ಸುರಪುರ: ಎಸ್‌ಎಸ್‌ಎಲ್‌ಸಿ ಹಾಗು ದ್ವೀತಿಯ ಪಿಯುಸಿ ತರಗತಿಗಳನ್ನು ಆರಂಭಿಸಿದೆ,ಆದರೆ ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳಿಗೆ ವಸತಿ ನಿಲಯದ ಸೌಕರ್ಯವಿಲ್ಲದೆ ಶಾಲೆಗೆ ಬರಲು ಹೇಗೆ ಸಾಧ್ಯ ಎಂದು ಕೆಎಸ್‌ಡಿಎಸ್‌ಎಸ್ ಕ್ರಾಂತಿಕಾರಿ ಬಣದ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಪ್ರಶ್ನಿಸಿದರು.
ನಗರದ ತಹಸೀಲ್ ಕಚೇರಿ ಮುಂದೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ,ಸರಕಾರ ಕೇವಲ ಶಾಲಾ ಕಾಲೇಜುಗಳನ್ನು ಆರಂಭಿಸಿ ಕೈತೊಳೆದುಕೊಂಡಿದೆ,ಆದರೆ ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.ಆದ್ದರಿಂದ ಕೂಡಲೆ ಸುರಪುರ ಮತ್ತು ಹುಣಸಗಿ ತಾಲೂಕಿನಾದ್ಯಂತ ಇರುವ ಸಮಾಜ ಕಲ್ಯಾಣ,ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆಯಡಿಯಲ್ಲಿರುವ ಹಾಸ್ಟೆಲ್‌ಗಳನ್ನು ಆರಂಭಿಸಬೇಕೆಂದು ಆಗ್ರಹಿಸಿದರು.
ಅಲ್ಲದೆ ಗ್ರಾಮೀಣ ಭಾಗದ ಶಾಲಾ ಮಕ್ಕಳಿಗೆ ಸರಕಾರ ಮದ್ಹ್ಯಾನದ ಬಿಸಿಯೂಟದ ಬದಲಾಗಿ ಪಡಿತರ ಧಾನ್ಯಗಳನ್ನು ನೀಡುವಂತೆ ನಿಯಮ ಮಾಡಿದೆ,ಆದರೆ ಹೆಚ್ಚಿನ ಸಂಖ್ಯೆಯ ಶಾಲೆಗಳಲ್ಲಿನ ಮಕ್ಕಳಿಗೆ ಆಹಾರ ಧಾನ್ಯಗಳನ್ನು ನೀಡಿಲ್ಲ,ಆದ್ದರಿಂದ ಆಹಾರ ಧಾನ್ಯಗಳನ್ನು ವಿತರಿಸುವಂತೆ ಒತ್ತಾಯಿಸಿದರು.ನಂತರ ತಹಸೀಲ್ದಾರರಿಗೆ ಬರೆದ ಮನವಿಯನ್ನು ಗ್ರೇಡ್-೨ ತಹಸೀಲ್ದಾರ್ ಸೂಫಿಯಾ ಸುಲ್ತಾನರ ಮೂಲಕ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಾನಪ್ಪ ಬಿಜಾಸಪುರ ಜೆಟ್ಟೆಪ್ಪ ನಾಗರಾಳ ತಾಲೂಕು ಸಂಚಾಲಕ ತಿಪ್ಪಣ್ಣ ಶೆಳ್ಳಿಗಿ ಮಹೇಶ ಸುಂಗಲಕರ್ ಶೇಖಪ್ಪ ಭಂಡಾರಿ ಭೀಮಣ್ಣ ಕ್ಯಾತನಾಳ ಸೇರಿದಂತೆ ಅನೇಕರಿದ್ದರು.
ತಾಲೂಕಿನಾದ್ಯಂತ ಎಲ್ಲಾ ಸರಕಾರಿ ಶಾಲಾ ಮಕ್ಕಳಿಗೆ ಮದ್ಹ್ಯಾನದ ಬಿಸಿಯೂಟದ ಬದಲು ಆಹಾರ ಧಾನ್ಯಗಳನ್ನು ನೀಡುವ ಕಾರ್ಯ ನಡೆದಿದೆ,ಈಗಾಗಲೇ ಶೇ ೬೦% ಶಾಲೆಗಳಿಗೆ ಆಹಾರ ಧಾನ್ಯಗಳ ಸರಬರಾಜು ಮಾಡಲಾಗಿದೆ. ಮದ್ಯಂತರದಲ್ಲಿ ಚುನಾವಣೆ ನೀತಿ ಸಂಹಿತೆ ಕಾರಣದಿಂದ ವಿತರಣೆ ಸರಬರಾಜಿಗೆ ಸಮಸ್ಯೆಯಾಗಿತ್ತು.ಈಗ ವಿತರಣೆ ನಡೆದಿದೆ.ಅಲ್ಲದೆ ಸುರಪುರ ಕೊಡೇಕಲ್ ಕಕ್ಕೇರಾ ಬಲಶೆಟ್ಟಿಹಾಳ ಭಾಗದಲ್ಲಿ ಇನ್ನೂ ವಿತರಣೆ ಮಾಡಬೇಕಾಗಿದೆ.ಎಲ್ಲಾ ಶಾಲೆಗಳಿಗೆ ಏಕಕಾಲಕ್ಕೆ ಆಹಾರ ಧಾನ್ಯಗಳನ್ನು ಸರಬರಾಜು ಮಾಡಲು ವಾಹನಗಳ ಸಮಸ್ಯೆ ಇದೆ,ಸರಬರಾಜು ವಾಹನಗಳಿಗಾಗಿ ಈಗಾಗಲೆ ಟೆಂಡರ್ ಪ್ರಕ್ರೀಯೆ ಜಾರಿಯಲ್ಲಿದ್ದು ಕೆಲ ದಿನಗಳಲ್ಲಿ ವಾಹನದ ಸಮಸ್ಯೆಯು ಬಗೆಹರಿಯಲಿದೆ.ಅಲ್ಲದೆ ಸದ್ಯ ಅಕ್ಕಿ ಮತ್ತು ಗೋದಿ ಮಾತ್ರ ದಾಸ್ತಾನಿದ್ದು,ಬೇಳೆ ಖಾಲಿಯಾಗಿದೆ.ಆದ್ದರಿಂದ ಈಗ ಅಕ್ಕಿ ಗೋದಿ ಮಾತ್ರ ವಿತರಣೆ ಮಾಡಲಾಗುತ್ತಿದೆ. ಈಗಾಗಲೇ ಏನು ಶೇ ೬೦ ರಷ್ಟು ಶಾಲೆಗಳಿಗೆ ಆಹಾರ ಧಾನ್ಯಗಳನ್ನು ಸರಬರಾಜು ಮಾಡಲಾಗಿದೆ,ಆ ಶಾಲೆಗಳು ಮಕ್ಕಳಿಗೆ ಆಹಾರ ಧಾನ್ಯಗಳನ್ನು ವಿತರಣೆ ಮಾಡಿಲ್ಲದಿದ್ದಲ್ಲಿ ಅಂತಹ ಶಾಲೆಯ ಸಂಬಂಧಿಶಿದ ಶಿಕ್ಷಕರ ವಿರುಧ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಾಲೂಕು ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಮೌನೇಶ ಕಂಬಾರವರು ತಿಳಿಸಿದ್ದಾರೆ.