ಸ್ಲಂಜನರ ನಿರಂತರ ಹೋರಾಟದಿಂದರಾಜ್ಯ ಸರ್ಕಾರ ಹಕ್ಕುಪತ್ರ ನೀಡುವ ಐತಿಹಾಸಿಕ ನಿರ್ಣಯಕೈಗೊಂಡಿದೆ: ಪಿ.ಆರ್ ಶಿವಪ್ರಸಾದ್

0
54

ಬೆಂಗಳೂರು: ಸ್ಲಂಜನಾಂದೋಲನ ಕರ್ನಾಟಕದ 11ನೇ ವರ್ಷಾಚರಣೆ ಮತ್ತು ಸಾವಿತ್ರಿ ಬಾಪುಲೆಯವರ 190ನೇ ಜಯಂತಿ ಅಂಗವಾಗಿ ನಗರ ವಂಚಿತ ಸಮುದಾಯಗಳ ಮುಂದಿನ ಹೆಜ್ಜೆಕುರಿತುರಾಜ್ಯಮಟ್ಟದ ಪ್ರತಿನಿಧಿಗಳ ಸಮಾವೇಶವನ್ನು ಬೆಂಗಳೂರಿನ ಗಾಂಧಿಭವನದಲ್ಲಿ ಹಮ್ಮಿಕೊಳ್ಳಲಾಯಿತು.

ಸಮಾವೇಶದ ಹಕ್ಕೋತ್ತಾಯವನ್ನು ಸರಕಾರದ ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಪರವಾಗಿಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತರಾದ ಶಿವಪ್ರಸಾದ್ ಮನವಿ ಸ್ವೀಕರಿಸಿ ಸ್ಲಂಜನರನಿರಂತರ ಹೋರಾಟದಿಂದರಾಜ್ಯ ಸರ್ಕಾರ ಇತ್ತೀಚ್ಛೆಗೆ ಹಕ್ಕುಪತ್ರ ನೀಡುವ ಐತಿಹಾಸಿಕ ನಿರ್ಣಯಕೈಗೊಂಡಿದ್ದು ಹಂತಹಂತವಾಗಿರಾಜ್ಯದಲ್ಲಿರುವ 3 ಲಕ್ಷ ಕುಟುಂಬಗಳಿಗೆಕ್ರಯಪತ್ರ ನೀಡಲಾಗುವುದು. ನಗರ ಪ್ರದೇಶದಲ್ಲಿ ವಸತಿ ನಿರ್ಮಾಣಕ್ಕೆಅಗತ್ಯವಿರುವ ಲ್ಯಾಂಡ್‍ಬ್ಯಾಂಕ್ ನೀತಿ ಜಾರಿಗೊಳಿಸುವ ಪ್ರಸ್ತಾವನೆಯನ್ನುಸರಕಾರದಉನ್ನತ ಮಟ್ಟದ ಸಮಿತಿಗೆ ಸಲ್ಲಿಸಲಾಗುವುದು. ಸ್ಲಂಜನಸಂಖ್ಯೆಗೆಅನುಗುಣವಾಗಿ ಬಜೆಟ್‍ನಲ್ಲಿಪಾಲಿನ ಒತ್ತಾಯವನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ಖಾಸಗಿ ಮಾಲೀಕತ್ವದಲ್ಲಿರುವಕೊಳಚೆ ಪ್ರದೇಶದ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಸಾಧ್ಯವಾಗುತ್ತಿಲ್ಲ. ಭೂ ಸ್ವಾಧೀನಕ್ಕೆ ಸರ್ಕಾರ ಹಣ ನೀಡಿದರೆ ಮಾಲೀಕರಿಗೆ ಪರಿಹಾರ ನೀಡಿ ಭೂಒಡೆತನ ನೀಡಬಹುದಾಗಿದೆ. ಸ್ಲಂ ಮುಕ್ತಗೊಳಿಸುವ ಕೇಂದ್ರ ಮತ್ತುರಾಜ್ಯ ಸರ್ಕಾರಗಳು ಯೋಜನೆಯಲ್ಲಿ ಮಂಡಳಿಯಿಂದ 1.28 ಲಕ್ಷ ಮನೆಗಳನ್ನು ನಿರ್ಮಾಣ ಮಾಡುತ್ತಿದ್ದು ಫಲಾನುಭವಿ ಶುಲ್ಕ ಹಾಗೂ ಘಟಕದ ವೆಚ್ಚ ಏರಿಕೆಯ ಬಗ್ಗೆ ಸರ್ಕಾರತೀರ್ಮಾನ ಕೈಗೊಳ್ಳಲಿದೆ. ಸ್ಲಂಜನಾಂದೋಲನ ಸಂಘಟನೆಯ ಬೇಡಿಕೆಗಳನ್ನು ಈಡೇರಿಸುವ ಪ್ರಯತ್ನ ಮಾಡಲಾಗುವುದೆಂದರು.

