17ದಿನದ ರೈತರ ಹಕ್ಕೊತ್ತಾಯಗಳಿಗಾಗಿ ನಡೆಯುತ್ತಿರುವ ಧರಣಿ ಮುಕ್ತಾಯ

0
23

ಕಲಬುರಗಿ: ರೈತರ ಹಕ್ಕೊತ್ತಾಯಗಳಿಗಾಗಿ ನಡೆದ ನಿರಂತರ ಧರಣಿಯು ಹದಿನೇಳನೆ ದಿನ ಪೂರೈಸಿ ಮೊದಲನೆ ಹಂತದ ಸಮಾರೋಪವನ್ನು ಪಾದಯಾತ್ರೆ, ಮೆರವಣಿಗೆ ಬಹಿರಂಗ ಸಭೆ ಮತ್ತು ಸಭೆಯಲ್ಲಿ ರೈತ ವಿರೋಧಿ ಕರಾಳ ಕಾಯ್ದೆಗಳ ದಹನ ಮಾಡುವ ಮೂಲಕ ನಡೆಸಲಾಯಿತು.

ಸಮಾರೋಪದ ಪಾದಯಾತ್ರೆಯು ನ್ಯಾಷನಲ್ ಕಾಲೇಜ್ ವೃತ್ತ (ಸಾತ್ ಗುಂಬಜ್ ವೃತ್ತ)ದಿಂದ ಆರಂಭಗೊಂಡು ಸರಾಫ್ ಬಜಾರ ತರಕಾರಿ ಮಾರುಕಟ್ಟೆಯ ಮೂಲಕ ಸೂಪರ್ ಬಜಾರಿನಿಂದ ಬಂದು ಜಗತ್ ವೃತ್ತದಲ್ಲಿ ರೈತ ವಿರೋಧಿ ಕಾಯ್ದೆಗಳನ್ನು, ವಿದ್ಯುತ್ ಬಿಲ್ ೨೦೨೦ , ಭೂಸುಧಾರಣಾ ತಿದ್ದುಪಡಿ ಕಾಯ್ದೆ ಮತ್ತು ಗೋಹತ್ಯಾ ನಿಷೇಧ ಸುಗ್ರಿವಾಜ್ಞೆಯ ಪ್ರತಿಗಳನ್ನು ದಹಿಸಲಾಯಿತು.

Contact Your\'s Advertisement; 9902492681

ಬಹಿರಂಗ ಸಭೆಯನ್ನುದ್ದೇಶಿಸಿ ಕಾ.ಎಂ.ಬಿ.ಸಜ್ಜನ್, ಕಾ.ಆರ್ ಕೆ ಹುಡಗಿ, ಕಾ.ಕಾಶಿನಾಥ ಅಂಬಲಗಿ, ಕಾ.ಭೀಮಶೆಟ್ಟಿ ಯಂಪಳ್ಳಿ, ಕಾ.ಕೆ ನೀಲಾ, ಕಾ.ಶರಣಬಸವ ಮಮಶೆಟ್ಟಿ, ದತ್ತಾತ್ರೇಯ ಇಕ್ಕಳಕಿ, ಕಾ.ಅಲ್ತಾಫ್ ಇನಾಮದಾರ್, ಕಾ.ಜಾವೇದ , ಕಾ.ಮೇಘರಾಜ್ ಕಠಾರೆ, ಕಾ ಮೌಲಾ ಮುಲ್ಲಾ ಮುಂತಾದವರು ಮಾತನಾಡಿದರು. ಪಾದಯಾತ್ರೆಯಲ್ಲಿ ಜನವಾದಿ ಮಹಿಳಾ ಸಂಘಟನೆಯ ನಂದಾದೇವಿ ಮಂಗೊಂಡಿ, ಅಧ್ಯಕ್ಷೆ ಅಮೀನಾ ಬೇಗಂ, ಕೃಷಿಕೂಲಿಕಾರ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಚಂದಪ್ಪ ಪೂಜಾರಿ, ಶ್ರೀಮಂತ ಬಿರಾದಾರ, ಜಗದೇವಿ ಹೆಗಡೆ ಮಲ್ಲಮ್ಮ ಕೋಡ್ಲಿ ಮುಂತಾದವರು ಭಾಗವಹಿಸಿದರು.

