ಕಲಬುರಗಿ: ನಿನ್ನೆ ಅಖಲ ಭಾರತಿಯ ಮಿಲ್ಲಿ ಕೌನ್ಸಿಲ್ ರಾಷ್ಟ್ರೀಯ ಕಾರ್ಯಕಾರಣಿ ಸಭೆ ಜೂಮ್ ಮುಖಾಂತರ ಜರುಗಿತ್ತು.
ಸಭೆಯಲ್ಲಿ ಉತ್ತರ ಕರ್ನಾಟಕದ ಉಸ್ತುವಾರಿ ಕಾರ್ಯದರ್ಶಿಯಾಗಿರುವ ಡಾ.ಮೊಹಮ್ಮದ್ ಅಜಗರ್ ಚುಲಬುಲ್ ರಾಜ್ಯ ಹಾಗೂ ದೇಶದ ಅಲ್ಪಸಂಖ್ಯಾತರ ವಿರುದ್ಧ ಜಾರಿಗೆ ತರುತ್ತಿರುವ ನೂತನ ಕಾಯ್ದೆಗಳ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು.
ಹೊಸ ಶಿಕ್ಷಣ ನೀತಿಯಲ್ಲಿ ಮದರಸಾ, ಉರ್ದು ಭಾಷೆ, 12ನೇ ಶತಮಾನದ ಇತಿಹಾಸ ಮತ್ತು ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಸಂಪೂರ್ಣವಾಗಿ ಕಡೆಗಣಿಸುತ್ತಿರುವ ಬಗ್ಗೆ ಕೇಂದ್ರ ಸಚಿವರ ಹತ್ತಿರ ನಿಯೋಗದೊಂದಿಗೆ ಭೇಟಿ ನೀಡಿ ಮನವಿ ಮಾಡುವ ಬಗ್ಗೆ ಸಲಹೆ ನೀಡಿದರು.
ಬಿಜೆಪಿ ಸರಕಾರ ಒರುವ ರಾಜ್ಯಗಳಲ್ಲಿ ಅಲ್ಪಸಂಖ್ಯಾತರ ವಿರುದ್ಧ ಕೋಮುವಾದಿ ಶಕ್ತಿಗಳು ಪ್ರತಿ ದಿನ ಹೊಸ ಹೊಸ ಸಂಚು ರೂಪಿಸಲಾಗುತ್ತಿದ್ದು, ಲವ್ ಜಿಹಾದ್ ದಂತಹ ಅವೈಜ್ಞಾನಿಕ ಕಾಯ್ದೆಗಳು ಜಾರಿಗೆ ತಂದು ಅಮಾಯಕರಿಗೆ ಬಲಿಪಶು ಮಾಡಲಾಗುತ್ತಿದೆ. ಇದರ ವಿರುದ್ಧ ಸಮುದಾಯದಲ್ಲಿ ಜಾಗೃತಿ ಮೂಡಿಸಿ ಗಟ್ಟಿ ಹೋರಾಟ ಅಗತ್ಯ ವಿದೆ ಎಂದರು.
ವೇಳೆಯಲ್ಲಿ ಕೌನ್ಸಿಲ್ ರಾಷ್ಟ್ರೀಯ ಅಧ್ಯಕ್ಷರಾದ ಮೌಲಾನಾ ಅಬ್ದುಲ್ ಮುಫ್ತಿ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಡಾ. ಮಂಜುರ್ ಆಲಂ ಅವರು ಸಂವಿಧಾನ ಉಳಿವಿಗಾಗಿ ಸೇರಿದಂತೆ ಹಲವು ರೀತಿಯಲ್ಲಿ ಸಲಹೆಗಳನ್ನು ನೀಡಿದರು.
ಸಹಾಯಕ ಪ್ರಧಾನ ಕಾರ್ಯದರ್ಶಿಯಾಗುರುವ ಮೌಲಾನಾ ಮುಸ್ತಫರಿಫಾಯಿ ಕಳೆದ ವರ್ಷಗಳಲ್ಲಿ ನಿಧನರಾದ ಸಮಯದ ಮುಖಂಡರಿಗೆ ಶೃದ್ಧಾಂಜಲಿ ಸಲ್ಲಿಸಿದರು.
ಉಪಾಧ್ಯಕ್ಷರಾದ ಮೌಲಾನಾ ಖಾಲಿದ ರಹಮಾನಿ, ಅನೀಸ್ ಖಾಜಿ, ಅಬ್ದುಲ್ ಅಲೀಮ್, ನ್ಯಾಯವಾದಿ ಜಫರಯಾಬ್ ಜಿಲಾನಿ, ಸುಲೇಮಾನ್ ಖಾನ್ ಸೇರಿದಂತೆ ವಿವಿಧ ರಾಜ್ಯದ ಕೌನ್ಸಿಲ್ ಸದಸ್ಯರು ಹಾಗೂ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.