಾಕೇಜ ಘೋಷಿಸಬೇಕು ಸಮಾಜದ ಮಠ ಮಾನ್ಯಗಳಿಗೆ ಪ್ರತ್ಯೇಕ ಅನುದಾನ ನೀಡಬೇಕೆಂದು ಕೋರಿ ಮನವಿ ಸಲ್ಲಿಸಲಾಯಿತು.