ಕಲಬುರಗಿ: ಬೆಂಗಳೂರಿನ ಕಟೋನ್ಮೆಂಟ್ ರೈಲ್ವೆ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಬಿ.ಎಸ್.ಸುಧಾಕರಗೆ 18 ವರ್ಷಗಳ ಸೇವಾ ಹಿರಿತನ ಹಾಗೂ ಹೈ ಪ್ರೋಫೈಲ್ ಕೊಲೆ, ಸುಲಿಗೆ, ಡಕಾಯಿತಿ, ಪ್ರಕರಣ ಸೇರಿ ಹಲವು ಪ್ರಕರಣಗಳನ್ನು ಭೇದಿಸಿದ್ದಕ್ಕಾಗಿ ಇದೀಗ ರಾಷ್ಟ್ರಪತಿ ವಿಶಷ್ಟ ಸೇವಾ ಪದಕ ಪಡೆದಿದ್ದಾರೆ.
ಮೂಲತಃ ಜಿಲ್ಲೆಯ ಬಸವನ ಸಂಗೋಳಗಿ ಗ್ರಾಮದವರಾದ ಬಿ.ಎಸ್.ಸುಧಾಕರ ಸಂಗೋಳಗಿ, 1998 ನೇ ಸಿವಿಲ್ ಪಿಎಸ್ ಐ ಬ್ಯಾಚ್‌ನವರಾಗಿದ್ದಾರೆ.
ಮೊದಲಿಗೆ ಕಂಪ್ಲಿ ಪೊಲೀಸ್ ಠಾಣೆಯಿಂದ ಸೇವೆ ಆರಂಭಿಸಿದ ಇವರು, ಇದೀಗ ಬೆಂಗಳೂರಿನ ಕಟೋನ್ಮೆಂಟ್ ಠಾಣೆಯಲ್ಲಿಇನ್ಸಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ದೇ ಇವರಿಗೆ 2016 ರಲ್ಲಿ ಮುಖ್ಯಮಂತ್ರಿ ಪದಕ ಸಹ ಲಭಿಸಿದೆ.
ಕಲಬುರಗಿ ಚೌಕ್ ಪೊಲೀಸ್ ಠಾಣೆ ಸೇರಿ ಹಲವು ಕಡೆಗಳಲ್ಲಿ ಕಳೆದ 23 ವರ್ಷಗಳಿಂದ ಕಾರ್ಯ ನಿರ್ವಹಿಸಿದ್ದಾರೆ.