ಮಹಿಳಾ ಸುರಕ್ಷತೆ ಕ್ರಾಂತಿಯಾಗಬೇಕೆ ಹೊರತು, ಕ್ರೈಮ್ ನ್ಯೂಸ್ ಆಗಬಾರದು

0
33

ಬೆಂಗಳೂರು: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ನಿರ್ಭಯ ಅತ್ಯಾಚಾರ ಪ್ರಕರಣದ ನಂತರ ಮಹಿಳೆಯರ ಸುರಕ್ಷತೆಗೆ ಸ್ಥಾಪಿಸಿದ ನಿಧಿಯ ಹಣವನ್ನು ದೋಚುವ ವ್ಯವಸ್ಥೆಯಿಂದ ಹೆಣ್ಣು ಮಕ್ಕಳ ಸುರಕ್ಷತೆ ಬಯಸಬಹುದೇ. ಮುಖ್ಯಮಂತ್ರಿ ಯಡಿಯೂರಪ್ಪನವರೇ ಕರ್ನಾಟಕವನ್ನು ಮತ್ತೊಂದು ಉತ್ತರಪ್ರದೇಶ ಮಾಡದಿರಿ ರಾಷ್ಟ್ರಪಿತ ಮಹಾತ್ಮಗಾಂಧಿ, ಅಂಬೇಡ್ಕರ್ ಅವರ ಕನಸಿನ ದೇಶ ಇದಲ್ಲ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಹ ಸಂಚಾಲಕಿ ಶಾಂತಲಾ ದಾಮ್ಲೆ ಕಿಡಿಕಾರಿದರು.

ಶುಕ್ರವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಮಹಾನಗರಗಳ ಪ್ರಮುಖ ರಸ್ತೆ, ಅಡ್ಡರಸ್ತೆ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ನಿಗಾ ವ್ಯವಸ್ಥೆ ರೂಪಿಸಲು ನಿರ್ಭಯಾ ಹೆಸರಿನಲ್ಲಿ ಸ್ಥಾಪನೆಯಾದ ಹಣವನ್ನು ನುಂಗಿ ಆ ಹೆಣ್ಣುಮಗಳಿಗೆ ಅವಮಾನ ಮಾಡಿದ್ದೀರಿ ಎಂದರು.

Contact Your\'s Advertisement; 9902492681

ಹೆಣ್ಣು ಮಕ್ಕಳ ಸುರಕ್ಷತೆ ಕ್ರಾಂತಿಯಾಗಬೇಕೆ ಹೊರತು, ಕ್ರೈಮ್ ನ್ಯೂಸ್ ಆಗಬಾರದು. ಈ ಅವ್ಯವಹಾರದಲ್ಲಿ ಭಾಗಿಯಾದ ಅಧಿಕಾರಿಗಳನ್ನು ವರ್ಗಾವಣೆ ಮಾಡಿದರೆ ಸಾಕೇ? ನಿರ್ಭಯಾ ಆತ್ಮಕ್ಕೆ ಅವಮಾನವಾಗುತ್ತಿದ್ದರೂ ಗೃಹ ಸಚಿವ ಬೊಮ್ಮಾಯಿಯವರೇ ಎಲ್ಲಿದ್ದೀರಿ, ಮುಖ್ಯಮಂತ್ರಿ ಯಡಿಯೂರಪ್ಪನವರೇ ಮಾತನಾಡಿ ಎಂದು ಪ್ರಶ್ನಿಸಿದರು.

