ಕ್ರೈಸ್ತರ ರಕ್ಷಣಾ ವೇದಿಕೆ ಪದಾಧಿಕಾರಿಗಳ ಆಯ್ಕೆ

0
163

ಚಿಕ್ಕಬಳ್ಳಾಪುರ: ಜಿಲ್ಲೆ ಮತ್ತು ತಾಲ್ಲೂಕಿನ ಕ್ರೈಸ್ತರ ರಕ್ಷಣಾ ವೇದಿಕೆಯ ವತಿಯಿಂದ ಹೊಸ ವರ್ಷದ ಆಚರಣೆ ಹಾಗೂ ಕ್ರೈಸ್ತರ ರಕ್ಷಣಾವೇದಿಕೆಯ ಸಂಘಟನೆಗೆ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಕನ್ನಡ ಕ್ರೈಸ್ತರ ರಕ್ಷಣಾವೇದಿಕೆ ಸಂಘಟನೆಯ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರಾದ ಜೆ ಸುರೇಶ್ ಬಾಬು ಮಾತನಾಡಿ ಕ್ರೈಸ್ತರ ರಕ್ಷಣಾವೇದಿಕೆಯ ಸಂಘಟನೆಯಿಂದ ಈ ವರ್ಷ ಹೊಸ ವರ್ಷದ ಕಾರ್ಯಕ್ರಮವನ್ನು ವೈಭವದಿಂದ ಆಚರಣೆ ಮಾಡಲಾಗುತ್ತಿದೆ. ಕಳೆದ ಹಲವಾರು ವರ್ಷಗಳಿಂದ ಕನ್ನಡ ಭಾಷೆಯ ಹಿತವನ್ನು ರಕ್ಷಿಸುವಲ್ಲಿ ನಮ್ಮ ಸಂಘಟನೆ ಸದಾ ಮುಂದಾಗಿರುತ್ತದೆ ಎಂದರು.
ಹೆತ್ತ ತಾಯಿಯನ್ನು ಹೊತ್ತ ಭೂಮಿಯನ್ನು ಎಂದು ಮರೆಯದೆ ನಾಡು,ನುಡಿ,ಜಲ,ನೆಲದ ರಕ್ಷಣೆಗೆ ಎಲ್ಲರೂ ಮುಂದಾಗಬೇಕಾಗಿದೆ ಎಂದು ಕರೆ ನೀಡಿದರು.

Contact Your\'s Advertisement; 9902492681

ದೇಶವನ್ನ ಸಾಮಾಜಿಕ, ಆರ್ಥಿಕ, ಮತ್ತು ಶೈಕ್ಷಣಿಕವಾಗಿ ಮುಂಚೂಣಿಗೆ ತರುವ ನಿಟ್ಟಿನಲ್ಲಿ ಕ್ರೈಸ್ತರ ರಕ್ಷಣಾವೇದಿಕೆ ತನ್ನದೇ ಸಿದ್ಧಾಂತಗಳೊಂದಿಗೆ ಯೋಜನೆಗಳನ್ನು ರೂಪಿಸಿಕೊಂಡಿದೆ.‌ ದೀನ ದಲಿತರಿಗೆ, ಬಡವ-ಬಲ್ಲಿದರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲು ಸರ್ಕಾರೇತರ ಸಂಸ್ಥೆಯಾಗಿ ಸಂಘಟನೆ ಶ್ರಮಿಸಲಿದೆ ಎಂದು ಅವರು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಕನ್ನಡ ಕ್ರೈಸ್ತರ ರಕ್ಷಣಾವೇದಿಕೆ ಸಂಘಟನೆಯ ಚಿಕ್ಕಬಳ್ಳಾಪುರ ಘಟಕದ ಜಿಲ್ಲಾಧ್ಯಕ್ಷರಾದ ಜೆ ಸುರೇಶ್ ಬಾಬು, ಗೌರವಾಧ್ಯಕ್ಷರಾದ ಫಿಲಿಪ್ ಫಾಸ್ಟರ್, ಉಪಾಧ್ಯಕ್ಷರಾದ ಫಾಸ್ಟರ್ ಮುನಿಸ್ವಾಮಿ. ಪ್ರಧಾನ ಕಾರ್ಯದರ್ಶಿ ಫಾಸ್ಟರ್ ಜೀವನ್ ಸಾಮಿಯಲ್, ಸಹ ಕಾರ್ಯದರ್ಶಿ ಫಾಸ್ಟರ್ ಸತೀಶ್ ಅರೋನ್, ಖಜಾಂಚಿ ಫಾಸ್ಟರ್ ಸಂತೋಷ್, ಸಂಘಟನಾ ಕಾರ್ಯದರ್ಶಿಗಳು. ಸಂಚಾಲಕರು. ಹಾಗೂ ಕನ್ನಡ ಕ್ರೈಸ್ತರ ರಕ್ಷಣಾವೇದಿಕೆಯ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here