Contact Your\'s Advertisement; 9902492681

ಮಂಡಳಿಯ ತಾಂತ್ರಿಕ ನಿರ್ದೇಶಕರಾದ ಬಾಲರಾಜು ಮಾತನಾಡಿಡಿಸೆಂಬರ್ 30 2020 ರಿಂದಗೋವಿಂದರಾಜು ನಗರ ವಿಧಾನ ಸಭಾಕ್ಷೇತ್ರದಿಂದ ಸ್ಲಂಜನರಿಗೆ ಹಕ್ಕುಪತ್ರ ನೀಡುವಪ್ರಕ್ರಿಯೆಯನ್ನು ಪ್ರಾರಂಭಗೊಳಿಸಿದ್ದು ಸರ್ಕಾರ ನಿಗಧೀಗೊಳಿಸಿದ ಶುಲ್ಕವನ್ನು ಪಾವತಿಸಿದ ಮೇಲೆ ಕ್ರಯಪತ್ರ ನೀಡಲಾಗುವುದು. ಇದನ್ನು ಸ್ಥಳೀಯ ಸಂಸ್ಥೆಗಳಲ್ಲಿ ಖಾತೆ ಮಾಡಿಸಿಕೊಂಡು ಜನರೇ ಬ್ಯಾಂಕ್ ಗಳಲ್ಲಿಂದ ಸಾಲ ಪಡೆದುತಮ್ಮ ಮನೆಗಳನ್ನು ಕಟ್ಟಿಕೊಳ್ಳಬಹುದಿದೆ. ಸ್ಲಂಜನಾಂದೋಲನ ಕರ್ನಾಟಕ ಬದ್ಧತೆಯ ಸಂಘಟನೆಯಾಗಿದ್ದು ಸಂಘಟನೆಯಒತ್ತಾಯದಿಂದ ಕೊಳಗೇರಿಗಳಅಭಿವೃದ್ಧಿಗಾಗಿ ಮಂಡಳಿಗೆ ಬಜೆಟ್‍ನಲ್ಲಿ ಹಣದೊರೆಯುತ್ತಿದೆ ಹಾಗೂ ಮಂಡಳಿಯ ನೌಕರರಿಗೂ ಸಂಬಳ ನೀಡಲು ಸಾಧ್ಯವಾಗುತ್ತಿದೆಎಂದರು.

ಸ್ಲಂಜನಾಂದೋಲನ ಕರ್ನಾಟಕರಾಜ್ಯ ಸಂಚಾಲಕರಾದ ಎ. ನರಸಿಂಹಮೂರ್ತಿ ಸಮಾವೇಶದ ಹಕ್ಕೋತ್ತಾಯವನ್ನು ಸಲ್ಲಿಸಿ 2016ರ ಸ್ಲಂ ನೀತಿಅನ್ವಯಇಡಿರಾಜ್ಯದಲ್ಲಿ ಸ್ಲಂಘೋಷಣೆಗಾಗಿ ಬಾಕಿರುವ 1500 ಕೊಳಚೆ ಪ್ರದೇಶಗಳನ್ನು ಘೋಷಿಸಲು ಕ್ರಿಯಾಯೋಜನೆಯನ್ನು ವಸತಿ ಇಲಾಖೆ ಸಿದ್ದಗೊಳಿಸಿಕೊಳ್ಳಬೇಕು. ಹಕ್ಕುಪತ್ರ ವಿತರಣೆಗಾಗಿಜಿಲ್ಲಾ ಮಟ್ಟದಲ್ಲಿಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸ್ಲಂ ಸಂಘಟನೆಯ ಪ್ರತಿನಿಧಿಗಳನ್ನೊಳಗೊಂಡ ಸಮಿತಿ ರಚಿಸಿ 6 ತಿಂಗಳು ಒಳಗಾಗಿ ಹಕ್ಕುಪತ್ರ ನೀಡಬೇಕು.ರಾಜ್ಯದಲ್ಲಿ ವಸತಿ ಹಕ್ಕು ಖಾತ್ರಿಗೊಳಿಸಲುವ ಕಾಯಿದೆಯನ್ನು ಜಾರಿಗೊಳಿಸಿ ನಿವೇಶನ ರಹಿತರಿಗೆ ಸರ್ಕಾರಿ ಭೂಮಿಯನ್ನು ಮೀಸಲಿಡುವ ಲ್ಯಾಂಡ್‍ಬ್ಯಾಂಕ್ ನೀತಿಯನ್ನು ಸರಕಾರರೂಪಿಸಬೇಕು.

