ಹಡಪದ ಸಮಾಜದ ಪ್ರತ್ಯೇಕ ಅಭಿವೃದ್ದಿ ನಿಗಮ ಮಂಡಳಿ ರಚನೆ ಆಗ್ರಹ

0
91

ಕಲಬುರಗಿ: ಹಡಪದ (ಕ್ಷೌರಿಕ) ಸಮಾಜದ. ಪ್ರತ್ಯೇಕ ಅಭಿವೃದ್ದಿ ನಿಗಮ ಮಂಡಳಿ   ಜಾರಿಗೆ ಬರಲಿ.ಹಾಗೂ ನಮ್ಮ ಹಡಪದ (ಕ್ಷೌರಿಕ) ಸಮಾಜದ ಪ್ರತ್ಯೇಕ ಅಭಿವೃದ್ದಿ ನಿಗಮ ಮಂಡಳಿ ರಚನೆ ಘೊಷಣೆ. ಮಾಡಲಿ. ಸಿ.ಎಂ ಬಿಎಸ್‌ವೈ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ. ಮತ್ತು ಉಪಮುಖ್ಯಮಂತ್ರಿಗಳು  ಗೋವಿಂದ ಕಾರಜೋಳ ಅವರು ಸಮಾಜದ ಕಡೆನೊ ಗಮನ ಹರಿಸಿ ಎಂದು ಯೂತ್ ಅಧ್ಯಕ್ಷ ಮಹಾತೇಶ ಇಸ್ಲಾಂಪುರೆ ಹಾಗೂ ಯೂತ್ ಜಿಲ್ಲಾ ಪ್ರಧಾನ ಕಾರ್ಯಧರ್ಶಿ ಮಲ್ಲಿಕಾರ್ಜುನ ಬಿ  ಹಡಪದ ಸುಗೂರ ಎನ್ ಅವರು ಒತ್ತಾಯಿಸಿದ್ದಾರೆ.

ನಮ್ಮ ಹಡಪದ (ಕ್ಷೌರಿಕ) ಸಮಾಜದ ಬೇಡಿಕೆಗಳು ಇಡೇರಿಸಲಿ ರಾಜ್ಯ ಬಿಜೆಪಿ ಸರ್ಕಾರಕ್ಕೆ ಒತ್ತಾಯ ಸಿ.ಎಂ ಬಿ.ಎಸ್ ಯಡಿಯೂರಪ್ಪ ನವರು ೨೦೧೭ ಮೇ ೨ ರಂದು ಆಗ ವಿರೋದ ಪಕ್ಷದ ನಾಯಕರಾಗಿದ್ದಾಗ ಕಲಬುರಗಿ  ವೀರಶೈವ ಕಲ್ಯಾಣ ಮಂಟಪದಲ್ಲಿ  ಹಡಪದ ಸಮಾಜದ ಜನ ಜಾಗೃತಿ  ಸಮಾವೇಶದಲ್ಲಿ ಭಾಗವಹಿಸಿದ್ದಾಗ. ನಮ್ಮ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ೨೪ ಗಂಟೆಗಳಲ್ಲಿ (೧) ಹಡಪದ ಕ್ಷೌರಿಕ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ದಿ ನಿಗಮ ಮಂಡಳಿ ರಚನೆ ಹಾಗೊ (೨) ಹಡಪದ ಕ್ಷೌರಿಕ ಸಮಾಜವನ್ನು ಪ್ರವರ್ಗ-೧ ಕ್ಕೆ ಮತ್ತು ಎಸ್ಟಿಗೆ ಸೇರ್ಪಡೇ ಗೇ ಕೇಂದ್ರಕ್ಕೆ  ಶಿಪಾರಸ್ಥು ಮಾಡುವೆ ಎಂದು ಭರವಸೆ ನೀಡಿದ್ದರು,(೩) ಹಡಪದ ಕ್ಷೌರಿಕ ಸಮಾಜಕ್ಕೆ “ಅಜಾಮ್ ಎಂಬ ಪದವು ಉರ್ದು ಪದವಾಗಿದ್ದು  ಈ ಪದ ಬಳಕ್ಕೆ ಮಾಡಿದರೆ ಕಾನೂನಿನ ಪ್ರಕಾರ ಅಟ್ರಾಸಿಟಿ. ಕಾನೂನು ಜಾರಿಗೆ ತರುವಂತೆ.