ಬೆಂಗಳೂರ ನಗರ ಅಧ್ಯಕ್ಷ ಸುರೇಶ್ ರಾಥೋಡ್ ಮಾತನಾಡಿ, 1 ಸಾವಿರ ಕೋಟಿ ಮೊತ್ತದ ನಿಧಿಯನ್ನು ಬಳಸಿಕೊಂಡು ರಾಜ್ಯ ಸರ್ಕಾರ ಬೆಂಗಳೂರು ವ್ಯಾಪ್ತಿಯಲ್ಲಿ ಸಿಸಿ ಟಿವಿ ಕ್ಯಾಮೆರಾ ನಿಗಾ ವ್ಯವಸ್ಥೆ ರೂಪಿಸಲು 4 ವರ್ಷಗಳು ಬೇಕೆ?. ಈ ಟೆಂಡರ್ ಪ್ರಕ್ರಿಯೆಯನ್ನು ಮೂರ ಮೂರು ಬಾರಿ ಕರೆದು ರದ್ದುಗೊಳಿಸಿ ಕೊನೆಗೆ ಬೇಕಾದವರಿಗೆ ನೀಡಿದ್ದು ಏಕೆ, ಯಾವುದೇ ಅನುಭವವಿಲ್ಲದ ದೆಹಲಿ ಮೂಲದ ಅರ್ನೆಸ್ಸ್ ಅಂಡ್ ಯಂಗ್ (ಎ ಅಂಡ್ ವೈ) ಸಂಸ್ಥೆಗೆ ಕಿಯೋನಿಕ್ಸ್ ಮೂಲಕ ಡಿಪಿಆರ್ ನಡೆಸಲು ಅವಕಾಶ ಕಲ್ಪಿಸಿದ್ದು ಯಾರು. ಮೂರು ಬಾರಿ ಟೆಂಡರ್ ಕರೆದಾಗಲೂ ಮ್ಯಾಟ್ರಿಕ್ಸ್ ಕಂಪೆನಿಗೆ ಏಕೆ ಟೆಂಡರ್ ನೀಡಲಾಯಿತು ಈ ಎಲ್ಲಾ ಅನುಮಾನಗಳಿಗೂ ಸರ್ಕಾರ ಉತ್ತರಿಸಬೇಕು ಎಂದು ಆಗ್ರಹಿಸಿದರು.

ಶಿಸ್ತುಪಾಲನೆ ದೃಷ್ಟಿಯಲ್ಲಿ ಹಿರಿಯ ಅಧಿಕಾರಿಗಳು ಕೆಳಹಂತದ ಸಿಬ್ಬಂದಿಗೆ ಮಾದರಿಯಾಗಬೇಕು ಆದರೆ, ಇಲ್ಲಿ ಸೇಫ್ ಸಿಟಿ ಟೆಂಡರ್ ಪ್ರಕ್ರಿಯೆ ವಿಚಾರವಾಗಿ ಹಿರಿಯ ಐಪಿಎಸ್ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್ ಮತ್ತು ಡಿ. ರೂಪ ನಡುವಿನ ಜಟಾಪಟಿ ನೋಡಿದರೆ ಆಡಳಿತ ವ್ಯವಸ್ಥೆಯಲ್ಲಿ ಅರಾಜಕತೆ ಉಂಟಾಗಿದೆಯೇನೋ ಎಂಬ ಭಾವನೆ ಮೂಡುತ್ತದೆ ಎಂದರು.

ಇಲ್ಲಿ ಯಾರಿಗೂ ಯಾರ ಮೇಲೆಯೂ ನಿಯಂತ್ರಣ ಇಲ್ಲದಿರುವುದು ನೋಡಿದರೆ ಆಡಳಿತ ಯಂತ್ರ ಹಳಸಿರುವುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ಆದ ಕಾರಣ ಈ ಯೋಜನೆಯನ್ನು ಹೈಕೋರ್ಟಿನ ಉನ್ನತ ನ್ಯಾಯಾಧೀಶರ ನೇತೃತ್ವದಲ್ಲಿ ಪರಿಶೀಲನಾ ಸಮಿತಿ ರಚನೆ ಮಾಡಿ ಅದರ ನಿಗಾವಣೆಯಲ್ಲಿ ಈ ಟೆಂಡರ್ ಪ್ರಕ್ರಿಯೆ ಹಾಗೂ ಯೋಜನೆಯ ಅನುಷ್ಠಾನ ಆಗಬೇಕು ಎಂದು ಒತ್ತಾಯಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here