ಕಲಬುರಗಿ: ರೈತರ ಹಕ್ಕೊತ್ತಾಯಗಳಿಗಾಗಿನ ನಿರಂತರ ಧರಣಿಯ ರಾತ್ರಿ ಹೊತ್ತಲ್ಲಿ ಟೆಂಟಲ್ಲಿಯೇ ಮಲಗುವ ಹೋರಾಗಾರರಿಗೆ ಸಂಸ್ಥೆಗಳಿಂದ ಹೊದಿಕೆ ಹಾಗೂ ಗರಂ ಟೋಪಿ ವಿತರಣೆ ಮಾಡಲಾಯಿತು.
ನಗರದ ಹೃದಯ ಭಾಗವಾದ ಜಗತ್ ವೇತದಲ್ಲಿ ಕಳೆದ 9 ದಿನಗಳಿಂದ ಕೃಷಿ ಮಸೂದೆ ಹಾಗೂ ಗೋವು ಹತ್ಯೆ ನಿಷೇಧ ಪ್ರತಿಬಂಧಕ ಕಾಯ್ದೆಗಳ ವಾಪಸ್ ಗೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟಕ್ಕೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತವಾಗುತ್ತಿದೆ.
ಪ್ರತಿಭಟನೆಯಲ್ಲಿ ಹಡಪದ ಅಪ್ಪಣ್ಣ ಸಮಾಜದ ಅಧ್ಯಕ್ಷ ಮತ್ತು ಮೀಟ್ ಟ್ರೇಡರ್ಸ್ ಅಸೋಸಿಯೇಷನ್ ಅಧ್ಯಕ್ಷರು ಹೋರಾಟ ನಿರತರಿಗೆ ಹೊದಿಕೆ ಮತ್ತು ಗರಂ ಟೋಪಿ ವಿತರಿಸಿ ಧರಣಿಗೆ ಬೆಂಬಲಿಸಿದರು.