ಪೇಠ ಅಮ್ಮಾಪುರದಲ್ಲಿ ಬೀದಿ ನಾಟಕದ ಮೂಲಕ ಕೊರೊನಾ ಜಾಗೃತಿ

0
18

ಸುರಪುರ: ತಾಲೂಕಿನ ಪೇಠ ಅಮ್ಮಾಪುರ ಗ್ರಾಮದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತಿ ಯಾದಗಿರಿ ಹಾಗು ಮದರ್ ತೇರೆಸಾ ಗಾಮೀಣ ಅಭಿವೃಧ್ಧಿ ಶಿಕ್ಷಣ ಸಂಸ್ಥೆಯ ವತಿಯಿಂದ ಕೊರೊನಾ ಕುರಿತು ಜನ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.

ಕೊರೊನಾ ಜಾಗೃತಿ ಅಂಗವಾಗಿ ಬೀದಿ ನಾಟಕವನ್ನು ನಡೆಸಲಾಯಿತು.ಕಾರ್ಯಕ್ರಮಕ್ಕೆ ಸ್ಥಳಿಯ ಮುಖಂಡ ಮಲ್ಲಿಕಾರ್ಜುನರಡ್ಡಿ ಕೋಳಿಹಾಳ ತಮಟೆ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿ,ಇಂದು ಕೊರೊನಾ ಎಂಬುದು ಈ ದೇಶಕ್ಕೆ ಒಂದು ಮಹಾಮಾರಿಯಾಗಿ ಆವರಿಸಿದೆ,ಇದರ ನಿರ್ಮೂಲನೆಯೂ ಸನಿಹದಲ್ಲಿದ್ದು ಲಸಿಕೆ ಎಲ್ಲರಿಗು ನೀಡುವ ಮೂಲಕ ವೈರಸ್ ನಾಶಗೊಳಿಸಲಾಗಲಿದೆ ಎಂದರು.

Contact Your\'s Advertisement; 9902492681

ಮದರ್ ತೇರೆಸಾ ಗ್ರಾಮೀಣ ಮತ್ತು ಶಿಕ್ಷಣ ಅಭಿವೃಧ್ಧಿ ಸಂಸ್ಥೆಯ ಅಧ್ಯಕ್ಷ ಭೀಮರಾಯ ಸಿಂಧಗೇರಿ ಮಾತನಾಡಿ,ಕೊರೊನಾ ವೈರಸ್‌ಗೆ ಸದ್ಯ ಸಾರ್ವಜನಿಕರಿಗೆ ಲಸಿಕೆ ದೊರೆಯದ ಕಾರಣ ಎಲ್ಲರು ಕೋವಿಡ್ ನಿಯಮಗಳನ್ನು ಪಾಲಿಸುವ ಮೂಲಕ ಕೊರೊನಾ ಮುಕ್ತರಾಗಿರಬಹುದಾಗಿದೆ. ಎಲ್ಲರು ಮಾಸ್ಕ್ ಧರಿಸುವುದು,ಸಾಮಾಜಿಕ ಅಂತರ ಕಾಪಾಡುವುದು ಹಾಗು ಸ್ಯಾನಿಟಯಜರ್ ಬಳಸುವುದು ಅವಶ್ಯ ಎಂದರು.

ನಂತರ ಜನರಲ್ಲಿ ಕೊರೊನಾ ಜಾಗೃತಿ ಮೂಡಿಸಲು ಮದರ್ ತೇರೆಸಾ ಸಂಸ್ಥೆಯ ಕಲಾವಿದರಿಂದ ಬೀದಿ ನಾಟಕ ಪ್ರದರ್ಶನ ನಡೆಸಲಾಯಿತು.

ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ಸಹಾಯಕ ನಾಗರಾಜ, ನೂತನ ಗ್ರಾಮ ಪಂಚಾಯತಿ ಸದಸ್ಯರಾ ದ್ಯಾವಪ್ಪ ಪಸಲಾದಿ ಪ್ರಕಾಶ ಸಮೇದ ಮುಖಂಡ ಶಿವಮೂರ್ತಿ ತನಿಕೇದಾರ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.ನಂತರ ಸುರಪುರ ನಗರಕ್ಕೆ ತೆರಳಿದ ಕಲಾ ತಮಡ ಸುರಪುರ ನಗರದ ಗುಡಾಳ ಕೇರಿಯಲ್ಲಿಯೂ ಬೀದಿ ನಾಟಕದ ಮೂಲಕ ಜನರಲ್ಲಿ ಕೊರೊನಾ ಜಾಗೃತಿ ಮೂಡಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here