ಕಲಬುರಗಿ: ಈಗಾಗಲೇ ಕ್ಷೇತ್ರದಲ್ಲಿ ನೀರು, ಒಳಚರಂಡಿ ಹಾಗೂ ರಸ್ತೆಗಳ ಸುಧಾರಣೆಗೆ ಸಂಬಂಧಿಸಿದಂತೆ ಹಲವು ರೀತಿಯ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದೆ ಎಂದು ಕಲಬುರಗಿ ಉತ್ತರ ಮತ ಕ್ಷೇತ್ರದ ಶಾಸಕಿ ಕನೀಜ್ ಫಾತೀಮಾ ತಿಳಿಸಿದರು.
ಇಂದು ನಗರದ ಫಿರದೋಸ್ ಕಾಲೋನಿಯಲ್ಲಿ 5.65 ಕೋಟಿಗಳ ಅಭಿವೃದ್ಧಿ ಕಾಮಗಾರಿಗೆ ಮಂಜುರಿ ನೀಡಿರುವ ಕುರಿತು ಅಭಿನಂದನೆ ಸಲ್ಲಿಸಿ, ಬಡಾವಣೆಯ ಒಳಿದ ರಸ್ತೆ, ಕುಡಿಯುವ ನೀರಿನ ಕಾಮಗಾರಿ ಶೀಘ್ರ ಪ್ರಾರಂಭಿಸಬೇಕೆಂದು ಒತ್ತಾಯಿಸಿ ಫಿರದೋಸ್ ಕಾಲೋನಿ ವೇಲ್ಫರ ಸೊಸೈಟಿ ಅಧ್ಯಕ್ಷರಾದ ದಸ್ತೇಗಿರ ಅಹ್ಮದ್ ನೇತೃತ್ವದಲ್ಲಿ ಬಡಾವಣೆಯ ನಿವಾಸಿಗಳ ನಿಯೋಗ ಭೇಟಿ ನೀಡಿರುವ ಸಂದರ್ಭದಲ್ಲಿ ಮಾತನಾಡಿದರು.
ಖಮರುಲ್ ಇಸ್ಲಾಂ ಕಲಬುರಗಿ ನಗರದ ಸೌಹಾರ್ದಕ್ಕಾಗಿ ಶ್ರಮಿಸಿದ್ದಾರೆ. ಇಂದು ಸಹ ದಿವಂಗತ ಇಸ್ಲಾಂ ಪ್ರತಿಯೊಂದು ಇಲಾಖೆಯಿಂದ ಕಲಬುರಗಿ ನಗರದ ಅಭಿವೃದ್ಧಿಗಾಗಿ ಶ್ರಮಿಸಿದ ರೀತಿಯಲ್ಲಿ ನಾನು ಮತ್ತು ನನ್ನ ಪುತ್ರ ಫರಾಜುಲ್ ಇಸ್ಲಾಂ ಮುಂದುವರೆಸಿದ್ದಾರೆ. ಕ್ಷೇತ್ರದ ಜನರು ಸಹ ಅದೆ ವಿಶ್ವಾಸದಿಂದ ಪ್ರೀತಿಸುತ್ತಿದ್ದಾರೆ. ಈ ವಿಶ್ವಾಸ ಕಾಪಿಡಿಕೊಂಡು ಹೋಗುವ ವಿಶ್ವಾಸ ನಮಗಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕಿ ಕನೀಜ್ ಫಾತೀಮಾ ಅವತ ಪುತ್ರರಾದ ಫರಾಜುಲ್ ಇಸ್ಲಾಂ, ಅದೀಲ್ ಸುಲೇಮಾನಿ ಸೇಠ್, ಅಬ್ದುಲ್ ರಜಾಕ್, ಮೊಹ್ಮದ್ ಅಕ್ರಮ್, ಇಬ್ರಾಹಿಮ್ ಮಂತ್ರಿ, ಸಮೀರ್ ಗುಂಜೋಟಿ, ಅಜಹರ್, ಹಸನ್ ಅಲಿ, ಖಾಜಿ ರಹಮಾನ್ ಸಿದ್ದಿಖಿ, ನಿಜಾಮೋದ್ದಿನ್ ಸಿದ್ದಿಖಿ, ಶೌಕತ್ ಅಲಿ, ಬಾಬಾ ಬೈ, ಸರ್ಫರಾಜ್, ಮಹೇಬುಬ್ ಶಮಾ ಫರ್ನಿಚರ್, ಅಬ್ದುಲ್ ರಶೀದ್, ಮೈನೊದ್ದೀನ್ ಸಾಬ್, ಸೇರಿದಂತೆ ಮುಂತಾದವರು.