ಪ್ರತಿ ಕ್ವಿ0ಟಾಲ್ ತೊಗರಿಗೆ 8 ಸಾವಿರ ಬೆಲೆ ನೀಡಲು ಯಳಸಂಗಿ ಆಗ್ರಹ

0
33

ಆಳಂದ: ತಾಲೂಕಿನಾದ್ಯಂತ ಈಗಾಗಲೇ ತೊಗರಿ ಕಟಾವು ನಡೆಯುತ್ತಿದ್ದು,ಕೆಲವು ಕಡೆ ರಾಶಿ ಕೂಡಾ ಪ್ರಾರಂಭಗೊಂಡಿವೆ. ಆದರೆ ಇದುವರೆಗೂ ಸರ್ಕಾರ ತೊಗರಿ ಖರೀದಿ ಕೇಂದ್ರ ಸ್ಥಾಪಿಸದೆ ಇರೋದು ವಿಪರ್ಯಾಸ. ಕೂಡಲೇ ತೊಗರಿ ಖರೀದಿ ಕೇಂದ್ರ ತೆರೆದು ರೈತರಿಗೆ ನ್ಯಾಯಯೂತ ಬೆಲೆ ಕೊಡಬೇಕು ಎಂದು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ಸಾಮಾಜಿಕ ಹೋರಾಟಗಾರರಾದ ಬಸವರಾಜ ಯಳಸಂಗಿ ಆಗ್ರಹಿಸಿದ್ದಾರೆ.

ಈ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಿದ ಅವರು ಡಾ.ಎಮ್. ಎಸ್.ಸ್ವಾಮಿನಾಥನ್ ಆಯೋಗದ ವರದಿ ಶಿಫಾರಸ್ಸಿನಂತೆ ಪ್ರತಿ ಕ್ವಿ0ಟಾಲ್ ತೊಗರಿಗೆ 8,000 ಬೆಲೆ ನಿಗದಿ ಮಾಡಬೇಕು.ಹೊರ ದೇಶದ ತೊಗರಿ ಖರೀದಿ ಕೈ ಬಿಡಬೇಕು. ರೈತರು ಬೆಳೆದ ಸಂಪೂರ್ಣ ತೊಗರಿ ಖರೀದಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

Contact Your\'s Advertisement; 9902492681

ರಾಜ್ಯ ಸರ್ಕಾರ ಪ್ರತಿ ಕ್ವಿ0ಟಾಲ್ ತೊಗರಿಗೆ 2,000 ಪ್ರೋತ್ಸಾಹ ಬೆಂಬಲ ಬೆಲೆ ಘೋಷಿಸಬೇಕು. ಅತಿವೃಷ್ಟಿಯಿಂದ ನೊಂದ ರೈತರಿಗೆ ತೊಗರಿ ಪ್ರೋತ್ಸಾಹ ಬೆಲೆ ಹೆಚ್ಚಿಸಿ ಅನುಕೂಲವಾಗುವಂತೆ ನೋಡಿಕೊಳ್ಳಬೇಕು. ಒಟ್ಟಾರೆ ತೊಗರಿ ಬೆಳೆಗಾರರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here