2021ರ ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಕೊಳಚೆ ಪ್ರದೇಶಗಳ ಅಭಿವೃದ್ಧಿಗೆಒಂದು ಸಾವಿರಕೋಟಿ ಹಣ ನೀಡಲು ಮುಖ್ಯಮಂತ್ರಿಗಳು ಮುಂದಾಗಬೇಕೆಂದು ಒತ್ತಾಯಿಸಿದರು.

ಸಮಾವೇಶದಲ್ಲಿ ವಿಭಾಗೀಯ ಸಂಚಾಲಕರಾದಜನಾರ್ಧನ್ ಹಳ್ಳಿಬೆಂಚಿ, ಚಂದ್ರಮ್ಮ, ಎಂ.ಬಿ ನಾಗಣ್ಣಗೌಡ, ಜಿಲ್ಲಾ ಸಂಚಾಲಕರಾದ ಶೋಭಕಮತಾರ್, ಶೇಖರ್ ಬಾಬು, ರೇಣುಕ ಸರಡಗಿ, ಮಂಜಣ್ಣ, ಅಲ್ಲಮಪ್ರಭು, ಫಕೀರಪ್ಪ ತಳವಾರ್, ರೇಣುಕಎಲ್ಲಮ್ಮ, ವೆಂಕಮ್ಮ, ಅರುಣ್‍ಟಿ.ಜಿ, ಅಶೋಕ್ ಕುಸುಬಿ, ಫರ್ವೀನ್ ಹವಲ್ದಾರ್, ಅಕ್ರಮ್ ಮಶಲ್ಕರ್, ವಿಕಾಶ್ ಸವರೇಕರ್, ಹಣಮಂತ ಶಹಪೂರ್ಕರ್, ವಿಷ್ಣು ಇಂಗಳೆ, ಕಲ್ಲೇಶ್, ಶಂಕರಯ್ಯ ಭಾಗವಹಿಸಿದರು.

ಸಮಾವೇಶದಲ್ಲಿದೆಹಲಿಯಲ್ಲಿ ನಡೆಯುತ್ತಿರುವರೈತರ ಹೋರಾಟವನ್ನು ಬೆಂಬಲಿಸಿ ಹಾಗೂ ರಾಜ್ಯಸರ್ಕಾರ ಜಾರಿಗೊಳಿಸಿರುವ ಜಾನುವಾರು ಹತ್ಯೆ ನಿಷೇಧ ಹಿಂಪಡೆಯಲು ಆಗ್ರಹಿಸಿ, ಸ್ಲಂಜನರ ಭೂಒಡೆತನ ವಸತಿ ಹಕ್ಕು ಕಾಯಿದೆಜಾರಿಗೆಜನಾಂದೋಲನ ತೀವ್ರಗೊಳಿಸಲು ಸಂಘಟನೆ ಬಲಿಷ್ಟತೆ ಮತ್ತು ವಿಸ್ತರಣೆ ಹಾಗೂ ನಗರಕೇಂದ್ರಿತ ಸ್ಲಂಜನರ ಚಳುವಳಿಗೆ ಅಗತ್ಯವಿರುವ ಕಾರ್ಯಕ್ರಮಗಳನ್ನು ರೂಪಿಸಲು ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here