ಕಲಬುರಗಿ: ಪತ್ರಕರ್ತ-ಲೇಖಕ ಶಿವರಂಜನ್ ಸತ್ಯಂಪೇಟೆ ಅವರಿಗೆ ಗುಲ್ಬರ್ಗ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ನೀಡಿದೆ.
ಗುಲ್ಬರ್ಗ ವಿವಿ ಕನ್ನಡ ಅಧ್ಯಯನ ಸಂಸ್ಥೆಯ ವಿಶ್ರಾಂತ ಪ್ರಾಧ್ಯಾಪಕ ಡಾ. ವೀರಣ್ಣ ದಂಡೆ ಮಾರ್ಗದರ್ಶನದಲ್ಲಿ ಶಿವರಂಜನ್ ಸತ್ಯಂಪೇಟೆ ಅವರು ‘ಶರಣರ ಕುರಿತ ಕನ್ನಡ ನಾಟಕಗಳು’ ವಿಷಯ ಕುರಿತು ಮಂಡಿಸಿದ ಮಹಾ ಪ್ರಬಂಧಕ್ಕೆ ಪಿಎಚ್.ಡಿ ಪದವಿ ನೀಡಲಾಗಿದೆ ಎಂದು ವಿವಿ ಕುಲಸಚಿವ (ಮೌಲ್ಯ ಮಾಪನ) ಸಂಜೀವಕುಮಾರ ಕೆ.ಎಂ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.