ತೊಗರಿ ಖರೀದಿ ಹೆಸರು ನೊಂದಣಿ ದಿನಾಂಕದ ಬಗ್ಗೆ ರೈತರಿಗೆ ಭಯ ಬೇಡ: ಎಮ್.ಭೀಮರಾಯ

0
38

ಸುರಪುರ: ಜಿಲ್ಲೆಯಾದ್ಯಂತ ರೈತರ ತೊಗರಿ ಮಾರಾಟಕ್ಕಾಗಿ ಹೆಸರು ನೊಂದಾಯಿಸಿಕೊಳ್ಳಲು ಈಗಾಗಲೆ ಡಿಸೆಂಬರ್ 18 ರಿಂದಲೇ ಆರಂಭಿಸಲಾಗಿದ್ದು ಇದೇ 30ರ ವರೆಗೆ ಸರಕಾರ ಅವಕಾಶ ನೀಡಿದೆ ರೈತರು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳುವಂತೆ ಜಿಲ್ಲಾ ಕೃಷಿ ಮಾರಾಟ ಇಲಾಖೆ ಸಹಾಯಕ ನಿರ್ದೇಶಕ ಎಮ್.ಭೀಮರಾಯ ತಿಳಿಸಿದರು.

ನಗರದ ಹಸನಾಪುರ ಗಂಜ್‍ನಲ್ಲಿಯ ಕೃಷಿ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಕಚೇರಿಯಲ್ಲಿನ ತೊಗರಿ ಖರೀದಿ ಕೇಂದ್ರದಲ್ಲಿನ ರೈತರು ಹೆಸರು ನೊಂದಣಿ ಕಚೇರಿಗೆ ಜಿಲ್ಲಾಧಿಕಾರಿಗಳೊಂದಿಗೆ ಭೇಟಿ ನೀಡಿ ನಂತರ ಮಾತನಾಡಿ,ಜಿಲ್ಲೆಯ ರೈತರು ತೊಗರಿ ಮಾರಾಟಕ್ಕೆ ಹೆಸರು ನೊಂದಣಿಗೆ ಇದೇ ಡಿಸೆಂಬರ್ 30ರ ವರೆಗೆ ಅವಕಾಶವಿರುವುದರಿಂದ ಎರಡು ದಿನದಲ್ಲಿ ಹೇಗೆ ನೊಂದಣಿ ಮಾಡಿಸುವುದು ಎಂದು ಚಿಂತಿಸಬೇಕಿಲ್ಲ,ಸರಕಾರ ಹೆಸರು ನೊಂದಣಿಗೆ ಕೊನೆಯ ದಿನವನ್ನು ಮುಂದೂಡಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

Contact Your\'s Advertisement; 9902492681

ಜಿಲ್ಲೆಯಾದ್ಯಂತ ಅನೇಕ ಗ್ರಾಮಗಳಲ್ಲಿನ ರೈತರು ಗ್ರಾಮ ಪಂಚಾಯತಿ ಚುನಾವಣೆ ಅಂಗವಾಗಿ ಹೆಸರು ನೊಂದಾಯಿಸಲು ಸಾಧ್ಯವಾಗಿಲ್ಲ,ಆದ್ದರಿಂದ ಎರಡು ದಿನದಲ್ಲಿ ಹೆಸರು ನೊಂದಾಯಿಸಿಕೊಳ್ಳಲು ಹೇಗೆ ಸಾಧ್ಯ ಎಂದು ತಮ್ಮ ಬೇಸರ ವ್ಯಕ್ತಪಡಿಸಿರುವುದು ಗಮನಕ್ಕೆ ಬಂದಿದ್ದು,ರೈತರ ಬೇಡಿಕೆಯನ್ನು ಈಗಾಗಲೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ,ಸರಕಾರವು ನೊಂದಣಿಗೆ ಹೆಚ್ಚಿನ ಕಾಲವಕಾಶ ನೀಡಲಿದೆ.ಆದ್ದರಿಂದ ರೈತರು ಆತಂಕ ಪಡದೆ ತಮ್ಮ ಸೂಕ್ತ ದಾಕಲಾತಿಗಳೊಂದಿಗೆ ನೊಂದಣಿ ಕೇಂದ್ರದಲ್ಲಿ ಹೆಸರು ನೊಂದಾಯಿಸಿಕೊಳ್ಳುವಂತೆ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಟಿಎಪಿಸಿಎಮ್‍ಎಸ್ ಕಾರ್ಯದರ್ಶಿ ಶಿವರುದ್ರ ಉಳ್ಳಿ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಗದ್ದೆಪ್ಪ ರೋಡಲಬಂಡ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here