Contact Your\'s Advertisement; 9902492681

(೪) ನಮ್ಮ ಸಮಾಜದ ಈರಣ್ಣಾ  ಸಿ ಹಡಪದ ಸಣ್ಣೂರ  ಕಲ್ಯಾಣ ಕರ್ನಾಟಕ ಹಡಪದ ಕ್ಷೌರಿಕ ಸಮಾಜದ ವಿಭಾಗೀಯ ಅಧ್ಯಕ್ಷರು ಇವರನ್ನು ರಾಜಕೀಯದಲ್ಲಿ ನಿಗಮ ಮಂಡಳಿಗೆ ಯಾವುದಾದರೊದು   ನಾಮ ನೀರ್ಧೇಶನ ಮಾಡುವೆ ಎಂದು ಹೇಳಿದ್ದರು.,. ಆದರೆ ಆ ಭರವಸೆಯ ಮಾತಿನಂತೆ ಸಿ.ಎಮ್ ಯಡಿಯೂರಪ್ಪನವರು. ಮತ್ತು ಗೋವಿಂದ ಕಾರಜೋಳ ಸಾಹೇಬ್ರು  ತುಟಿ ಬಿಚ್ಚದೆ..ಮೌನ ವಾಗಿದ್ದು. ನಮ್ಮ ಸಮಾಜಕ್ಕೆ ಬಹಳಷ್ಟು ನೋವು ಉಂಟು ಮಾಡಿದೆ. ಹಡಪದ ಕ್ಷೌರಿಕ ಸಮಾಜಕ್ಕೆ ಕೊಟ್ಟ ಮಾತು ತಪ್ಪಿದ್ದಾರೆ. ಹಾಗು (೫)   ಶ್ರೀ ಹಡಪದ ಅಪ್ಪಣ ನವರ ಮಠಕ್ಕೆ  ಸುಕ್ಷೇತ್ರ  ತಂಗಡಿಗಿ. ಕೂಡಲಸಂಗಮ,  ಹಣ ಬಿಡುಗಡೆ ಮಾಡದೇ ಸಿ.ಎಮ್ ಸಾಹೇಬ್ರು ಮಲತಾಯಿ ಧೋರಣೆ ಮಾಡುತ್ತಿದ್ದೀರಿ ಎಂದು ಆರೋಪಿಸಿದ್ದರು.

ಕರ್ನಾಟಕ ರಾಜ್ಯದಲ್ಲಿ  ಹಡಪದ ಸಮಾಜವು ೧೬ರಿಂದ ೧೮ ಲಕ್ಷ ಜನಸಂಖ್ಯೆ ಹಡಪದ ಸಮಾಜದವರಿದ್ದು, ಎಲ್ಲಾ ಕ್ಷೇತ್ರಗಳಲ್ಲಿ ಹಿಂದುಳಿದ ಸಮಾಜ ಇದಾಗಿದೆ.ಇದರ. ಶ್ರೇಯೋಭಿವೃದ್ದಿಗೆ, ಹಡಪದ ಸಮಾಜದ ಹೆಸರಿನಲ್ಲಿ ಪ್ರತ್ಯೇಕ ಅಭಿವೃದ್ದಿ ನಿಗಮ ಮಂಡಳಿ ರಚನೆ ” ಸ್ಥಾಪಿಸಬೇಕು ಎಂದು ಯೂತ್ ಅಧ್ಯಕ್ಷ ಮಹಾತೇಶ ಇಸ್ಲಾಂಪುರೆ ಹಾಗೂ ಯೂತ್ ಜಿಲ್ಲಾ ಪ್ರಧಾನ ಕಾರ್ಯಧರ್ಶಿ ಮಲ್ಲಿಕಾರ್ಜುನ ಬಿ  ಹಡಪದ ಸುಗೂರ ಎನ್ ಒತ್ತಾಯಿಸಿದ್ದರು.

ಶೈಕ್ಷಣಿಕವಾಗಿ ಹಿಂದುಳಿದಿರುವ ಹಡಪದ ಸಮಾಜದ ?ಏಳಿಗೆಗಾಗಿ ಪ್ರತ್ಯೇಕ ಅಭಿವೃದ್ದಿ ನಿಗಮ ಸ್ಥಾಪಿಸಿ ೨೫೦ ಕೋಟಿ ರೂ.ಅನುಧಾನ  ಮೀಸಲಿಡಬೇಕು ಎಂದು ಅವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದ್ದಾರೆ.

ಈಗಾಗಲೆ ಲಿಂಗಾಯತ ಹಾಗು ಮರಾಠಾ ಸಮುಧಾಯಗಳ ಅಭಿವೃದ್ದಿ ನಿಗಮ  ಮಾಡಿದ್ದು ಸ್ವಾಗತಾರ್ಹ. ಬಹಳ ದಿನಗಳಿಂದ ಹಡಪದ ಸಮುಧಾಯದಿಂದಲೂ ಈ ಬೇಡಿಕೆಯಿಂದೆ. ನಿಗಮ ಸ್ಥಾಪಿಸಿದ್ದರೆ.ಆರ್ಥಿಕ ಮತ್ತು ಸಾಮಾಜಿಕ ಶೈಕ್ಷಣಿಕವಾಗಿ. ರಾಜಕೀಯವಾಗಿ ಅನೂಕೂಲ ಮಾಡಿಕೊಟ್ಟಂತಾಗುತ್ತದೆ ಎಂದು ಅವರು ಹೇಳಿದ್ದಾರೆ.

ನಮ್ಮ ಹಡಪದ ಕ್ಷೌರಿಕ ಸಮಾಜದ ಬೇಡಿಕೆ ಇಡೇರಿಸುವಂತೆ ರಾಜ್ಯ ಬಿಜೆಪಿ  ಸರ್ಕಾರಕ್ಕೆ ಎಚ್ಚರಿಸಿ.ಹಾಗು ಆದಷ್ಟು ಬೇಗ ಮೂಲತ: ಕನ್ನಡಿಗರಿಗರಾದ ಹಡಪದ ಕ್ಷೌರಿಕ ಸಮಾಜಕ್ಕೆ  ಕೊಟ್ಟ ಮಾತಿನಂತೆ  ಸಿ.ಎಂ ಯಡಿಯೂರಪ್ಪ ಸಾಹೇಬ್ರು ನಡೆಯಲಿ ಎಂದು ಒತ್ತಾಯಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here