ಸುರಪುರ: ತೊಗರಿ ಖರೀದಿ ಕೇಂದ್ರದಲ್ಲಿ ಹೆಸರು ನೊಂದಣಿಗೆ ಬರುವ ಯಾವ ರೈತರಿಗು ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಿ ಹಾಗು ಹೆಸರು ನೊಂದಣಿ ಮಾಡಿದ ನಂತರ ಅವರಿಗೆ ದೃಢಿಕರಣದ ರಸೀದಿಯನ್ನು ಕಡ್ಡಾಯವಾಗಿ ನೀಡುವಂತೆ ಜಿಲ್ಲಾಧಿಕಾರಿ ಡಾ: ರಾಗಪ್ರೀಯ ಆರ್ ತಿಳಿಸಿದರು.
ಇಂದು ನಗರದ ಹಸನಾಪುರ ಪೆಟ್ರೋಲ್ ಬಂಕ್ ಬಳಿಯಲ್ಲಿನ ಗಂಜ್‍ನಲ್ಲಿರುವ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಕಚೇರಿಯಲ್ಲಿ ತೆರೆಯಲಾದ ತೊಗರಿ ಖರೀದಿ ಕೇಂದ್ರದಲ್ಲಿ ನಡೆದ ಹೆಸರು ನೊಂದಣಿಯನ್ನು ಪರಿಶೀಲಿಸಿ ಮಾತನಾಡಿ,ಒಬ್ಬ ರೈತರಿಂದ ಕನಿಷ್ಠ 7 ಕ್ವಿಂಟಲ್‍ನಿಂದ 20 ಕ್ವೀಂಟಲ್ ವರೆಗೆ ತೆಗೆದುಕೊಳ್ಳಲಾಗುವುದು, ಈಗಾಲೆ ಜಿಲ್ಲೆಯಾದ್ಯಂತ 38 ತೊಗರಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ,ಇದೇ ತಿಂಗಳ 30ನೇ ತಾರೀಖು ರೈತರು ತಮ್ಮ ಹೆಸರು ನೊಂದಾಯಿಸಿಕೊಳ್ಳಲು ಕೊನೆಯ ದಿನವಾಗಿದ್ದು ಬೇಗನೆ ಹೆಸರು ನೊಂದಾಯಿಸಿಕೊಳ್ಳುವಂತೆ ತಿಳಿಸಿದರು.ಈಗಾಗಲೆ ಜಿಲ್ಲೆಯಾದ್ಯಂತ ಎರಡು ಸಾವಿರಕ್ಕೂ ಹೆಚ್ಚಿನ ರೈತರು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದು 2021ರ ಜನೆವರಿ 1 ರಿಂದ ತೊಗರಿ ಖರೀದಿ ಆರಂಭಿಸುವುದಾಗಿ ತಿಳಿಸಿದರು.
ನಂತರ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ಆಗಮಿಸಿದ್ದ ರೈತರ ಹೆಸರು ನೊಂದಣಿಯನ್ನು ಪರಿಶೀಲಿಸಿದರು ಹಾಗು ಸ್ವತಃ ತಾವೇ ರೈತರ ಹೆಸರು ನೊಂದಣಿಯ ಬಗ್ಗೆ ದೃಢಿಕರಿಸಿ ಗಣಯಂತ್ರದಲ್ಲಿನ ರಸೀದಿ ಪರಿಶೀಲಸಿ ರೈತರಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಕೃಷಿ ಮಾರಾಟ ಇಲಾಖೆ ಸಹಾಯಕ ನಿರ್ದೇಶಕ ಎಮ್.ಭೀಮರಾಯ ಸುರಪುರ ಕೃಷಿ ಸಹಾಯಕ ನಿರ್ದೇಶಕ ಗುರುನಾಥ ಕಂದಾಯ ನಿರೀಕ್ಷಿಕ ಗುರುಬಸಪ್ಪ ಉಗ್ರಾಣ ಇಲಾಖೆಯ ಗದ್ದೆಪ್ಪ ರೋಡಲಬಂಡ ಎಪಿಎಮ್‍ಸಿ ವ್ಯವಸ್ಥಾಪಕ ಅನ್ಸರ್ ಪಟೇಲ್ ಗ್ರಾಮ ಲೆಕ್ಕಾಧಿಕಾರಿ ಮಲ್ಲಮ್ಮ ಟಿಎಪಿಸಿಎಮ್‍ಎಸ್‍ನ ಕಾರ್ಯದರ್ಶಿ ಶಿವರುದ್ರ ಉಳ್ಳಿ ಸೇರಿದಂತೆ ಅನೇಕ ಜನ ರೈತರಿದ್ದರು.