ಬಸವೇಶ್ವರ್ ಆಸ್ಪತ್ರೆಯಲ್ಲಿ ಪಿಸ್ಟುಲಾ ಭಗಂದರ್‍ಗೆ ಯಶಸ್ವಿ ಶಸ್ತ್ರಚಿಕಿತ್ಸೆ

0
163

ಕಲಬುರಗಿ: ನಗರದ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ್ ಬೋಧನಾ ಮತ್ತು ಸಾರ್ವಜನಿಕ ಆಸ್ಪತ್ರೆಯಲ್ಲಿ ವ್ಯಕ್ತಿಯೊಬ್ಬನಿಗೆ ಆಗಿದ್ದ ಪಿಸ್ಟುಲಾ ಭಗಂದರ್ ಸಮಸ್ಯೆಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ಕೈಗೊಳ್ಳಲಾಗಿದೆ.
ಬೀದರ್ ಜಿಲ್ಲೆಯ ಬಸವಕಲ್ಯಾಣ್ ತಾಲ್ಲೂಕಿನ ಪರತಾಪೂರ್ ಗ್ರಾಮದ 58 ವರ್ಷ ವಯಸ್ಸಿನ ಶಿವರಾಜ್ ಎಂಬಾತನಿಗೆ ಪಿಸ್ಟುಲಾ ಭಗಂಧರ್ ಸಮಸ್ಯೆ ಉಂಟಾಗಿದ್ದು, ಅಪರೂಪದ ಸಂಕೀರ್ಣಮಯ ಶಸ್ತ್ರ ಚಿಕಿತ್ಸೆಯನ್ನು ವೈದ್ಯರು ಇದೇ ಪ್ರಥಮ ಬಾರಿಗೆ ಹೈದ್ರಾಬಾದ್ ಕರ್ನಾಟಕದಲ್ಲಿ ಯಶಸ್ವಿಯಾಗಿ ಕೈಗೊಂಡರು.

ಶಿವರಾಜನು ಮೂತ್ರ ವಿಸರ್ಜನೆಯಲ್ಲಿ ಕಳೆದ ಆರು ತಿಂಗಳಿಂದ ಹಳದಿ ಬಣ್ಣದ ಕಣಗಳು ವಿಸರ್ಜನೆ ಆಗುತ್ತಿವೆ ಎಂದು ತನ್ನ ಸಮಸ್ಯೆಯನ್ನು ಹೇಳಿಕೊಂಡು ಬಸವೇಶ್ವರ್ ಆಸ್ಪತ್ರೆಗೆ ಬಂದ. ಆಗ ಆತನಿಗೆ ಸಾಮಾನ್ಯ ಶಸ್ತ್ರ ಚಿಕಿತ್ಸೆ ವಿಭಾಗದಲ್ಲಿ ದಾಖಲಿಸಲಾಯಿತು.

Contact Your\'s Advertisement; 9902492681

ಅಧಿಕ ರಕ್ತದೊತ್ತಡ, ಮಧುಮೇಹ ಹಾಗೂ ಹೃದಯ ಸಂಬಂಧೀ ಶಸ್ತ್ರ ಚಿಕಿತ್ಸೆ ಆಗಿರುವ ಹಿನ್ನೆಲೆಯನ್ನುಳ್ಳುವನಾಗಿದ್ದ ಆತನಿಗೆ ಸಿಟಿ ಸ್ಕ್ಯಾನ್ ಮತ್ತು ಕೋಲೋನೋಸ್ಕೋಪಿ ಪರೀಕ್ಷೆಗೆ ವೈದ್ಯರು ಒಳಪಡಿಸಿದಾಗ ರೋಗಿಯ ಮೂತ್ರಕೋಶ ಹಾಗೂ ಕಲ್ಮಶ ದ್ವಾರದ (ಗುದ ದ್ವಾರ) ನಾಳಗಳ ನಡುವೆ ಸಂಪರ್ಕ ಆಗಿರುವುದು ಕಂಡು ಬಂದಿತು. ಈ ರೀತಿ ಎರಡು ಅಂಗಗಳ ಅಥವಾ ನಾಳಗಳ ನಡುವೆ ಗೆರೆಯ ರೂಪದಲ್ಲಿ ಅನಗತ್ಯವಾಗಿ ರೂಪಗೊಳ್ಳುವುದನ್ನು ವೈದ್ಯಕೀಯ ಭಾಷೆಯಲ್ಲಿ ಪಿಸ್ಟುಲಾ ಭಗಂದರ್ ಎಂದು ಕರೆಯಲಾಗುತ್ತದೆ. ಪಿಸ್ಟುಲಾದ ಪರಿಣಾಮವಾಗಿ ಸೊಂಕು ಉಂಟಾಗಿ ಆ ಸೊಂಕು ಮೂತ್ರಕೋಶ ಹಾಗೂ ಕಲ್ಮಶ ದ್ವಾರದಲ್ಲುಂಟಾದ ಸಂಪರ್ಕದ ಪರಿಣಾಮವಾಗಿ ಮಲವಿಸರ್ಜನೆಯು ಮೂತ್ರಕೋಶದ ಮೂಲಕ ಹೊರಗೆ ಬರಲಾರಂಭಿಸಿತು.

