ಕಲಬುರಗಿ: 15 ಮತ್ತು 16ರಂದು ನಗರದ ವಿನಟೇಜ್ ಫಂಕ್ಷನ್ ಹಾಲನಲ್ಲಿ 2019ನಲ್ಲಿ ಹಜ್ ಯಾತ್ರೆಗೆ ತೆರಳಲಿರುವ ಹೈ.ಕ ಭಾಗದ 5 ಜಿಲ್ಲೆಗಳ ಸುಮಾರು 1700 ಹಜ್ ಯಾತ್ರಿಗಳಿಗೆ ಮರ್ಕಜಿ ಹಜ್ ಕಮಿಟಿ ವತಿಯಿಂದ ಎರಡು ದಿನಗಳ ತರಬೇತಿ ಕಾರ್ಯಗಾರ ಆಯೋಜಿಸಲಾಯಿತು.
ಕಾರ್ಯಗಾರವನ್ನು ಡಾ.ಅಫಜಲೋದ್ದಿನ್ ಜುನೈದಿ ಸಿರಾಜ್ ಬಾಬಾ ಅವರು ಕಾರ್ಯಕ್ರಮ ಉದ್ಘಾಟಿಸಿ ಚಾಲನೆ ನೀಡಿದರು. ತರಬೇತಿಯಲ್ಲಿ ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ ಮತ್ತು ಆದೋನಿ ಜಿಲ್ಲೆಗಳಿಂದ ಹಜ್ ಯಾತ್ರೆಗೆ ತೆರಳಲಿರುವ ನೂರಾರು ಹಜ್ ಯಾತ್ರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಈ ಕಾರ್ಯಕ್ರಮದಲ್ಲಿ ಮರ್ಕಜ್ ಹಜ್ ಕಮಿಟಿಯ ಅಧ್ಯಕ್ಷ ಸಯದ್ ಮಝರ್ ಹುಸೇನ್, ಉಪಾಧ್ಯಕ್ಷ ಡಾ.ಅಶಫಾಕ್ ಅಹ್ಮದ್ ಚುಲಬುಲ್, ಕಾರ್ಯದರ್ಶಿ ಜಾಫರ್ ಹುಸೇನ್, ಜೈನೋದ್ದಿನ್ ಸಿನ್ನಿಫರೋಶ್, ಸಯದ್ ಝಾಕಿರ್ ಹುಸೇನ್ ಸೇರಿದಂತೆ ಮುಂತಾದವರು ಇದ್ದರು.