ಶಹಾಬಾದ:ಇದೇ ಜನೇವರಿ 1ರಂದು ಶಾಲೆ ತರಗತಿಗಳು ಹಾಗೂ ವಿದ್ಯಾಗಮ ಯೋಜನೆ ಮತ್ತೆ ಪ್ರಾರಂಭವಾಗುತ್ತಿದ್ದು, ಶಿಕ್ಷಕರು ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಇಲಾಖೆಗೆ ವರದಿ ಸಲ್ಲಿಸತಕ್ಕದ್ದು ಎಂದು ಶಹಾಬಾದ ವಲಯದ ಬಿಆರ್ಪಿ ಅಶ್ವಿನಿ ಹೇಳಿದರು.
ಅವರು ನಗರದ ಎಸ್.ಜಿ.ವರ್ಮಾ ಹಿಂದಿ ಶಾಲೆಯಲ್ಲಿ ಆಯೋಜಿಸಲಾದ ಶಹಾಬಾದ ವಲಯದ ಶಾಲಾ ಪ್ರಾರಂಭೋತ್ಸವ ಮತ್ತು ವಿದ್ಯಾಗಮ ಕುರಿತು ಆಯೋಜಿಸಲಾದ ಮುಖ್ಯಗುರುಗಳ ಸಭೆಯಲ್ಲಿ ಮಾತನಾಡಿದರು.
ಶಾಲಾ ಪ್ರಾರಂಭಕ್ಕೂ ಮುಂಚೆ ಕಡ್ಡಾಯವಾಗಿ ಶಿಕ್ಷಕರು ಕೋವಿಡ್ ಪರೀಕ್ಷೆ ಮಾಡಿಕೊಳ್ಳಬೇಕು.ಅಲ್ಲದೇ ಮಕ್ಕಳಿಗೆ ಮಾಸ್ಕ, ಕುಡಿಯುವ ನೀರು ತೆಗೆದುಕೊಂಡು ಬರಬೇಕೆಂದು ತಿಳಿಸಬೇಕು.ಶಾಲೆಯಲ್ಲಿ ಪ್ರತಿಯೊಂದು ಕೋಣೆಗಳಿಗೆ ಸ್ವಾನಿಟೈಜರ್ ಹಾಗೂ ಸ್ವಚ್ಛತೆ ಮಾಡಿಕೊಂಡಿರಬೇಕು.ಕಡ್ಡಾಯವಾಗಿ ಮಕ್ಕಳಿಗೆ ಶಾಲೆಗೆ ಬರುವಂತೆ ಒತ್ತಾಯ ಮಾಡದೇ, ಪಾಲಕರ ಒಪ್ಪಿಗೆಯ ಮೇರೆಗೆ ಶಾಲೆಗೆ ಸೇರಿಸಿಕೊಳ್ಳಬೇಕು.ಪಾಲಕರ ಒಪ್ಪಿಗೆ ಪತ್ರವನ್ನು ಪಡೆದುಕೊಳ್ಳಬೇಕು.ಮಕ್ಕಳಲ್ಲಿ ಯಾವುದಾರೂ ಸಣ್ಣ ಪುಟ್ಟ ಕಾಯಿಲೆಗಳು ಕಂಡುಬಂದರೆ ತಕ್ಷಣವೇ ಪಾಲಕರಿಗೆ ತಿಳಿಸಬೇಕು.ಇಲಾಖೆಯಿಂದ ಹೊರಡಿಸಲಾದ ಕೋವಿಡ್-19 ಹಿನ್ನೆಲೆಯಲ್ಲಿ ವಿದ್ಯಾಗಮದ ಮಾರ್ಗಸೂಚಿಗಳನ್ನು ಪಾಲಿಸತಕ್ಕದ್ದು.10 ನೇ ತರಗತಿಯ ಮಕ್ಕಳಿಗೆ ತರಗತಿ ಕೋಣೆಗಳಲ್ಲಿ ಹಾಗೂ 8 ಮತ್ತು 9 ನೇ ತರಗತಿಯ ಮಕ್ಕಳಿಗೆ ಶಾಲಾ ಆವರಣದಲ್ಲಿ ತರಗತಿಗಳನ್ನು ತೆಗೆದುಕೊಳ್ಳಬೇಕು.ಪ್ರಾರಂಭದ ದಿನ ತಳಿರು ತೋರಣ ಕಟ್ಟಿ ಮಕ್ಕಳನ್ನು ಬರಮಾಡಿಕೊಳ್ಳಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮತ್ತು ಮಾಸ್ಕ ಧರಿಸುವಂತೆ ಮಕ್ಕಳಿಗೆ ತಿಳಿಸಬೇಕು ಎಂದು ಹೇಳಿದರು.
ಸಿಆರಸಿ ಅಯೂಬಖಾನ ಢೋಣೂರ ಮಾತನಾಡಿ, ಮಕ್ಕಳಲ್ಲಿ ಆತ್ಮ ವಿಶ್ವಾಸ ಹಾಗೂ ಪಾಲಕರಲ್ಲಿ ಧೈರ್ಯ ತುಂಬಬೇಕು. ಶಾಲೆಯಲ್ಲಿ ಕಡ್ಡಾಯವಾಗಿ ಥರ್ಮಲ್ ಸ್ಕ್ಯಾನರ್,ಸ್ಯಾನಿಟೈಜರ್, ಸಾಬೂನಗಳ ಬಳಕೆಗೆ ಅವಕಾಶ ಕಲ್ಪಿಸಬೇಕು.ಕೋವಿಡ್-19 ಬಗ್ಗೆ ಮಕ್ಕಳಿಗೆ ಹಾಗೂ ಪಾಲಕರಿಗೆ ತಿಳುವಳಿಕೆ ಮೂಡಿಸಬೇಕೆಂದು ಹೇಳಿದರು.
ಸಿಆರಪಿಗಳಾದ ಸತ್ಯನಾರಾಯಣ, ಶರಣಬಸಪ್ಪ ಪಾಟೀಲ, ಮರೆಪ್ಪ ಭಜಂತ್ರಿ ಸೇರಿದಂತೆ ಸಕರ್ಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಯ ಮುಖ್ಯಗುರುಗಳು ಪಾಲ್ಗೊಂಡಿದ್ದರು.