ಇಂತಹ ಸಮಸ್ಯೆ ಶೇಕಡಾ 5ರಷ್ಟು ಪ್ರತಿಶತ ಜನರಲ್ಲಿ ಕಂಡುಬರುವಂತಹ ಅತೀ ವಿರಳ ಕಾಯಿಲೆ ಆಗಿದೆ. ಮೂತ್ರಕೋಶ ಹಾಗೂ ದೊಡ್ಡ ಕರುಳಿನ ಸೊಂಕಿತ ಭಾಗವನ್ನು ಪಿಸ್ಟುಲಾ ಸಮೇತವಾಗಿ ಶಸ್ತ್ರ ಚಿಕಿತ್ಸೆ ಮಾಡಿ ತೆಗೆದು ಹಾಕಲಾಯಿತು ಮತ್ತು ಮರುಜೋಡಣೆ ಮಾಡಲಾಯಿತು. ಶಸ್ರಚಿಕಿತ್ಸೆಯ ನಂತರ ರೋಗಿ ಶಿವರಾಜ್‍ನ ಮೂತ್ರವಿಸರ್ಜನೆಯಲ್ಲಿ ಉಂಟಾದ ಸಮಸ್ಯೆ ಸಂಪೂರ್ಣವಾಗಿ ಗುಣವಾಗಿದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದು ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಮಲ್ಲಿಕಾರ್ಜುನ್ ತೆಗನೂರ್ ಅವರು ತಿಳಿಸಿದ್ದಾರೆ.


ಇಂತಹ ಅಪರೂಪದ ಸಂಕೀರ್uಮಯ ಶಸ್ತ್ರ ಚಿಕಿತ್ಸೆಯನ್ನ್ಸು ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ಪ್ರಪಥಮ ಬಾರಿಗೆ ಅತ್ಯಂತ ಯಶಸ್ವಿಯಾಗಿ ಮಾಡಿರುವ ಕೀರ್ತಿ ಬಸವೇಶ್ವರ್ ಭೋಧನಾ ಹಾಗೂ ಸಾರ್ವಜನಿಕ ಆಸ್ಪತೆಯ ಸಾಮಾನ್ಯ ಶಸ್ತ್ರ ಚಿಕಿತ್ಸಾ ವಿಭಾಗದ ಡಾ.ವಿ. ಎಸ್. ಕಪ್ಪಿಕೇರಿ, ಡಾ. ಕೈಲಾಶ್ ಬನಾಳೆ, ಡಾ. ಶರಣು ರುದ್ರವಾಡಿ ಅವರಿಗೆ ಸಲ್ಲುತ್ತದೆ. ಅರವಳಿಕೆ ವಿಭಾಗದ ಹೊಣೆಗಾರಿಕೆಯನ್ನು ಡಾ. ಗುರು ಪಾಟೀಲ್, ಡಾ. ನಂದಾ ನಂದ್ಯಾಳ್ ಅವರು ವಹಿಸಿಕೊಂಡು ಶಸ್ತ್ರ ಚಿಕಿತ್ಸೆಗೆ ಸಹಕರಿಸಿದರು.

ಅರವಳಿಕೆ ವಿಭಾಗದ ಡಾ. ಗುರು ಪಾಟೀಲ್, ಡಾ. ನಂದಾ ನಂದ್ಯಾಳ್, ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಭೀಮಾಶಂಕರ್ ಸಿ. ಬಿಲಗುಂದಿ ಮತ್ತು ಉಪಾಧ್ಯಕ್ಷ ಡಾ. ಶಿವಾನಂದ್ ದೇವರಮನಿ, ಕಾರ್ಯದರ್ಶಿ ನಾಗೇಂದ್ರ ಮಂಠಾಳೆ, ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಕಾಲೇಜಿನ ಸಂಚಾಲಕ ಡಾ, ಸಂಪತ್ ಲೋಯಾ, ಬಸವೇಶ್ವರ್ ಆಸ್ಪತ್ರೆಯ ಸಂಚಾಲಕಿ ಶ್ರೀಮತಿ ಅನುರಾಧಾ ದೇಸಾಯಿ, ಆಡಳಿತ ಮಂಡಳಿಯ ಎಲ್ಲ ಸದಸ್ಯರು, ಮಹಾದೇವಪ್ಪಾ ರಾಂಪೂರೆ ವೈದ್ಯಕೀಯ ಮಹಾ ವಿದ್ಯಾಲಯದ ಡೀನ್ ಡಾ. ಉಮೇಶಚಂದ್ರ ಡಿ.ಜಿ, ವೈದ್ಯಕೀಯ ಅಧೀಕ್ಷಕ ಡಾ. ಮಲ್ಲಿಕಾರ್ಜುನ್ ತೆಗನೂರ್, ಸಾಮಾನ್ಯ ಶಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಶರದ್ ತಂಗಾ ಹಾಗೂ ಆಸ್ಪತ್ರೆಯ ಎಲ್ಲ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ಅಭಿನಂದಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here