ವ್ಯಕ್ತಿಯ ಚಾರಿತ್ರ್ಯವೇ ಅವನಿಗಿರುವ ಬೆಲೆಬಾಳುವ ಆಭರಣ: ಶಶೀಲ್ ಜಿ.ನಮೋಶಿ

0
42

ಕಲಬುರಗಿ: ವ್ಯಕ್ತಿಯ ಚಾರಿತ್ರ್ಯವೇ ಅವನಿಗಿರುವ ಬೆಲೆಬಾಳುವ ಆಭರಣ. ನಮ್ಮ ದೇಶದಲ್ಲಿ ನಡತೆಗೆ ಬಹಳ ಮಹತ್ವವಿದೆ. ಏನು ಮಾಡಬೇಕು, ಏನು ಮಾಡಬಾರದು ಎಂಬ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಬೆಳೆಸುವುದೇ ಮೌಲ್ಯಗಳು ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ ಹೇಳಿದರು.

ಕಲ್ಯಾಣ ಕರ್ನಾಟಕ ಶಿಕ್ಷಣ ಪ್ರತಿಷ್ಠಾನದ ಗುರೂಜಿ ಪದವಿ ಮಹಾವಿದ್ಯಾಲಯದ ವತಿಯಿಂದ ಹೊರತಂದಿರುವ ದಿನದರ್ಶಿಕೆಯನ್ನು ನಗರದ ಸುಲಫಲ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಶಿಕ್ಷಣದ ಉದ್ದೇಶ ಉತ್ತಮ ಜೀವನ ಕಟ್ಟಿಕೊಡುವುದಾಗಿರಬೇಕು. ಕೇವಲ ವೃತ್ತಿ, ಜೀವನೋಪಾಯಕ್ಕಾಗಿ ವಿದ್ಯೆ ಕಲಿಸದೇ, ಮಾನವೀಯ ಮೌಲ್ಯಗಳನ್ನು ಶಿಕ್ಷಣದಲ್ಲಿ ನೀಡಬೇಕು, ಉತ್ತಮ ಮಾನವೀಯ ಮೌಲ್ಯಗಳಿಂದ ಮಾತ್ರ ಉತ್ತಮ ನಾಗರೀಕರಾಗಲು ಸಾಧ್ಯ ಎಂದು ಹೇಳಿದರು.

Contact Your\'s Advertisement; 9902492681

ಸಾರಂಗಮಠದ ಜಗದ್ಗುರು ಶ್ರೀ ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಸಮಾರಂಭದ ಸಾನಿಧ್ಯ ವಹಿಸಿದ್ದರು. ಮಾಜಿ ಎಂಎಲ್ಸಿ ತಿಪ್ಪಣಪ್ಪ ಕಮಕನೂರ, ಕಾಲೇಜಿನ ಅಧ್ಯಕ್ಷ ಕಲ್ಯಾಣಕುಮಾರ ಶೀಲವಂತ, ಕಾಲೇಜಿನ ಪ್ರಾಚಾರ್ಯ ಡಾ.ಸದಿಯಾ ಹೆಚ್. ಎಸ್, ಶರಣ ಸಾಹಿತಿ ವಿಜಯಕುಮಾರ ತೇಗಲತಿಪ್ಪಿ, ಪ್ರೊ.ಯಶ್ವಂತರಾಯ ಅಷ್ಠಗಿ, ನ್ಯಾಯವಾದಿ ಮಾಲತಿ ರೇಷ್ಮಿ, ವಿಜಯಲಕ್ಷ್ಮೀ ನೆಪೆರಿ ಕೋಡ್ಲಿ, ಶರಣರಾಜ್ ಛಪ್ಪರಬಂದಿ, ವಿದ್ಯಾಸಾಗರ ದೇಶಮುಖ, ವಿಶ್ವನಾಥ ತೊಟ್ನಳ್ಳಿ, ಡಾ.ವೆಂಕಟೆಶ ಜಾಧವ, ಮಂಜುಳಾ ಪಾಟೀಲ ನಿಂಬಾಳ, ಶಿವಾನಂದ ಮಠಪತಿ, ಸೈಯದ್ ಹಾಜಿಪೀರ್, ಗುರುಶಾಂತ ಓಗಿ, ಮಲ್ಲಿಕಾರ್ಜುನ ಸಂಗೋಳಗಿ, ಪ್ರಭುಲಿಂಗ ಮೂಲಗೆ, ದೇವೇಂದ್ರಪ್ಪ ಗಣಮುಖಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here