ಕಲಬುರಗಿ: 12ನೇ ಶತಮಾನದಲ್ಲಿ ಬಸವಾದಿ ಶರಣರು ಬಸವಕಲ್ಯಾಣದಲ್ಲಿ ಕಟ್ಟಿದ್ದ, ಹಿರಿಮೆಯನ್ನು ಚಿರಸ್ಥಾಯಿಗೊಳಿಸಲು ಇಂದು ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಅಭಿನಂದನಹಾರ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷರಾದ ಶರಣಕುಮಾರ ಮೋದಿ ಹರ್ಷವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯ ಆದರ್ಶ ಮಾದರಿಯಾಗಿರುವ ಜಗತ್ತಿನ ಮೊದಲ ಸಂಸತ್ ಅನುಭವ ಮಂಟಪವನ್ನು.12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರ ಪರಿಕಲ್ಪನೆಯಲ್ಲಿ ಸ್ಥಾಪಿತವಾದ ಅನುಭವ ಮಂಟಪ ಕಾಯಕ ತತ್ವ, ಆಡಳಿತ ಸುಧಾರಣೆ, ಹಾಗೂ ನಾಡಿನ ಶ್ರೀಮಂತ ಪರಂಪರೆ, ಸಾಮಾಜಿಕ ಪ್ರಗತಿಯ ಸಂಕೇತ ಎಂದು ಅವರು ತಿಳಿಸಿದ್ದಾರೆ.
ಇಂದು ಉದ್ಘಾಟನೆಗೊಂಡ ನೂತನ ಅನುಭವ ಮಂಟಪ ಮನುಕುಲದ ಒಳತಿಗೆ ಸಾಕ್ಷಿಯಾಗಲಿ ಎಂದು ಆಶಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.