ತೆಗನೂರದಲ್ಲಿ ರಸ್ತೆ ಅಪಘಾತ ರಸ್ತೆ ತಡೆ,ಮಂತ್ರಿಗೂ ತಟ್ಟಿದ ರಸ್ತೆ ತಡೆ ಬಿಸಿ

0
311

ಶಹಾಬಾದ:ತಾಲೂಕಿನ ದೇವನತೆಗನೂರ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 150 ರಲ್ಲಿ ಸಂಜೆ ಅಪರಿಚಿತ ಕಾರವೊಂದು ಬಾಲಕಿಯೋರ್ವಳಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದರಿಂದ ಸ್ಥಳೀಯರು ಆಕ್ರೋಶದಿಂದ ರಸ್ತೆ ತಡೆ ನಡೆಸಿ,ಪ್ರತಿಭಟನೆ ನಡೆಸಿದರು.ಅದೇ ಮಾರ್ಗವಾಗಿ ಹೋಗುತ್ತಿದ್ದ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಅವರಿಗೂ ರಸ್ತೆ ತಡೆಯ ಬಿಸಿ ತಟ್ಟಿತು.

ಗಂಭೀರವಾಗಿ ಗಾಯಗೊಂಡ ಬಾಲಕಿ ಅಂಬಿಕಾ ನಿಂಗಪ್ಪ(12) ಹೊನ್ನಕಿರಣಗಿ ಎಂದು ಗುರುತಿಸಲಾಗಿದೆ.
ಗಾಯಗೊಂಡ ಬಾಲಕಿ ದೇವನತೆಗನೂರ ಗ್ರಾಮದ ಬಂಧುಗಳಾದ ಕುಮಾರ ಹಾಲಪ್ಪ ಎಂಬುವರ ಮನೆಗೆ ಕಾರ್ಯಕ್ರಮವೊಂದಕ್ಕೆ ಪೋಷಕರೊಂದಿಗೆ ಆಗಮಿಸಿದ್ದಳು.ಅಪಘಾತ ನಡೆದ ವಿಷಯ ತಿಳಿದು,ಬಾಲಕಿಯ ಬಂಧುಗಳು,ಗ್ರಾಮಸ್ಥರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.ಅಲ್ಲದೇ ಆಕ್ರೋಶಗೊಂಡ ಜನರು ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ.ಅಲ್ಲಿ ಸೇರಿದ್ದ ಜನರನ್ನು ಚದುರಿಸಲು ಲಘು ಲಾಠಿ ಪ್ರಹಾರವೂ ನಡೆದಿದೆ ಎಂದು ಹೇಳಲಾಗಿದೆ.

Contact Your\'s Advertisement; 9902492681

ಅದೇ ಮಾರ್ಗವಾಗಿ ಹೋಗುತ್ತಿದ್ದ ಸಚಿವ ಪ್ರಭು ಚವ್ಹಾಣ ಅವರಿಗೂ ರಸ್ತೆ ತಡೆ ಬಿಸಿ ತಟ್ಟಿತು.ಸ್ಥಳಕ್ಕೆ ಎಸ್ಪಿ ಸಿಮಿ ಮರಿಯಮ್ ಭೇಟಿ ನೀಡಿ ರಸ್ತೆಗೆ ಅಡ್ಡಲಾಗಿ ರಸ್ತೆ ತಡೆ ನಿರ್ಮಿಸುವದಾಗಿ ಅಶ್ವಾಸನೆ ನೀಡಿದ ನಂತರ ರಸ್ತೆ ತಡೆ ಹಿಂದಕ್ಕೆ ಪಡೆಲಾಯಿತು.
ಗಾಯಗೊಂಡ ಬಾಲಕಿಗೆ ಕಲಬುರಗಿ ಆಸ್ಪತ್ರೆಗೆ ಸೇರಿಸಲಾಗಿದೆ. ರಸ್ತೆ ತಡೆಯಿಂದ ಸುಮಾರು 40 ನಿಮಿಷ ವಾಹನ ಓಡಾಟಕ್ಕೆ ವ್ಯತ್ಯಯ ಉಂಟಾಯಿತು.

ಅಪರಿಚಿತ ಕಾರವೊಂದು ಬಾಲಕಿಯೋರ್ವಳಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದರಿಂದ ಸ್ಥಳೀಯರು ಆಕ್ರೋಶದಿಂದ ರಸ್ತೆ ತಡೆ ನಡೆಸಿದಲ್ಲದೇ, ಕಲ್ಲು ತೂರಾಟ ನಡೆಸಿದ್ದರಿಂದ ಇಬ್ಬರು ಪೊಲೀಸರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ಪಿಐ ಬಿ.ಅಮರೇಶ ಉದಯವಾಣಿಗೆ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here