ಜನೆವರಿ 12 ರಂದು ಸ್ವಾಮಿ ವಿವೇಕಾನಂದರ ಜನ್ಮ ದಿನವನ್ನು ರಾಷ್ಟ್ರೀಯ ಯುವ ದಿನವೆಂದು ಆಚರಿಸಲಾಗುವುದು ಇಂದಿನ ಯುವ ಪೀಳಿಗೆಯೇ ಮುಂದಿನ ಪ್ರತಿನಿಧಿಗಳು ಎಂಬ ದ್ಯೇಯ ವಾಕ್ಯ ಇಟ್ಟುಕೊಂಡು ಈ ದಿನವನ್ನು ಆಚರಣೆ ಮಾಡಲಾಗುತದೆ . ಗುರಿ ಮುಂದೆ ಗುರು ಹಿಂದೆ ಎಂಬ ಮಾತಿನಂತೆ ತಮ್ಮ ದಿನದ ಅಂಗವಾಗಿ ಯುವ ಜನತೆಯ ದಿನವೆಂದು ಹೇಳಿದವರೇ ಸ್ವಾಮಿ ವಿವೇಕಾನಂದರು.
ಸಾಧನೆಯ ಹಾದಿಯಲ್ಲಿರುವ ಇಂದಿನ ಯುವಕರು ವಿವೇಕಾನಂದರು ಕಂಡ ಕನಸಿನ ಗೊಂಬೆಗಳಾಗಿದ್ದಾರೆ. ವಿವೇಕಾನಂದರ ಕನಸು ಯುವಜನತೆಯು ಸುಮ್ಮನೆ ಓಡಾಟ, ಸಮಯ ವ್ಯರ್ಥ ಮಾಡುತ್ತಾ ತಿರುಗಾಡುತಿರುವ ಯುವ ಜನತೆ ಮುಂದಿನ ದಿನಗಳಲ್ಲಿ ಸಮಯ ವ್ಯರ್ಥವಾಗಿ ಕಳೆಯಬಾರದೆಂದು ಅವರ ಕಳಕಳಿಯಾಗಿತ್ತು. ಈ ಭೂಮಿ ಮೇಲೆ ಜನ್ಮ ತಾಳಿದವನು ಏನಾದರು ಸಾಧಿಸಬೇಕೆಂಬ ಹುಮ್ಮಸ್ಸು ನಮ್ಮಲಿರಬೇಕೆಂದು ಹೇಳಿದರು.ಮುಂದಿನ ದಿನಗಳ ಬದುಕಿನಲ್ಲಿ ಕಾಲೀಡುತ್ತಾ ಹೋಗುವ ಈ ಯುವ ಜನತೆ ನೋಡಿದಾಗಲೆ ವಿವೇಕಾನಂದರು ಕಂಡ ಯುವ ಭಾರತ ನೆನಪಾಗುತ್ತೆ.(ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ) ಎಂಬ ವಿವೇಕಾನಂದರ ಘೋಷಣೆ ಕೂಡ ಅರಿವಾಗುವದು. ಯುವ ಜನತೆಗೆ ಸ್ಫೂರ್ತಿಯಾದ ಮಹಾನ್ ವ್ಯಕ್ತಿ ಎಂದರೆ ಸ್ವಾಮಿ ವಿವೇಕಾನಂದರು ಎಂದು ಹೇಳಿದರೆ.
