ಕಲಬುರಗಿ: ಕರ್ನಾಕಟ ರಾಜ್ಯ ಸರಕಾರಿ ಮುಸ್ಲಿಂ ವೆಲ್ಫೇತ್ ಅಶೋಸಿಯಿಶನ್ ಜಿಲ್ಲಾ ಘಟಕದಿಂದ ಹೋರಾಟಗಾರ, ಜನಪರ ನಾಯಕ ದಿ. ಕಾಂ. ಮಾರುತಿ ಮಾನಪಡೆ ಅವರಿಗೆ “ಕಲಬುರಗಿ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಗರದ ಅನಜುಮನ್ ತರಖಿ ಉರ್ದು ಸಭಾಂಗಣದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸಂಘದಿಂದ 2021 ವರ್ಷದ ಕ್ಯಾಲೆಂಡರ್ ಬಿಡುಗಡೆ, ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಉನ್ನತ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕಲಬುರಗಿ ಉತ್ತರ ಮತಕ್ಷೇತ್ರದ ಶಾಸಕಿ ಕನೀಜ್ ಫಾತೀಮಾ ಅವರ ಸಮ್ಮುಖದಲ್ಲಿ ದಿವಂಗತ ಮಾನಪಡೆ ಅವರ ಪುತ್ರರಾದ ಕಾಂ. ಸುನೀಲ ಮಾನಪಡೆ ಅವರಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದ ಸುನೀಲ ಮಾನಪಡೆ, ತಂದೆಯವರ ನಿಸ್ವಾರ್ಥ ಸೇವೆ ಪರಿಗಣಿಸಿ ಪ್ರಶಸ್ತಿ ನೀಡಿರುವುದರಿಂದ ಆಭಾರಿಯಾಗಿರುವುದಾಗಿ ಅಭಿನಂದನೆ ವ್ಯಕ್ತಪಡಿಸಿದರು.