ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ಬಸ್ ಆರಂಭಿಸದಿದ್ದಲ್ಲಿ ಉಗ್ರ ಹೋರಾಟ: ಕ್ರಾಂತಿ

0
30

ಸುರಪುರ: ಈಗಾಗಲೇ ಸರಕಾರ ಜನೆವರಿ ೧ನೇ ತಾರೀಖಿನಿಂದಲೆ ಶಾಲಾ ಕಾಲೇಜುಗಳನ್ನು ಆರಂಭಿಸುವಂತೆ ಆದೇಶ ಹೊರಡಿಸಿದ ಕಾರಣದಿಂದ ಎಲ್ಲಾ ಶಾಲಾ ಕಾಲೇಜುಗಳು ಆರಂಭಗೊಂಡಿವೆ,ಆದರೆ ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳಿಗೆ ಬಸ್‌ಗಳಿಲ್ಲದೆ ತೊಂದರೆಯಾಗಿದೆ ಕೂಡಲೆ ಬಸ್ ಆರಂಭಿಸಬೇಕು ಇಲ್ಲದಿದ್ದಲ್ಲಿ ಡಿಪೋ ಮುಂದೆ ಉಗ್ರ ಹೋರಾಟ ನಡೆಸುವುದಾಗಿ ಮಲ್ಲಿಕಾರ್ಜುನ ಕ್ರಾಂತಿ ಎಚ್ಚರಿಸಿದರು.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣದ ವತಿಯಿಂದ ಸುರಪುರ ಬಸ್ ಡಿಪೋ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ,ಅತೀ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದಿಂದ ಬರುತ್ತಾರೆ.ಆದರೆ ಬಸ್ ಇಲ್ಲದೆ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ,ಆದ್ದರಿಂದ ಕೂಡಲೆ ಗ್ರಾಮಗಳಿಗೆ ಬಸ್ ಆರಂಭಿಸಬೇಕು ಮತ್ತು ಕಲಬುರ್ಗಿಗೆ ಜನರು ಹೋಗಿ ಬರಲು ಹೆಚ್ಚಿನ ಸಗರನಾಡು ಬಸ್‌ಗಳಿಲ್ಲದೆ ತೊಂದರೆಯಾಗಿದೆ,ಸಗರನಾಡು ಬಸ್‌ಗಳ ಸಂಖ್ಯೆ ಹೆಚ್ಚಿಸಬೇಕು ಮತ್ತು ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್ ಪಾಸ್ ನೀಡಬೇಕು ಈ ಬೇಡಿಕೆಗಳನ್ನು ಕೂಡಲೆ ಈಡೇರಿಸದಿದ್ದಲ್ಲಿ ಬಸ್ ಡಿಪೋ ಮುಂದೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

Contact Your\'s Advertisement; 9902492681

ಪ್ರತಿಭಟನಾ ಸ್ಥಳಕ್ಕೆ ಡಿಪೋ ವ್ಯವಸ್ಥಾಪಕ ಭದ್ರಪ್ಪ ಆಗಮಿಸಿ ಹೋರಾಟಗಾರರ ಮನವಿಯನ್ನು ಆಲಿಸಿ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ನಿಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕು ಸಂಚಾಲಕ ತಿಪ್ಪಣ್ಣ ಶೆಳ್ಳಿಗಿ ಮಾನಯ್ಯ ಬಿಜಾಸಪುರ ಮೂರ್ತಿ ಬೊಮ್ಮನಹಳ್ಳಿ ಖಾಜಾಹುಸೇನ್ ಗುಡಗುಂಟಿ ಭೀಮಣ್ಣ ಕ್ಯಾತನಾಳ ಮಹೇಶ ಸುಂಗಲಕರ್ ಹಣಮಂತ ದೊರೆ ನರಸಿಂಗಪೇಟ ಹಣಮಂತ ಸಾಸಗೇರಿ ಹಣಮಂತ ಜಾಲಹಳ್ಳಿ ಭೀಮಣ್ಣ ನಾಗರಾಳ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here