ತಪ್ಪಾಗಲಾರದು ಹಾಗೆ ಸುಭದ್ರ ಭಾರತ ನಿರ್ಮಾಣವಾಗುವುದು ಯಾವದಕ್ಕೂ ಭಯ ಪಡದೆ ಹೊರಡುವ ಯುವ ಜನತೆ ಇಂದ ಮಾತ್ರ ಸಾಧ್ಯ. ಇಂದಿನ ಯುವ ಜನತೆಯ ಮನಸ್ಥಿತಿ ಎಂದರೆ ಭೂಮಿಗೆ ಬಂದಿದ್ದೇವೆ ಎಂದ ಮೇಲೆ ಒಂದಲ್ಲ ಒಂದು ದಿನ ಭೂಮಿಯ ಒಳಗೆ ಹೋಗಲೇಬೇಕು ಅದಕ್ಕೂ ಮುಂಚೆ ನಮ್ಮ ನೆನಪು ಸದಾ ಇರಬೇಕೆಂದರೇ ಏನಾದರು ಸಾಧಿಸಬೇಕು ಅದು ಭಿನ್ನವಾಗಿರಬೇಕು ಹಾಗೆ ಹೊಸದನ್ನ ಮಾಡಬೇಕು ಅಂದಾಗ ಮಾತ್ರ ಜೀವನ ಸಾರ್ಥಕವಾಗುತ್ತೆ. ವಿವೇಕಾನಂದರು ಒಂದು ಮಾತು ಹೇಳುತ್ತಾರೆ ಅದೇನೆಂದರೆ ನನಗೆ ನನ್ನ ದೇಶದ ಮೇಲೆ ವಿಶೇಷವಾಗಿ ದೇಶದ ಯುವಕರ ಮೇಲೆ ಅಗಾದ ಪ್ರಮಾಣದ ವಿಶ್ವಾಸವಿದೆ ಎಂಬ ಮಾತು ಹೇಳುತ್ತಾರೇ. ಯಾವುದಕ್ಕೂ ಹೆದರಬೇಡಿ, ಭಯಗೊಂಡ ಕ್ಷಣಕ್ಕೆ ನೀವು ಯಾರು ಅಲ್ಲ ದುಃಖಕ್ಕೆ ಭಯವೆ ಅತೀ ದೊಡ್ಡ ಕಾರಣ, ನಿರ್ಭಯತೆಯಿಂದ ಒಂದೇ ಕ್ಷಣದಲ್ಲಿ ಸ್ವರ್ಗವನ್ನು ಧರೆಗಿಳಿಸಬಹುದು ಎಂದು ಹೇಳುತ್ತಾರೆ.
ಮುಖ್ಯವಾಗಿ ಹೇಳಬೇಕೆಂದರೆ ನಮ್ಮ ಭಾರತ ದೇಶಕ್ಕೆ ಬೇಕಾಗಿರುವುದು ಕಬ್ಬಿಣದಂತ ಮಾಂಸಕಂಡಗಳು, ಉಕ್ಕಿನಂತ ನರಗಳಿರುವ ವ್ಯಕ್ತಿಗಳು ಅಂದಾಗ ಮಾತ್ರ ವಿವೇಕಾನಂದರ ಕನಸು ನನಸಾಗಿಸಲು ಸಾಧ್ಯ. ಯುವಜನತೆಗೆ ಹಲವಾರು ರೀತಿಯ ವ್ಯಕ್ತಿಗಳ ಪರಿಚಯವಿದೆ ಆದರೆ ಅದರಲ್ಲಿ ಯುವಕರಿಗೆ ಮಾದರಿಯಾಗಿರುವ. ಮುಖ್ಯವಾಗಿ ಸ್ವಾಮಿ ವಿವೇಕಾನಂದರು ಮಾತ್ರ ಎಂದು ಹೇಳಬಹುದು.ಒಟ್ಟಾರೆಯಾಗಿ ಮುಂದಿನ ದಿನಗಳಲ್ಲಿ ಭವ್ಯ ಭಾರತ ನಿರ್ಮಾಣ ಮಾಡುವ ಜವಾಬ್ದಾರಿ ಯುವಕರದಾಗಿದೆ. ಯುವಕರು ಯಶಸ್ಸನ್ನು ಪಡೆಯಲು ದ್ರಡ ಪ್ರಯತ್ನ ಮಾಡಬೇಕು, ಅಪಾರ ಇಚ್ಚಾ ಶಕ್ತಿ ಹೊಂದಿರಬೇಕು, ನಾನು ಸಮುದ್ರವನ್ನೇ ದಾಟುತ್ತೇನೆ ಎಂಬ ವಿಶ್ವಾಸ ಹೊಂದಿರಬೇಕು ಸಂಕಲ್ಪ ದ ಮುಂದೆ ಪರ್ವತಗಳೆ ಪುಡಿ ಪುಡಿಯಾಗುತ್ತವೆ. ಇಂತಹ ಶಕ್ತಿಯನ್ನು ಗಟ್ಟಿ ಗುಂಡಿಗೆ ಹೊಂದಿರುವವರು ಮಾತ್ರ ಹೊಂದಿರುತ್ತಾರೆ. ಕಷ್ಟ ಪಟ್ಟು ದುಡಿಯುವ ಛಲ ಹೊಂದಿರುವ ಪ್ರತಿ ಯೊಬ್ಬರು ಗುರಿ ಸೇರುವುದು ಖಂಡಿತ. ಶ್ರಮ ಪಟ್ಟರೆ ಸುಖವಾಗಿಬಾಳಲು ಮುಕ್ತ ಅವಶ್ಯಕವಿದೆ.
