ಕೋಲಾರ: ಜಿಲ್ಲೆ ಮತ್ತು ತಾಲೂಕಿನ ಬೆಳಮಾರನಹಳ್ಳಿ ಉಪ ಕೇಂದ್ರ ವ್ಯಾಪ್ತಿಯ ವಿಶ್ವನಾಥಪುರದಲ್ಲಿ ನರಸಾಪುರ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಆರೋಗ್ಯವಂತ ಶಿಶು ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮವನ್ನು ಗ್ರಾಮ ಪಂಚಾಯ್ತಿಯ ಸದಸ್ಯರಾದ ರೇಣುಕಾ ರಾಜಪ್ಪ ರವರು ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಉಪಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಸಿ ಗೀತಾ ರವರು ಎದೆ ಹಾಲಿನ ಮಹತ್ವ. ಚುಚ್ಚು ಮದ್ದಿನ ಕಾರ್ಯಕ್ರಮ. ಪೌಷ್ಟಿಕ ಸಮತೋಲನ ಆಹಾರ ಕುಟುಂಬ ಕಲ್ಯಾಣ ಯೋಜನೆಯ ವಿಧಾನಗಳು ಹಾಗೂ ಎ ಬಿ ಎ ಆರ್ ಕೆ ಈ ಸಂಜೀವಿನಿ ಒಪಿಡಿ ಮತ್ತು ಕುಷ್ಟರೋಗ ಮಸಾಚಾರಣೆ ಕುರಿತು ಆರೋಗ್ಯ ಶಿಕ್ಷಣ ನೀಡಿದರು. ಹಾಗೂ ಆರು ತಿಂಗಳು ತುಂಬಿದ ಮಕ್ಕಳಿಗೆ ಬಹುಮಾನಗಳನ್ನು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಉಪಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಸಿ ಗೀತಾ. ಗ್ರಾಮ ಪಂಚಾಯ್ತಿಯ ಸದಸ್ಯರಾದ ರೇಣುಕಾ ರಾಜಪ್ಪ. ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರಾದ ಅಂಬಿಕಾ. ಆಶಾ ಕಾರ್ಯಕರ್ತೆಯರು. ಹಾಗೂ ಅಂಗನವಾಡಿ ಕಾರ್ಯ ಕರ್ತೆಯರು. ಹಾಜರಿದ್ದರು.