ದೇಶದ ಪ್ರತಿಯೊಂದು ಮಹಿಳೆಯ ಏಳಿಗೆಯಲ್ಲಿ ಸಾವುತ್ರಿಬಾಯಿ ಫುಲೆಯವರ ಪಾತ್ರ ಬಹುದೊಡ್ಡದು: ಕೆ. ನೀಲಾ

0
39

ಕಲಬುರಗಿ: ನಗರದ ಡಾ. ಅಂಬೇಡ್ಕರ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯ ಹಮ್ಮಿಕೊಂಡ ಮಾತೋಶ್ರೀ ಸಾವಿತ್ರಿ ಬಾಯಿ ಫುಲರವರ ಜನ್ಮ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಸಾವಿತ್ರಿಬಾಯಿ ಫುಲೆ ಪುಸ್ತಕಗಳು ಶಾಹಿತಿ ಹೋರಾಟಗಾರ್ತಿ ಕೆ. ನೀಲಾ ಅವರು ವಿತರಿಸಿದರು.

ನಂತರ ಮಾತನಾಡಿದ ಅವರು ಸಾವಿತ್ರಿಬಾಯಿ ಫುಲೆ ಮಹಿಳಾ ಚಿಂತಕಿಯಾಗಿ ನಮ್ಮ ನಡುವೆ ಇಂದಿಗು ಇದ್ದಾರೆ ಇಂದಿನ ಮಹಿಳೆಯರು ಮೌಡ್ಯತೆಯನ್ನು ಬಿಟ್ಟು ಶಿಕ್ಷಣವಂತರಾಗಬೇಕು ಯಾವ ದೇಶದಲ್ಲಿ ಹೆಣ್ಣು ಮಕ್ಕಳು ಶಿಕ್ಷಣವಂತರಾಗಿರುತ್ತಾರೊ ಆ ದೇಶ ಪ್ರಗತಿಯ ಹಾದಿಯಲ್ಲಿರುತ್ತದೆ. ಫುಲೆ ದಂಪತಿಗಳು ಅಂದಿನ ಕಾಲದ ವೈದಿಕ ಸಂಪ್ರದಾಯಗಳನ್ನು ತೊರೆದು ಕೆಳಸಮುದಾಯದ ದಲಿತ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದರ ಮೂಲಕ ದೇಶದ ಪ್ರಥಮ ಶಿಕ್ಷಕಿಯಾಗಿದ್ದರು ಎಂದು ಹೇಳಿದ್ದಾರೆ.

Contact Your\'s Advertisement; 9902492681

ಕಾಲೇಜಿನ ಪ್ರಾಚಾರ್ಯರಾದ ಡಾ. ಐ.ಎಸ್. ವಿದ್ಯಾಸಾಗರ ರವರು ಸ್ವಾಗತ ಮತ್ತು ಪ್ರಾಸ್ತಾವಿಕ ಮಾತನಾಡುತ್ತ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯಾಗಿ ಸಮಾಜ ಸುಧಾರಕಳಾಗಿ, ಲೇಖಕಳಾಗಿ, ಸತ್ಯ ಶೋಧಕ ಸಮಾಜವನ್ನು ಮುನ್ನಡೆಸಿದ ಮತೆಯಾಗಿ ಇಂದಿನ ಮಹಿಳೆಯರಿಗೆ ಮಾದರಿಯಾಗಿದ್ದಾರೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಡಾ. ಮಾರುತಿರಾವ ಡಿ.ಮಾಲೆ ಅವರು ವಹಿಸಿದರು. ವೇದಿಕೆಯ ಮೇಲೆ ಸಂಸ್ಥೆಯ ಸದಸ್ಯರಾದ  ಶಾಂತಪ್ಪ ಸೂರನ ಅವರು ಉಪಸ್ತಿತಿ ಇದ್ದರು. ನಿರ್ಮಲಾ ಸಿರಗಾಪುರ ವಂದಿಸಿದರು. ಡಾ. ವಸಂತ ನಾಸಿ ನಿರೂಪಿಸಿದರು. ನ್ಯಾಕ ಕೋ-ಆರಡಿನೇಟರ್ ಗೀರಿಶ ಮೀಶಿ, ಡಾ. ಗಾಧೀಜಿ  ಮೋಳಕೇರೆ ಉಪಸ್ಥಿತರಾಗಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here