ಸ್ವಾಮಿವಿವೇಕಾನಂದರ ಜನ್ಮ ದಿನವನ್ನು ರಾಷ್ಟ್ರೀಯ ಯುವದಿನವೆಂದು ಆಚರಿಸಲಾಗುವುದು. ವಿವೇಕಾನಂದರು ಯುವ ಜನತೆಯ ಆದರ್ಶನಂದರಾಗಿದ್ದರು ಅವರು ತಮ್ನ ಜೀವನ ಸಂದೇಶದಲ್ಲಿ ಯುವಕರಿಗೆ ವಿಶೇಷವಾದ ಸಂದೇಶಗಳನ್ನು ನೀಡಿದ್ದಾರೆ. ಸ್ವಾಮಿ ವಿವೇಕಾನಂದರು ಹಳೆಯ ವಸ್ತುಗಳಲ್ಲಿ, ಹಳೆಯ ಪದ್ದತಿಯಲ್ಲಿ, ಸಂಪ್ರದಾಯಗಳಲ್ಲಿ ದುರ್ಬಲ ಅಂಶಗಳು ಎತ್ತಿ ಹಿಡಿದು ಹಳೆಯ ಪದ್ಧತಿಯಲ್ಲಿ ಸಾವಿರಾರು ಹೊಸ ನಿರ್ಮಾಣಕ್ಕೆ ಸಾಕಷ್ಟು ಜೀವ ಶಕ್ತಿ ಇದೆ ಎಂದು ತಿಳಿಸಿದರು. ಯುವಜನತೆಗೆ ಇವರು ಆಶಾವಾದಿಯಾಗಿದ್ದರು ಉಜ್ವಲ ಭವಿಷ್ಯ ಈ ಭಾರತದ ಸ್ಪಷ್ಟ ಕಲ್ಪನೆ ಅವರಿಗಿತ್ತು. ಸ್ವಾಮಿ ವಿವೇಕಾನಂದರು ಒಂದು ಮಾತು ಹೇಳುತ್ತಾರೆ ಅದೇನೆಂದರೆ ವೇದಾಂತ ತತ್ವವು ಆಶಾವಾದವು ಅಲ್ಲ ನಿರಾಶಾವಾದವು ಅಲ್ಲ ಅದು ಒಂದು ಉಭಯ ದೃಷ್ಟಿಗಳನ್ನು ವ್ಯಕ್ತಗೊಳಿಸುವುದಾಗಿದೆ ಎಂದಿದ್ದಾರೆ.
