ಕಲಬುರಗಿ: ಕಳೆದ 15ದಿನಗಳಿಂದ ರೈತರ ಹಕ್ಕುಗಳಿಗೆ ಹಾಗೂ ಕೃಷಿ ವಿರೋಧಿ ಕಾನೂನನ್ನುಗಳನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ಅಖಿಲ ಭಾರತ ಕಿಸಾನ್ ಸಂಘರ್ಷ ಸಂಘಟನೆಗೆ ಕರ್ನಾಟಕ ಸೋಷಿಯಲ್ ಜಾಗೃತಿ ಫೋರಂ ಇಂದು ಬೆಂಬಲ ಸೂಚಿಸಿದೆ.
ನಗರದ ಜಗತ್ ವೃತದಲ್ಲಿ ನಡೆಯುತ್ತಿರು ನಿರಂತರ ಹೋರಾದಲ್ಲಿ ಭಾಗವಹಿಸಿ ಫೋರಂ ಸಂಸ್ಥಾಪಕ ಅಧ್ಯಕ್ಷರಾದ ಸಾಜಿದ್ ಅಲಿ ರಂಜೋಳ್ವಿ, ತಾಮೀರ್ ಮಿಲ್ಲತ್ ಅಧ್ಯಕ್ಷರಾದ ಅಬ್ದುಲ್ ಜಬ್ಬಾರ ಗೋಲಾ, ಅಬ್ದುಲ್ ಕರೀಮ್, ನುಸರತ್ ಬೇಗಂ, ನಯಾ ಸವೇರಾ ಸಂಘಟನೆಯ ಸಾಹೇರಾ ಬಾನು, ಅಲ್ ತಮಸ್ ಅತಿಥಿಗೃಹದ ಮಾಲೀಕರಾದ ಅಬ್ದುಲ್ ಸಲೀಮ್, ಫೋರಂ ಜಿಲ್ಲಾ ಅಧ್ಯಕ್ಷರಾದ ಬಾಬಾ ಫಕರೋದ್ದಿನ್, ಜಾವಿದ್ ಮುಸ್ತಾಕ್, ಮೊಹಮ್ಮದ್ ಬಾಬಾ, ಶಮೀಮ್ ಬೇಗಂ ಸೇರಿದಂತೆ ಹಲವರ ನೇತೃತ್ವದಲ್ಲಿ ಬೆಂಬಲ ವ್ಯಕ್ತಪಡಿಸಿದರು.