ಕಲಬುರಗಿ: ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ನೆಡೆಯುತ್ತಿದೆ.
ಇವತ್ತಿಗೆ ನಾಲ್ಕು ದಿನಕ್ಕೆ ಕಾಲಿಟ್ಟಿದ್ದು ಇಂದು ಧರಣಿ ಸತ್ಯಾಗ್ರಹದಲ್ಲಿ ರೈತರು ಬೆಳೆದ ತೊಗರಿ ಬೇಳೆಯನ್ನು ಮುಖ್ಯಮಂತ್ರಿಗಳಿಗೆ, ಉಸ್ತುವಾರಿ ಸಚಿವರಿಗೆ, ಸಹಕಾರಿ ಸಚಿವರಿಗೆ ಹಾಗೂ ಸ್ಥಳೀಯ ಶಾಸಕರಿಗೆ ೫೦೦ ಗ್ರಾ, ಉಚಿತವಾಗಿ ದಾನ ಮಾಡಿ, ಪೋಸ್ಟ್ ಮೂಲಕ ಅವರ ಮನೆಗಳಿಗೆ ಕಳುಹಿಸಿ ಕೊಡಲಾಯಿತು.
ಮತ್ತು ಈ ಕೂಡಲೇ ಬೇಡಿಕೆ ಈಡೇರಿಸಲು ಆಗ್ರಹಿಸಿದರು ಕಲ್ಯಾಣ ಕರ್ನಾಟಕದ ಪ್ರಮುಖ ಬೆಳೆಯಾದ ತೊಗರಿಗೆ ೨೦೦೦ ರೂ ಪ್ರೋತ್ಸಾಹ ಧನ ನೀಡಬೇಕು, ಉದ್ಯೋಗ ಖಾತರಿ ಯೋಜನೆಯನ್ನು ನಗರ ಪ್ರದೇಶಗಳಿಗೆ ವಿಸ್ತರಣೆ ಹಾಗೂ ದಿನದ ಕೂಲಿ ೪೨೫ ರೂ ಹೆಚ್ಚಿಸಬೇಕು ಮಹಾನಗರ ಪಾಲಿಕೆಯಲ್ಲಿ ಕಸ ಗುಡಿಸುವ ೨೭೨ ಪೌರ ಕಾರ್ಮಿಕರಿಗೆ ಮನೆ ನಿವೇಶ ನೀಡಬೇಕು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಅಪೌಷ್ಟಿಕತೆಯಿಂದ ಶಿಶು ಮರಣ ಪ್ರಮಾಣ ಹೆಚ್ಚಾಗಿದ್ದು ಇದನ್ನು ತಡೆಗಟ್ಟಲು ಸರ್ಕಾರ ರೇಷನ್ ಅಂಗಡಿಗಳ ಮೂಲಕ ೩ಞg ಬೇಳೆಕಾಳು ವಿತರಣೆ ಮಾಡಬೇಕು. ಕಮಲಾಪುರ ತಾಲೂಕಿನ ತಡಕಲ್ ಗ್ರಾಮದ ನಿವೇಶನಕ್ಕಾಗಿ ಹಣ ಮಂಜೂರು ಮಾಡಬೇಕು.
ಕಾಳಗಿ ತಾಲೂಕಿನ ಕಣಸೂರ್ ಗ್ರಾಮ ಪುನರ್ವಸತಿಗೊಳಿಸಬೇಕು ಎಂದು ಒತ್ತಾಯಿಸಿದರು ಧರಣಿ ಸತ್ಯಾಗ್ರಹದಲ್ಲಿ ಅಶೋಕ ಮ್ಯಾಗೇರಿ, ಶಾಂತಪ್ಪ ಪಾಟೀಲ, ಸುಧಾಮ ಧನ್ನಿ, ಸುನೀಲ ಮಾನಪಡೆ, ಕಾಶಿನಾಥ ಬಂಡಿ, ವೀರಭದ್ರಪ್ಪ ಕಲಬುರಗಿ,ವಿಶ್ವನಾಥ ರಾಗಿ, ಮುಂತಾದವರು ಇದ್ದರು.