ಸಮುದಾಯ ಆರೋಗ್ಯ ಕೇಂದ್ರದ ಸ್ತ್ರೀ ರೋಗ ತಜ್ಞೆ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ

0
108

ಶಹಾಬಾದ:ನಗರದ ಸಮುದಾಯ ಆರೋಗ್ಯ ಕೇಂದ್ರದ ಸ್ತ್ರೀ ರೋಗ ತಜ್ಞೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಗರಸಭೆಯ ವತಿಯಿಂದ ಜಿಲ್ಲಾ ಆರೋಗ್ಯ ಅಧಿಕಾರಿಗೆ ದೂರು ಸಲ್ಲಿಸಿ, ಆಗ್ರಹಿಸಿದರು.

ನಗರದ ಸಮುದಾಯ ಆರೋಗ್ಯ ಕೇಂದ್ರದ ಸ್ತ್ರೀ ರೋಗ ತಜ್ಞೆ ಡಾ. ಚಂದ್ರಿಕಾ ಅವರು ವಾರಕ್ಕೆ ಒಂದೇ ದಿನ ಕರ್ತವ್ಯಕ್ಕೆ ಹಾಜರಾಗುತ್ತಾರೆ.ಅದು ಬುಧವಾರದಂದ ಮಾತ್ರ.ಅಲ್ಲದೇ ಹಾಜರಾದರೂ ಕೇವಲ ಒಂದೆರಡು ಗಂಟೆ ಮಾತ್ರ ಕೆಲಸ ಮಾಡುತ್ತಾರೆ.ಅಲ್ಲದೇ ಆಸ್ಪತ್ರೆಗೆ ಬಂದ ರೋಗಿಗಳ ವಿರುದ್ಧ ಅಸಭ್ಯವಾಗಿ ವರ್ತಿಸುತ್ತಾರೆ.ಸರಿಯಾಗಿ ಚಿಕಿತ್ಸೆಯೂ ನೀಡದೇ, ತಮ್ಮ ಖಾಸಗಿ ಆಸ್ಪತ್ರೆಗೆ ಬರುವಂತೆ ಹೇಳುತ್ತಾರೆ.ಆದರೆ ಅಲ್ಲಿ ಹೋದರೇ ಮನಸ್ಸಿಗೆ ಬಂದಂತೆ ಹಣ ಕೀಳುತ್ತಿದ್ದಾರೆ ಎಂಬುದು ಸಾರ್ವಜನಿಕರ ಹಾಗೂ ನಗರಸಭೆಯ ಸದಸ್ಯರ ದೂರು ಬರುತ್ತಿದೆ.

Contact Your\'s Advertisement; 9902492681

ಅಲ್ಲದೇ ಒಂದೆರಡು ದಿನಗಳ ಹಿಂದಷ್ಟೇ ನಗರಸಭೆಯ ಅಧ್ಯಕ್ಷೆ, ನಗರಸಭೆಯ ಸದಸ್ಯರಿಗೆ, ವಿವಿಧ ಪಕ್ಷದ ಮುಖಂಡರಿಗೆ ಅಸಭ್ಯವಾಗಿ ವರ್ತಿಸಿ ಗೊಂದಲದ ವಾತಾವರಣವನ್ನು ಸೃಷ್ಠಿಸಿದ್ದಾರೆ.ಆದ್ದರಿಂದ ಅವರನ್ನು ಇಲ್ಲಿಂದ ವರ್ಗಾವಣೆ ಮಾಡಬೇಕು.ಇಲ್ಲದಿದ್ದರೇ ಒಂದೆರಡು ದಿನಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ,ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ತಿಪ್ಪಣ್ಣ ನಾಟೇಕಾರ, ನಗರಸಭೆಯ ಸದಸ್ಯೆ ಸಾಬೇರಾಬೇಗಂ ಅವರು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ದೂರಿನ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಗಿರೀಶ ಕಂಬಾನೂರ, ಸದಸ್ಯರಾದ ಸೂರ್ಯಕಾಂತ ಕೋಬಾಳ, ನಾಗರಾಜ ಕರಣಿಕ್,ಮಲ್ಲಿಕಾರ್ಜುನ ವಾಲಿ,ಶಿವಕುಮಾರ ನಾಟೇಕಾರ,ಮಹ್ಮದ್ ಅಜರ್,ಕಿರಣ ಚವ್ಹಾಣ, ಜಾವೀದ್ ಸೇರಿದಂತೆ ಅನೇಕರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here