ಈ ಪ್ರಪಂಚದಲ್ಲಿ ಒಳಿತು ಕೆಡುಕುಗಳ ಮಿಶ್ರಣ ಅಡಗಿದೆ. ಇಂದಿನ ಯುವಕರಿಗೆ ಉಪನ್ಯಾಸಕರು ತಮ್ಮ ಬುದ್ದಿ ಶಕ್ತಿ ಇಂದ ಅಲೋಚಿಸಲು ಪ್ರೋತ್ಸಹ ನೀಡಬೇಕು ಅಂದಾಗ ಮಾತ್ರ ಸ್ವತಂತ್ರ ಆಲೋಚನೆಯ ಮನೋಭಾವನೆ ಬೆಳೆಯಲು ಸಾಧ್ಯವೆಂದು ಹೇಳಿದರು. ಸ್ವತಂತ್ರ ಆಲೋಚನೆಯ ಪ್ರಭಾವವೆ ಇಂದಿನ ಭಾರತದಲ್ಲಿ ಅವನತಿಗೆ ಕಾರಣ.ಪ್ರತಿಯೊಬ್ಬರೂ ಒಂದು ಉತ್ತಮ ವ್ಯಕ್ತಿಯಗಲು ಪ್ರಯತ್ನಿಸಬೇಕು ಬಲಿಷ್ಠರಾಗಿ ತಮ್ಮ ಕಾಲಿನ ಮೇಲೆ ತಾವೇ ನಿಂತುಕೊಂಡು ತಮ್ಮ ಭಾವನೆಗಳನ್ನು ತಾವೇ ಯೋಚಿಸುವಂತ ಗುಣವಂತರಾಗಬೇಕು. ಆತ್ಮ ಶ್ರದ್ಯೆಯ ಆದರ್ಶ ನಮಗೆ ಬಹಳ ಸಹಕಾರಿಯಾಗುತ್ತೆ. ಯುವಕರಲ್ಲಿ ಅಸಾಧ್ಯ ಶಕ್ತಿ ಹೊಂದಿರುತ್ತಾರೆ ಆದರೆ ಅದನ್ನು ಹೊರ ಹಾಕುವ ಶಕ್ತಿ ಅಪಾರವಾದದು. ಯುವಜನತೆ ತಮ್ಮನ್ನು ತಾವು ಈ ಸಮಾಜದಲ್ಲಿ ತೊಡಗಿಸಿಕಿಳ್ಳುವುದರ ಮೂಲಕ ಸಮಾಜದೊಡನೆ ಒಂದು ಅರ್ಥ ಪೂರ್ಣ ಸಂಬಂಧ ಹೊಂದಲು ಸಾಧ್ಯವಾಗುತ್ತದೆ.
ಭಾರತದ ಇಡೀ ಜಗತ್ತನ್ನೇ ತನ್ನತ ತಿರುಗಿ ನೋಡುವಂತೆ ಮಾಡಿದ ವಿವೇಕಾನಂದರ ಆದರ್ಶ ಮಾರ್ಗಗಳು. ವಿವೇಕಾನಂದರು ಸಾಕಷ್ಟು ಕವನಗಳು ರಚಿಸಿದ್ದಾರೆ ಒಂದು ಮಾತು ಹೇಳುತ್ತಾರೆ ಅದೇನೆಂದರೆ.
“ಸಾಧನೆ ಇಲ್ಲದೆ ಸತ್ತರೆ
ಸಾವಿಗೆ ಅವಮಾನ
ಆದರ್ಶ ಇಲ್ಲದೆ ಬದುಕುದರೆ
ಬದುಕಿಗೆ ಅವಮಾನ”
ಅಂದರೆ ಪ್ರತಿಯೊಬ್ಬರೂ ಈ ಭೂಮಿಗೆ ಜನ್ಮ ತಾಳಿದರೆ ಎಂದ ಮೇಲೆ ತಮ್ನ ಹೆಸರು ಶಾಶ್ವತವಾಗಿ ಎಲ್ಲರಿಗೂ ಪರಿಚಿತವಾಗಿರಬೇಕೆಂದರೆ ಅದಕ್ಕೆ ತಕ್ಕಂತೆ ಏನಾದರು ಒಂದು ಸಾಧನೆ ಮಾಡಬೇಕು ಎಂಬ ಮಾತನ್ನು ಹೇಳುತ್ತಾರೆ. ಒಟ್ಟಾರೆಯಾಗಿ ಯುವಕರಿಗೆ ಒಂದು ಸ್ಫೂರ್ತಿದಾಯಕವಾದ ಶ್ರೇಷ್ಠ ಜೀವನಾದರ್ಶ ಮತ್ತೊಬರಿಲ್ಲ ಎಂದು ಹೇಳಬಹುದು.
ಕಾಶಿಬಾಯಿ. ಸಿ. ಗುತ್ತೇದಾರ ಪಾಳಾ,
ಪತ್ರಿಕೋದ್ಯಮ ವಿದ್ಯಾರ್ಥಿನಿ, ಶರಣಬಸವ ವಿಶ್ವ ವಿದ್ಯಾಲಯ ಕಲಬುರಗಿ