ರಂಗಂಪೇಟೆಯಲ್ಲಿ ಆನೆಕಾಲು ಮಾತ್ರೆ ವಿತರಣೆ ಪರಿಶೀಲಿಸಿದ ರಾಜ್ಯ ನೋಡಲ್ ಅಧಿಕಾರಿ ಡಾ:ಜಯಂತಿ

0
26

ಸುರಪುರ: ನಗರದಲ್ಲಿ ಆನೆಕಾಲು ರೋಗ ನಿರ್ಮೂಲನೆಗಾಗಿ ವಿತರಿಸಲಾಗುತ್ತಿರುವ ಔಷಧಿ ವಿತರಣೆ ಅಭಿಯಾನವನ್ನು ಆನೆಕಾಲು ರೋಗ ನಿಯಂತ್ರಣ ರಾಜ್ಯ ನೋಡಲ್ ಅಧಿಕಾರಿ ಡಾ: ಜಯಂತಿ ರಂಗಂಪೇಟೆಗೆ ಭೇಟಿ ನೀಡಿ ವೀಕ್ಷಿಸಿದರು.

ನಗರದ ರಂಗಂಪೇಟೆಯಲ್ಲಿ ನಡೆಯುತ್ತಿರುವ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದ ಅವರು,ಇದೇ ತಿಂಗಳು 15ನೇ ತಾರೀಖಿನಿಂದ 24ರ ವರೆಗೆ ಆನೆಕಾಲು ರೋಗ ನಿವಾರಣೆಗೆ ಸಾಮೂಹಿಕ ಔಷಧಿ ನುಂಗಿಸುವ ಅಭಿಯಾನ ನಡೆಯುತ್ತಿದೆ,ಜನರು ತಮ್ಮ ಮನೆಗಳಿಗೆ ಭೇಟಿ ನೀಡುವ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ನೀಡುವ ಮಾತ್ರೆಗಳನ್ನು ತೆಗೆದುಕೊಂಡು ಸೇವಿಸುವಂತೆ ಕರೆ ನೀಡಿದರು.

Contact Your\'s Advertisement; 9902492681

ಇನ್ನು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ತಾವು ಮಾತ್ರೆಗಳನ್ನು ಮನೆಗಳಿಗೆ ನೀಡಲು ಹೋದಾಗ ಮನೆಯಲ್ಲಿ ಇಲ್ಲವೆಂದು ಬಿಟ್ಟಿದ್ದರೆ ಅಂತಹ ಮನೆಗಳಿಗೆ ಪುನಃ ಭೇಟಿ ನೀಡಿ ಮಾತ್ರೆಗಳನ್ನು ವಿತರಿಸುವಂತೆ ತಿಳಿಸಿದರು.

ಅಲ್ಲದೆ ತಾಲೂಕು ಆರೋಗ್ಯಾಧಿಕಾರಿ ಡಾ: ಆರ್.ವಿ.ನಾಯಕರ ಮಾರ್ಗದರ್ಶನದಲ್ಲಿ ಎಲ್ಲೆಡೆ ಉತ್ತಮವಾಗಿ ಅಭಿಯಾನ ನಡೆಸಿ ಮಾತ್ರೆಗಳನ್ನು ವಿತರಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ರಂಗಂಪೇಟೆಯ ಕೋಮಟಗಲ್ಲಿ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ನಡೆಯುತ್ತಿರುವ ಮಾತ್ರೆ ವಿತರಣೆಯನ್ನು ಪರಿಶೀಲಿಸಿ ನಂತರ ಪ್ರಿಯದರ್ಶಿನಿ ಪಿಯು ಕಾಲೇಜಿಗೆ ತೆರಳಿ ಕಾಲೇಜಿನಲ್ಲಿಯ ಎಲ್ಲಾ ಉಪನ್ಯಾಸಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಮಾತ್ರೆಗಳನ್ನು ನುಂಗಿಸಿದರು.ನಂತರ ತಾಲೂಕಿನ ದೇವರಗೋನಾಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಯಾದಗಿರಿ ಡಿಯುಬಿಡಿಸಿಒ ಡಾ: ಲಕ್ಷ್ಮೀಕಾಂತ್ ರಾಯಚೂರು ಡಿಎಫ್‍ಸಿಯು ಕಿರಿಯ ಆರೋಗ್ಯ ಪ್ರಯೋಗ ತಂತ್ರಜ್ಞ ಶೇಖರರೆಡ್ಡಿ ಸುರಪುರ ಎನ್‍ಎಫ್‍ಸಿಯು,ಕಿರಿಯ ಆರೋಗ್ಯ ಪ್ರಯೋಗ ತಂತ್ರಜ್ಞ ರಾಮಚಂದ್ರರೆಡ್ಡಿ ಬೋನಾಳ ಡಿಯುಬಿಡಿಸಿಒ ಮೇಲ್ವಿಚಾರಕ ಸೂಗುರಪ್ಪ , ನಾಗಪ್ಪ ಕುಂಬಾರ ಕಿರಿಯ ಆರೋಗ್ಯ ಸಹಾಯಕ ಸುರೇಶ ಖಾದಿ,ಆರೋಗ್ಯ ಸಹಾಯಕಿಯರಾದ ಪದ್ಮ ನಾಯಕ ,ಜೇಜಮ್ಮ ಅಂಗನವಾಡಿ ಕಾರ್ಯಕರ್ತೆ ಅಕ್ಷತಾ ಗುಳಗಿ ಸಹಾಯಕಿ ಮಾಲನಬಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here