ದೇಶದ ಸಂಪತ್ತನ್ನು ಕಾರ್ಪೋರೆಟ್ ಗಳ ವಶ ಮಾಡಲು ಕೇಂದ್ರ ಸರಕಾರವು ಕೃಷಿ ವಿರೋಧಿ ಕಾಯ್ದೆಗಳನ್ನು ತಂದಿದೆ. ಸ್ವಾಮಿನಾಥನ್ ವರದಿ ಜಾರಿ ಮಾಡಲು ದೇಶದ ರೈತರು ಆಗ್ರಹಿಸಿದ್ದಾರೆ. ಈ ಕರಾಳ ಕಾಯ್ದೆಗಳಿಗಾಗಿ ಯಾರೂ ಕೇಳಿಲ್ಲ. ಆದರೆ ಸ್ವಾಮಿನಾಥನ್ ವರದಿಯನ್ನು ಮೂಲೆಗೆ ತಳ್ಳಿ ದೇಶ ಜನತೆಯು ಉಪವಾಸದಿಂದ ನರಳುವಂತೆ ಮಾಡುವ, ದೇಶದ ವ್ಯಾಪಾರವೇ ಕುಸಿಯುವಂತಾಗಿಸುವ, ರೈತರ ಕೈಯಿಂದ ಜಾರಿ ಭೂಮಿಯು ಕಂಪನಿಕರಣದ ವಶವಾಗುವ, ರೈತರು ಬೆಳೆದ ಆಹಾರವನ್ನು ಕಾರಗಪೋರೇಟಿಗರ ಗೋದಾಮು ಸೇರಿ ಕೃತಕ ಅಭಾವ ನಿರ್ಮಿಸಲು ಅನುಕೂಲ ಕಲ್ಪಿಸುವ ಮತ್ತು ತನ್ಮೂಲಕ ಜನತೆಯು ದುಬಾರಿ ಬೆಲೆಯಲ್ಲಿ ಆಹಾರ ಧಾನ್ಯ ಖರಿದಿಸುವ ಒತ್ತಡಕ್ಕೆ ಒಳಗಾಗುವ, ಅಪೌಷ್ಟಿಕತೆ ಹೆಚ್ಚಳವಾಗುವಂತೆ ಮಾಡುವ ಮತ್ತು ಅನುಕ್ರಮವಾಗಿ ಎಪಿಎಂಸಿ, ವ್ಯಾಪಾರ, ಕೃಷಿ ಹೀಗೆ ಎಲ್ಲವೂ ನಾಶವಾಗುವಂತೆ ಮಾಡುವ ಈ ಕಾಯ್ದೆಗಳು ಭಯಂಕರ ಅಪಾಯಕಾರಿಯಾಗಿವೆ.

ಆದ್ದರಿಂದಲೇ ರೈತರು ಜೀವದ ಹಂಗು ತೊರೆದು ದೆಹೆಲಿಯಲ್ಲಿಯೂ ದೇಶದ ಅನೇಕ ರಾಜ್ಯಗಳಲ್ಲಿಯೂ ಈ ಕಾಯ್ದೆಗಳ ವಾಪಸಾತಿಗಾಗಿ ಹೋರಾಡುತ್ತಿದ್ದಾರೆ. ಏಕೆಂದರೆ ರೈತರು ಸಕಲ ಜೀವರಿಗೆ ಅನ್ನವಿತ್ತು ಪೊರೆವ ಎರಡನೆಯ ತಾಯಿಯಾಗಿದ್ದಾಳೆ. ಆದ್ದರಿಂದಲೇ ರಾಜಿರಹಿತ ಹೋರಾಟಕ್ಕೆ ಇಳಿದಿದ್ದಾಳೆ ಭಾರತದ ತಾಯಿ. ಭಾರತದ ತಾಯ್ತನದ ಸಂಸ್ಕೃತಿಯನ್ನೇ ನಾಶ ಮಾಡಲು ಕೇಂದ್ರ ಸರಕಾರ ಸಂಚು ಹೆಣೆದಿದೆ. ದೇಶ ವುದೇಶಗಳಿಂದ ಭಾರತದ ಕೃಷಿಮಾತೆಯ ಹೋರಾಟಕ್ಕೆ ಬೆಂಬಲದ ಮಹಾಪೂರವೇ ಹರಿದು ಬರುತ್ತಿದೆ.

ಈ ಕಾಯ್ದೆಗಳ ಒಳಗಿರುವ ಅಪಾಯಕಾರಿ ಅಂಶಗಳನ್ನು ಮುಚ್ಚಿಟ್ಟು ರೈತರ ಹಿತದಲ್ಲಿದೆ ಎಂಬ ಸುಳ್ಳನ್ನು ಪ್ರಚಾರ ಮಾಡುತ್ತಿದೆ ಬಿಜೆಪಿ. ಆದರೆ ವಾಸ್ತವದಲ್ಲಿ ಈ ಕಾಯ್ದೆಗಳು ರೈತ ವಿರೋಧಿ ಕಾಯ್ದೆಗಳಾಗಿವೆ ಎಂಬುದನ್ನು ಎಲ್ಲ ಪ್ರಜ್ಞಾವಂತರು ಅರ್ಥ ಮಾಡಿಕೊಳ್ಳಬೇಕು ಎಂದು ವಿನಂತಿಸಲಾಯಿತು.

ಹದಿನೇಳು ದಿನಗಳ ಕಾಲ ಸತತವಾಗಿ ನಡೆದ ಧರಣಿಯಲ್ಲಿ ಪಾಲ್ಹೊಂಡ ಸಮಸ್ತ ಜನತೆಗೆ ಕ್ರಾಂತಿಕಾರಿ ವಂದನೆಗಳನ್ನು ಸಲ್ಲಿಸಲಾಯಿತು. ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು: ಈ ಕಾಯ್ದೆಗಳ ಅಪಾಯವನ್ನು ಮನವರಿಕೆ ಮಾಡಿಕೊಡಲು ಗ್ರಾಮಾಂತರ ಪ್ರದೇಶಕ್ಕೆ ಜಾಥಾ ನಡೆಸಲು ತೀರ್ಮಾನಿಸಲಾಯಿತು. ಸಣ್ಣವನಲ್ಲೋ ನೀ ಪುಣ್ಯವಂತ ಎಂಬ ರೈತ ಗೀತೆಯನ್ನು ಹಾಡುವ ಮೂಲಕ ಬಹಿರಂಗ ಮುಕ್ತಾಯ ಮಾಡಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here