ಸಿರಸಂಗಿ ಲಿಂಗರಾಜ ಅರಸರ ಜಯಂತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಪಾಲ್ಗೊಳ್ಳಲು ಕರೆ

0
33

ಸುರಪುರ: ತ್ಯಾಗವೀರ ಮಹಾದಾನಿ ಸಿರಸಂಗಿ ಲಿಂಗರಾಜ ಅರಸರ ೧೬೦ನೇ ಜಯಂತಿ ಆಚರಣೆ ಅಂಗವಾಗಿ ನಗರದ ಟೈಲರ್ ಮಂಜಿಲ್‌ನಲ್ಲಿ ಕುಡ ಒಕ್ಕಲಿಗ ಸಮುದಾಯದ ಮುಖಂಡರು ಪೂರ್ವಬಾವಿ ಸಭೆಯನ್ನು ನಡೆಸಿದರು.

ಸಭೆಯಲ್ಲಿ ಭಾಗವಹಿಸಿದ್ದ ನಾಡಿನ ವಿವಿಧ ಜಿಲ್ಲೆಗಳ ಮುಖಂಡರು ಮಾತನಾಡಿ,ಈ ನಾಡಿನ ಅಭಿವೃಧ್ಧಿಗಾಗಿ ಸಿರಸಂಗಿ ಲಿಂಗರಾಜ ಅರಸ ಕೊಡುಗೆ ಬಹುದೊಡ್ಡದಿದೆ,ಅವರು ತಮ್ಮೆಲ್ಲ ಆಸ್ತಿಯನ್ನು ಸಮಾಜದ ಏಳಿಗೆಗೆ ದಾಸೋಹ ನೀಡಿ ಸಂತೋಷ ಪಟ್ಟ ಮಹಾದಾನಿಯಾಗಿದ್ದಾರೆ,ಅಂತಹ ಮಹಾನ್ ಪುರುಷರ ಜಯಂತಿಯನ್ನು ಈಬಾರಿ ರಾಜ್ಯ ಮಟ್ಟದಲ್ಲಿ ಬೆಂಗಳೂರಿನ ವಿಜಯನಗರದ ಭಂಟರ ಭವನದಲ್ಲಿ ಆಚರಿಸಲಾಗುತ್ತಿದ್ದು,ಯಾದಗಿರಿ ಜಿಲ್ಲೆಯ ಎಲ್ಲಾ ನಮ್ಮ ಕುಡ ಒಕ್ಕಲಿಗ ಬಂಧುಗಳು ಹಾಗು ಸಿರಸಂಗಿ ಲಿಂಗರಾಜರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.

Contact Your\'s Advertisement; 9902492681

ಅಲ್ಲದೆ ರಾಜ್ಯದಲ್ಲಿ ನಮ್ಮ ಕುಡ ಒಕ್ಕಲಿಗರ ಸಂಖ್ಯೆ ದೊಡ್ಡ ಮಟ್ಟದಲ್ಲಿದ್ದು ನಾವು ಸಂಘಟಿತರಾಗದ ಕಾರಣದಿಂದ ನಮಗೆ ಸರಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದೇವೆ.ಆದ್ದರಿಂದ ಈ ಮುಂದೆ ನಾಡಿನ ಎಲ್ಲಾ ಕುಡ ಒಕ್ಕಲಿಗ ಬಂಧುಗಳು ಒಗ್ಗಟ್ಟಾಗಿ ನಮ್ಮ ಶಕ್ತಿ ಪ್ರದರ್ಶನ ಮಾಡುವ ಅವಶ್ಯವಿದೆ,ಆದ್ದರಿಂದ ಈಬಾರಿಯ ಸಿರಸಂಗಿ ಲಿಂಗರಾಜರ ಜಯಂತಿಯಲ್ಲಿ ನಾಡಿನ ನಮ್ಮ ಅನೇಕ ಜನ ಪೂಜ್ಯರಾದ ಎಡೆಯೂರ ತೋಂಟದಾರ್ಯ ಡಾ:ಸಿದ್ದರಾಮ ಮಹಾಸ್ವಾಮಿಗಳು ಅಥಣಿಯ ಶಿವಬಸವ ಸ್ವಾಮೀಜಿ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯಂಜಯ ಸ್ವಾಮೀಜಿ ಇಂಡಿಯ ಸ್ವರೂಪಾನಂದ ಸ್ವಾಮೀಜಿ ಅಥಣಿಯ ಶಿವಬಸವ ಸ್ವಾಮೀಜಿ ಹಾಗು ವಸತಿ ಸಚಿವ ವಿ.ಸೋಮಣ್ಣ ಗೃಹ ಸಚಿವ ಬಸವರಾಜ ಬೊಮ್ಮಾಯಿ ವೀರಶೈವ ಮಹಾಸಭೆಯ ಅಧ್ಯಕ್ಷ ಶಾಮನೂರು ಶಿವಶಂಕರೆಪ್ಪ ಡಾ: ಪ್ರಭಾಕರ ಕೋರೆ ಬಸವರಾಜ ಹೊರಟ್ಟಿ ಎಂ.ಕೃಷ್ಣಪ್ಪ ಭಾಗವಹಿದಲಿದ್ದು,ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲರು ಆಗಮಿಸುವಂತೆ ತಿಳಿಸಿದರು.

ಶಿವುಕುಮಾರ ಪಾಟೀಲ್ ಗದಗ,ಬಿ.ಬಿ.ಪಾಟೀಲ್ ಶೇಗುಣಸಿ,ಮಲ್ಲನಗೌಡ ಬಿರಾದಾರ ಕೆಸರಟ್ಟಿ ಎ.ಎಮ್.ಪಾಟೀಲ್ ಉಕ್ಕಲಿ,ಸಿದ್ದಲಿಂಗಪ್ಪಗವಡ ಹುಬ್ಬಳ್ಳಿ ರುದ್ರಗೌಡ ಮೇಟಿ ಎ.ಎಸ್.ಪಾಟೀಲ್ ,ವಿ.ಎಸ್.ಪಾಟೀಲ್ ನಾಗರಾಳ ಸಿದ್ದನಗೌಡ ಉರಸಗುಂಡಗಿ ಮಾತನಾಡಿದರು.

ವೇದಿಕೆ ಮೇಲೆ ಕೆ.ಎಸ್.ಬಿರಾದಾರ ವಿಜಯಪುರ ಎಸ್.ಎ.ಬಿರಾದಾರ ಕನ್ನಾಳ ಬಸನಗೌಡ ಪಾಟೀಲ್ ಕೊಡಗಾನೂರ ಹಾಲೇಶ ಉಪನಾಳ ಸಿದ್ದಲಿಂಗಪ್ಪಗೌಡ ಹುಬ್ಬಳ್ಳಿ ನಂದಣ್ಣಗೌಡ ಪಾಟೀಲ್ ದೇವಾಪುರ ಬಾಪುಗೌಡ ಪಾಟೀಲ್ ಹುಣಸಗಿ ಸೇರಿದಂತೆ ಸುರಪುರ ತಾಲೂಕಿನ ಅನೇಕ ಜನ ಮುಖಂಡರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here