ಕಲಬುರಗಿ: ಜಿಲ್ಲೆಯ ಸಣ್ಣೂರ ರಸ್ತೆಯ ಹತ್ತಿರ ಬೈಕ್ ಮತ್ತು ಬಸ್ ನಡುವೆ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಶಾಮ್ ಕುಮಾರ್ ತಂದೆ ಲಕ್ಷ್ಮಣ ಸೇಡಂಕರ್ (26) ಮೃತಪಟ್ಟ ದುರ್ದೈವಿ. ಶಾಮ್ ಸೇಡಂ ತಾಲ್ಲೂಕಿನ ಕುರುಕುಂಟಾ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದ್ದು, ಬುಧವಾರ ಗ್ರಾಮದಿಂದ ಕಲಬುರಗಿಗೆ ಆಗಮಿಸುತಿದ್ದಾಗ ಮಡಿಯಾಳ ಗ್ರಾಮದ ಹತ್ತಿರ ಬೈಕ್ ಸವಾರನಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಬೈಕ್ ಸವಾರ ಶಾಮ್ ಸಾವನಪ್ಪದ್ದಾರೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಆಗಮಿಸಿದ ಕಲಬುರಗಿ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಈ ಕುರಿತು ಕಲಬುರಗಿ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.